Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

Published : Apr 02, 2026, 10:59 PM IST

Colors Kannada Pavithra Bandhana Serial: ಪವಿತ್ರ ಬಂಧನ ಧಾರಾವಾಹಿಯಲ್ಲಿ ತಮ್ಮಯ್ಯ ಎಂದೇ ಫೇಮಸ್‌ ಆಗಿರೋ ತಿಲಕ್‌ ದೇಶಮುಖ್‌ ಅಲಿಯಾಸ್‌ ಯಶಸ್‌ ಕೃಷ್ಣ ಅವರ ಪಾತ್ರ ಮುಕ್ತಾಯವಾಗಿದೆ. ಇದನ್ನು ವೀಕ್ಷಕರು ನೋಡಿ ಬೇಸರ ಮಾಡಿಕೊಂಡಿದ್ದರು. ಈ ಪಾತ್ರ ಮರಳಿ ಬರಲಿದೆಯಾ? 

PREV
15
ತಿಲಕ್‌ ಪಾತ್ರ ಮುಕ್ತಾಯ!

ಇನ್ನೇನು ಪವಿತ್ರಾ ಜೊತೆ ಮದುವೆ ಆಗಬೇಕಿದ್ದ ತಿಲಕ್ ಅಪಘಾತವೊಂದರಲ್ಲಿ ಸಾಯುತ್ತಾನೆ. ಮದುವೆ ದಿನವೇ ತಿಲಕ್‌ ಸಾಯುತ್ತಾನೆ. ಇದು ವೀಕ್ಷಕರಿಗೆ ಬೇಸರ ತಂದಿದೆ. ಈ ಪಾತ್ರ ಮತ್ತೆ ಮರಳಿ ಬರಬೇಕು ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ಯಶಸ್‌ ಕೃಷ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

25
ಈ ವಿಷಯ ಮೊದಲೇ ಗೊತ್ತಿತ್ತು

ಪವಿತ್ರ ಬಂಧನ ಧಾರಾವಾಹಿಯಲ್ಲಿ ಅಧಿಕೃತವಾಗಿ ನನ್ನ ಪಯಣ ಮುಗಿದಿದೆ. ಈ ಪಾತ್ರ ಇಷ್ಟೇ ದಿನ ಬರುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಇಷ್ಟು ಜನರು ಇಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಕನೆಕ್ಟ್‌ ಆಗುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಯಶಸ್‌ ಕೃಷ್ಣ ಹೇಳಿದ್ದಾರೆ.

35
ತಿಲಕ್‌ ಪಾತ್ರ ಹೇಗಿದೆ?

ತಿಲಕ್‌ ತುಂಬ ಲವ್‌ಲೀ ಹುಡುಗ, ಅಪ್ಪ-ಅಮ್ಮ ಸೇರಿದಂತೆ ಎಲ್ಲರಿಗೂ ಕನೆಕ್ಟ್‌ ಆಗಿದ್ದ ಹುಡುಗ. ನಮ್ಮ ಮನೆಯಲ್ಲಿ ಈ ರೀತಿ ಹುಡುಗ ಇರಬೇಕು, ಈ ರೀತಿ ಲವ್ವರ್‌ ಇರಬೇಕು ಎನ್ನುವ ಪಾತ್ರ ಇದಾಗಿದೆ ಎಂದಿದ್ದಾರೆ ಯಶಸ್.‌

45
ವೀಕ್ಷಕರು ಐಡಿಯಾ ಕೊಡ್ತಿದ್ದಾರೆ

ವೀಕ್ಷಕರೇ ಈಗ ನಿರ್ದೇಶಕರಾಗಿರುತ್ತಾರೆ, ಮುಂದೆ ತಿಲಕ್‌ನನ್ನು ಸೀರಿಯಲ್‌ಗೆ ಕರೆಸಿ ಎಂದು ಸ್ಕ್ರಿಪ್ಟ್‌ ಕೊಡುತ್ತಿದ್ದಾರೆ. ಅವಳಿ ಪಾತ್ರ ಇದ್ದು, ಅವನು ವಿದೇಶದಿಂದ ಮತ್ತೆ ಸೀರಿಯಲ್‌ಗೆ ಬರುವ ಹಾಗೆ, ದೆವ್ವ ಆಗುವ ಹಾಗೆ ಮಾಡಿ ಎಂದೆಲ್ಲ ಸೀರಿಯಲ್‌ ಡೈರೆಕ್ಟರ್‌ಗೆ ಐಡಿಯಾ ಕೊಡುತ್ತಿದ್ದಾರೆ. ಇದನ್ನೆಲ್ಲ ನಮ್ಮ ನಿರ್ದೇಶಕರು ತಗೊಳ್ಳಬೇಕು ಎಂದು ಯಶಸ್‌ ಕೃಷ್ಣ ಹೇಳಿದ್ದಾರೆ.

55
ಮೊದಲ ಪ್ರಯತ್ನದಲ್ಲೇ ಯಶಸ್ಸು

ಇಷ್ಟುದಿನಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಯಶಸ್‌ ಅವರು ಸೀರಿಯಲ್‌ನಲ್ಲಿ ನಟಿಸಿದ್ದರು. ಇದು ಅವರ ಮೊದಲ ಪ್ರಯತ್ನವಾಗಿತ್ತು. ತಿಲಕ್‌ ಪಾತ್ರಕ್ಕೆ ಅವರು 86ನೇ ವ್ಯಕ್ತಿಯಾಗಿ ಆಡಿಷನ್‌ ಕೊಟ್ಟು ಆಯ್ಕೆಯಾಗಿದ್ದರು. ಈಗ ಈ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories