ರಾಮಾಚಾರಿಗೆ ಚಾರು ಇದ್ದಂತೆ ಕಿಟ್ಟಿಗೊಬ್ಬಳು ರುಕ್ಮಿಣಿ!... ಈ ಸುಂದರಿ ರಿಯಲ್ ಲೈಫಲ್ಲಿ ಸಖತ್ ಬೋಲ್ಡ್ & ಬ್ಯೂಟಿಫುಲ್

Published : Sep 27, 2024, 03:29 PM ISTUpdated : Sep 27, 2024, 03:33 PM IST

ರಾಮಾಚಾರಿ ಧಾರಾವಾಹಿಯಲ್ಲಿ ಹೊಸ ಎಂಟ್ರಿಯಾಗಿದ್ದು, ಕೃಷ್ಣನಿಗಾಗಿ ಕಾದಿರುವ ರುಕ್ಮಿಣಿ ಪಾತ್ರದಲ್ಲಿ ಮುದ್ದು ಮುಖದ ಬೆಡಗಿ ದೇವಿಕಾ ಭಟ್ ನಟಿಸುತ್ತಿದ್ದಾರೆ.   

PREV
18
ರಾಮಾಚಾರಿಗೆ ಚಾರು ಇದ್ದಂತೆ ಕಿಟ್ಟಿಗೊಬ್ಬಳು ರುಕ್ಮಿಣಿ!... ಈ ಸುಂದರಿ ರಿಯಲ್ ಲೈಫಲ್ಲಿ ಸಖತ್ ಬೋಲ್ಡ್ & ಬ್ಯೂಟಿಫುಲ್

ರಾಮಾಚಾರಿ (Ramachari) ಧಾರಾವಾಹಿಯಲ್ಲಿ ಸಖತ್ ದೊಡ್ಡದಾದ ಟ್ವಿಸ್ಟ್ ಸಿಕ್ಕಿರೋದು ನಿಜಾ. ಅದು ಒಂದು ಟ್ವಿಸ್ಟ್ ಅಲ್ಲ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ ನಿರ್ದೇಶಕರು. ನಾರಾಯಣಾಚಾರ್ಯರ ಎರಡನೇ ಸಂಸಾರ ಗುಟ್ಟು ರಟ್ಟಾಗಿದೆ. ಸತ್ಯಭಾಮರನ್ನು ಹುಡುಕೋದಕ್ಕೆ ರಾಮಾಚಾರಿ ಮತ್ತು ಚಾರು ಈಗಾಗಲೇ ಹೊರಟಾಗಿದೆ. ಇದರ ಮಧ್ಯೆ ಹೊಸ ಕ್ಯಾರೆಕ್ಟರ್ ಎಂಟ್ರಿಯಾಗಿದೆ. 
 

28

ಹೌದು, ನೀವು ಈಗಾಗಲೇ ಸೀರಿಯಲ್ ನೋಡಿದ್ರೆ ಹೊಸ ಎಂಟ್ರಿ ಯಾರು ಅನ್ನೋದು ಗೊತ್ತಾಗಿರುತ್ತೆ. ರಾಮಾಚಾರಿಗೆ ಹೇಗೆ ಚಾರು ನಾಯಕಿಯೋ, ಹಾಗೆಯೇ ನಮ್ಮ ಕೃಷ್ಣನಿಗೂ ಒಬ್ಬ ನಾಯಕಿ ಬೇಡ್ವೋ ಹಾಗಾಗಿಯೇ ರುಕ್ಮಿಣಿ ಪಾತ್ರದ ಎಂಟ್ರಿಯಾಗಿದೆ. ಕೃಷ್ಣನಿಗಾಗಿ ಪ್ರತಿ ಕ್ಷಣವೂ ಕಾಯುತ್ತಿರುವ, ತನ್ನನ್ನು ಸಂಪೂರ್ಣವಾಗಿ ಕೃಷ್ಣನಿಗೆ ಮೀಸಲಿಟ್ಟೆ ಚೆಲುವೆ ರುಕ್ಮಿಣಿ. 
 

38

 ರುಕ್ಮಿಣಿ ಪ್ರವೇಶ ಕೃಷ್ಣನ ಜೀವನದಲ್ಲಿ ಹೇಗಾಯ್ತು ಅನ್ನೋದು ಈಗಾಗಲೇ ಗೊತ್ತಿರಬಹುದು ಅಲ್ವಾ? ರೌಡಿಯಾಗಿದ್ದ ಕಿಟ್ಟಿ ಆಲಿಯಾಸ್ ಕೃಷ್ಣ, ಅದೆಷ್ಟೋ ಜನರಿಂದ ಸುಲಿಗೆ ಮಾಡಿದ್ದ, ಅದನ್ನ ಬಡವರಿಗೆ ದಾನ ಮಾಡ್ತಿದ್ದ ಅನ್ನೋದು ನಿಜಾ. ರೌಡಿಯಾಗಿದ್ದಾಗ ಕೃಷ್ಣ ಮಾಡಿದ ಪಾಪ ಕೆಲಸಗಳಲ್ಲಿ ಒಂದು ರುಕ್ಮಿಣಿಯ ಅಪಹರಣ. 

48

ಮದುವೆಯಾಗಿ ಇನ್ನೊಂದು ಮನೆ ಸೇರಬೇಕಾಗಿದ್ದ ರುಕ್ಮಿಣಿಯನ್ನು, ಕೃಷ್ಣನ ಅಚಾತುರ್ಯದಿಂದಾಗಿ ಬೇರೆ ಚೌಟ್ರಿಗೆ ಹೋಗಿ ಹುಡುಗಿಯನ್ನು ಕಿಡ್ನಾಪ್ ಮಾಡಬೇಕಾದು, ಬದಲಾಗಿ ಇನ್ನೊಂದು ರುಕ್ಮಿಣಿ ಮದುವೆ ಚೌಟ್ರಿಗೆ ನುಗ್ಗಿ, ಇನ್ನೇನು ಹಸೆಮಣೆ ಏರಲು ಸಜ್ಜಾಗಿದ್ದ ರುಕ್ಮಿಣಿಯನ್ನು ಎತ್ತಿಕೊಂಡು ಕಿಡ್ನಾಪ್ ಮಾಡಿಕೊಂಡು ಬಂದಿದ್ದ. 
 

58

ಮೊದಲಿಗೆ ಕೃಷ್ಣನೆಂದ ಬರೀ ರೌಡಿಯಾಗಿದ್ದ ರುಕ್ಮಿಣಿಗೆ ನಂತರ ಅವನ ಮೇಲೆ ಪ್ರೀತಿಯಾಗಿದೆ. ಕೃಷ್ಣ ಹೆಚ್ಚು ಮಾತನಾಡದೆ ಇದ್ದರೂ, ಅವನಿಗಾಗಿ ಪ್ರತಿಕ್ಷಣ ಕಾಯುವ, ಪರಿತಪಿಸುವ ಮುದ್ದು ಹುಡುಗಿ ರುಕ್ಮಿಣಿ ಪಾತ್ರದಲ್ಲಿ ನಟಿಸುತ್ತಿರುವ ಸುಂದರಿಯ ಹೆಸರು ದೇವಿಕಾ ಭಟ್ (Devika Bhat). ಇವರ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

68

ದೇವಿಕಾ ಭಟ್ ಸೋಶಿಯಲ್ ಮೀಡಿಯಾವನ್ನ ನೋಡಿದ್ರೆ, ಇವರೊಬ್ಬ ಡ್ಯಾನ್ಸರ್, ರಂಗಭೂಮಿ ಕಲಾವಿದೆ, ಮಾಡೆಲ್ ಅನ್ನೋದು ಗೊತ್ತಾಗುತ್ತೆ. ಇವರ ಇನ್’ಸ್ಟಾಗ್ರಾಂ ಪೇಜ್ ತುಂಬೆಲ್ಲಾ ಸಖತ್ ಮಾಡರ್ನ್ ಆಗಿ, ಟ್ರೆಡಿಶನಲ್ ಆಗಿ ಫೋಟೊ ಶೂಟ್ ಮಾಡಿಸಿರುವ ಫೋಟೊಗಳನ್ನ ಕಾಣಬಹುದು. ರಾಮಾಚಾರಿಯ ರುಕ್ಮಿಣಿಯಷ್ಟು ಸಿಂಪಲ್ ಹುಡುಗಿ ಅಲ್ವೇ ಅಲ್ಲ ದೇವಿಕಾ. 
 

78

ದೇವಿಕಾ ಈಗಾಗಲೇ ಒಂದು ಸುಂದರವಾದ ಪ್ರೇಮ ಕಾವ್ಯವನ್ನು ಹೊಂದಿರುವ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಟಿಫನ್ ರೂಮ್ ಸೀರಿಯಲ್ ನಾಯಕ ವಚನ್ ಹೊಸಮಟ್ ಜೊತೆ ರೋಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.  ಇವರು ಕ್ವೀನ್ಸ್ ಪ್ರೀಮಿಯರ್ ಲೀಗ್ (queens premier league)  ಭಜರಂಗಿ ಟೀಮ್ ಬ್ರಾಂಡ್ ಅಂಬಾಸೀಡರ್ ಕೂಡ ಆಗಿದ್ರು. 
 

88

ಇನ್ನು ದೇವಿಕಾ ಪ್ರೊಫೈಲ್ ನೋಡಿದ್ರೆ ಇವರು ರಂಗಭೂಮಿ ಕಲಾವಿದೆಯೂ ಹೌದು ಅನಿಸುತ್ತೆ,  ರಾಮಾಯಣಕ್ಕೆ ಸಂಬಂಧಿಸಿದ ನೃತ್ಯ ರೂಪಕದಲ್ಲಿ ದೇವಿಕಾ ಸೀತಾಮಾತೆಯಾಗಿ ಕಂಗೊಳಿಸಿರೋ ಫೋಟೊವನ್ನು ಇವರ ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಅಷ್ಟೇ ಅಲ್ಲ ಈಕೆಯೊಬ್ಬ ಅದ್ಭುತ ಕಥಕ್ ನೃತ್ಯಗಾರ್ತಿ (Kathak Dancer) ಕೂಡ ಹೌದು. ಸದ್ಯಕ್ಕೆ ಕನ್ನಡ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡೋಕೆ ರುಕ್ಮಿಣಿಯಾಗಿ ರಾಮಾಚಾರಿ ತಂಡಕ್ಕೆ ಸೇರಿದ್ದಾರೆ. ಕೃಷ್ಣ -ರುಕ್ಮಿಣಿ ಯಾವಾಗ ಒಂದಾಗ್ತಾರೆ ಕಾದು ನೋಡಬೇಕು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories