Amruthadhaare Serial: ಕರ್ಮ ಬಿಡ್ಲಿಲ್ಲ, JD ತಂತ್ರಕ್ಕೆ ತಿರುಗು ಮಂತ್ರ ಹಾಕಿದ ಮಲ್ಲಿ; ತತ್ತರಿಸಿ ಹೋದ KD

Published : Apr 02, 2026, 10:35 PM IST

Amruthadhaare Kannada Serial Update: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೀವನ ಹಾಳು ಮಾಡಬೇಕು ಎಂದುಕೊಂಡಿದ್ದ ಜಯದೇವ್‌ಗೆ ಸಖತ್‌ ಟ್ವಿಸ್ಟ್‌ ಸಿಕ್ಕಿದೆ. ಈ KD ಜೇಡಿಯೇ ನಲುಗುವಂಥ ಸುದ್ದಿ ಸಿಕ್ಕಿದೆ. ಅಷ್ಟೇ ಅಲ್ಲದೆ ಅವನಿಗೆ ಒಂದಲ್ಲ, ಎರಡು ಆಘಾತಕಾರಿ ಸುದ್ದಿ ಸಿಕ್ಕಿದೆ. 

PREV
15
ಜೆಡಿ ಪ್ಲ್ಯಾನ್‌ ಬೇರೆ ಇತ್ತು!

ಹೌದು, ಸುನೀಲ್‌ ಎನ್ನುವವನಿಗೆ ಮೊದಲೇ ಹೇಳಿ ಮಲ್ಲಿಯನ್ನು ಲವ್‌ ಮಾಡಬೇಕು ಎಂದು ಹೇಳಿದ್ದನು. ಇದರಂತೆ ಸುನೀಲ್‌ ಕೂಡ ಮಲ್ಲಿಯನ್ನು ಲವ್‌ ಮಾಡಿ, ಮದುವೆ ಹಂತಕ್ಕೆ ಬಂದಿತ್ತು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎದ್ದು ಬರಬೇಕು, ಆ ಮದುವೆ ನಿಲ್ಲಬೇಕು, ಮಲ್ಲಿಗೆ ಅವಮಾನ ಆಗಬೇಕು ಎಂದು ಜೆಡಿ ಪ್ಲ್ಯಾನ್‌ ಮಾಡಿದ್ದನು. ಆದರೆ ಆಗಿದ್ದೇ ಬೇರೆ.

25
ಮಲ್ಲಿ ಎದುರು ಕೆಡಿ ಅಬ್ಬರ

ಮದುವೆ ಆಗುತ್ತಿದ್ದಂತೆ ಸುನೀಲ್‌, ಮಲ್ಲಿ ಇಬ್ಬರೂ ಕೆಡಿ ಮನೆಗೆ ಬಂದರು. ಆಗ ಈ ಮದುವೆ ನಾಟಕ, ಈಗ ಸುನೀಲ್‌ ವಿದೇಶಕ್ಕೆ ಹೋಗ್ತಾನೆ, ನೀನು ಸಮಾಜದಲ್ಲಿ ಹೇಗೆ ತಲೆ ಎತ್ತುಕೊಂಡು ಹೋಗುತ್ತೀಯಾ ಎಂದು ಕೆಡಿ ಮಲ್ಲಿಗೆ ಹೇಳಿದ್ದಾನೆ. ಆರಂಭದಲ್ಲಿ ಇದನ್ನು ಕೇಳಿ ಅತ್ತಂತೆ ನಟಿಸಿದ್ದ ಮಲ್ಲಿ, ಆಮೇಲೆ ಸತ್ಯಾಂಶವನ್ನು ಹೇಳಿದ್ದಾಳೆ.

35
ಗೌತಮ್‌ ಮುಂದೆ ಸತ್ಯ ಬಾಯಿಬಿಟ್ಟ ಸುನೀಲ್

ಹೌದು, ಮಲ್ಲಿ, ಸುನೀಲ್‌, ಭೂಮಿ, ಗೌತಮ್‌ ಎಲ್ಲರೂ ಸೇರಿಕೊಂಡು ಜೆಡಿಗೆ ಶಾಕ್‌ ಕೊಟ್ಟಿದ್ದಾರೆ. ಮಲ್ಲಿಯನ್ನು ನೋಡಿ ಮೊದಲೇ ಪ್ರೀತಿಸಿದ್ದ ಸುನೀಲ್‌, ಜೆಡಿಗೆ ಶಾಕ್‌ ಕೊಟ್ಟಿದ್ದಾನೆ. ಜೆಡಿಯಿಂದ ಮಲ್ಲಿ ಲೈಫ್‌ ಹಾಳಾಗುತ್ತದೆ ಎಂದು ಅವನಿಗೆ ಮೊದಲೇ ಗೊತ್ತಿತ್ತು, ಹೀಗಾಗಿ ಅವನು ಜೆಡಿ ಮುಂದೆ ನಾಟಕ ಮಾಡಿದ್ದನು, ಆದರೆ ಮೊದಲೇ ಅವನು ಮಲ್ಲಿಯನ್ನು ಪ್ರೀತಿಸಿದ್ದನು. ಇದನ್ನು ಅವನು ಭೂಮಿ, ಗೌತಮ್‌ ಮುಂದೆ ಹೇಳಿದ್ದನು. ಕೊನೆಗೆ ಈ ವಿಷಯ ಗೊತ್ತಾಗಿ ಜೆಡಿಗೆ ಶಾಕ್‌ ನೀಡಿದೆ.

45
ಉಲ್ಟಾ ಹೊಡೆದ ಸುನೀಲ್

ಇನ್ನೊಂದು ಕಡೆ ಮಲ್ಲಿ ಯುಪಿಎಸ್‌ ಪರೀಕ್ಷೆ ಪಾಸ್‌ ಆಗಿದ್ದಾಳೆ, ಶೀಘ್ರದಲ್ಲೇ ಅವಳು ಐಪಿಎಸ್‌ ಅಧಿಕಾರಿ ಕೂಡ ಆಗಲಿದ್ದಾಳೆ. ಕಳೆದ ಐದು ವರ್ಷಗಳಿಂದ ಮಲ್ಲಿ ಜೀವನ ಹೇಗೆ ಹಾಳು ಮಾಡೋದು? ಭೂಮಿ-ಗೌತಮ್‌ ಜೀವನ ಹೇಗೆ ಹಾಳು ಮಾಡೋದು ಎಂದು ಜೆಡಿ ತಲೆ ಕೆಡಿಸಿಕೊಂಡಿದ್ದನು. ಆದರೆ ಮಲ್ಲಿ ಮಾತ್ರ ಹೇಗೆ ತಾನು ಉದ್ಧಾರ ಆಗೋದು ಎಂದು ನೋಡುತ್ತಿದ್ದಳು. ಇನ್ನೊಂದು ಕಡೆ ಜೆಡಿ ಕಂಪೆನಿಯಲ್ಲಿದ್ದವರು ಗೌತಮ್‌ ಕಂಪೆನಿಗೆ ಹೋಗಿದ್ದಾರೆ. ಅಲ್ಲಿಗೆ ಜೆಡಿ ಸಾಮ್ರಾಜ್ಯ ಅಧಃಪತನ ಆದಂತೆ.

55
ವೀಕ್ಷಕರಿಂದ ಮೆಚ್ಚುಗೆ

ಒಟ್ಟಿನಲ್ಲಿ ಈ ಎಪಿಸೋಡ್‌ ಭಾರೀ ರೋಚಕತೆಯಿಂದ ಕೂಡಿತ್ತು. ಎಲ್ಲರ ನಟನೆ, ಡೈಲಾಗ್‌ ಕೂಡ ವೀಕ್ಷಕರಿಗೆ ಇಷ್ಟ ಆಗಿದೆ. ಅದರಲ್ಲಿಯೂ ಜೆಡಿ ಮುಖ ಮಾತ್ರ ಇಂಗು ತಿಂದ ಮಂಗನಂತೆ ಆಗಿತ್ತು.

ಪಾತ್ರಧಾರಿಗಳು

ಜಯದೇವ್-‌ ರಾಣವ್‌ ಗೌಡ

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿ- ಛಾಯಾ ಸಿಂಗ್‌

ಮಲ್ಲಿ- ಅನ್ವಿತಾ ಸಾಗರ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories