46 ಮನೆ ಮಾಲೀಕ ಜೊತೆ ಜೊತೆಯಲಿ ಧಾರಾವಾಹಿ ನಟ ಶಿವಾಜಿ ಜಾಧವ್;‌ ಮೈಸೂರು ಅರಮನೆಯ ಪೀಠೋಪಕರಣವೂ ಇದೆ!

Published : Apr 18, 2026, 05:35 PM IST

Actor Shivaji Jadhav: ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶಿವಾಜಿರಾವ್ ಜಾಧವ್ ಅವರು ಸುಮಾರು 45 ಮನೆಗಳ ಮಾಲೀಕರು. ಒಟ್ಟಾರೆಯಾಗಿ 4 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಕಲಾ ಮಾಧ್ಯಮ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.  

PREV
15
ಜಾಯಿಂಟ್‌ ವೆಂಚರ್

ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲದಿಂದ ನಟಿಸುತ್ತಿರುವ ಅವರು, 'ಕೌರವ' ಸಿನಿಮಾದ "ನಿಮ್ಮ ಎಮ್ಮೆ ಹಗ್ಗ ಬಿಚ್ಕೊಂತ..." ಎಂಬ ಒಂದೇ ಒಂದು ಸಂಭಾಷಣೆಯ ಮೂಲಕ ಹೆಸರು ಮಾಡಿದ್ದರು. ಜಾಯಿಂಟ್‌ ವೆಂಚರ್‌ನಲ್ಲಿ ಈ ರೀತಿ ಅಪಾರ್ಟ್‌ಮೆಂಟ್‌ ಕಟ್ಟಲಾಗಿದೆಯಂತೆ.

25
ಅಪಾರ್ಟ್‌ಮೆಂಟ್ ಜಾಗ ಎಷ್ಟು ದೊಡ್ಡದಿದೆ?

ಮೈಸೂರಿನ ಜೆ.ಪಿ. ನಗರದಲ್ಲಿ ಶಿವಾಜಿರಾವ್ ಅವರು ಇಂದು 'ಪ್ರೈಡ್ ಬ್ಲಾಕ್' ಮತ್ತು 'ಪ್ರೈಮ್ ಬ್ಲಾಕ್' ಎಂಬ ಎರಡು ಬೃಹತ್ ಅಪಾರ್ಟ್‌ಮೆಂಟ್ ಒಡೆಯರಾಗಿದ್ದಾರೆ. ಸುಮಾರು 240/220 ಅಳತೆಯ (ಅಂದಾಜು ಮುಕ್ಕಾಲು ಎಕರೆ) ವಿಶಾಲವಾದ ಜಾಗದಲ್ಲಿ ಈ ಕಟ್ಟಡಳಿವೆ.

35
ಇಷ್ಟೆಲ್ಲ ಮನೆ ಹೇಗೆ ಬಂತು?

ಮನೆಗಳ ಬಗ್ಗೆ ಮಾತನಾಡಿರುವ ಶಿವಾಜಿ ಜಾಧವ್‌ ಅವರು, "ಬಹಳ ಕಷ್ಟಪಟ್ಟು, ಹೊಟ್ಟೆ ಬಟ್ಟೆ ಕಟ್ಟಿ ಈ ಜಾಗವನ್ನು ಉಳಿಸಿಕೊಂಡಿದ್ದೆ. ಎಂತಹ ಕಷ್ಟ ಬಂದರೂ ಜಾಗ ಮಾರಲಿಲ್ಲ. ಕೊನೆಗೆ ಬಿಲ್ಡರ್ಸ್‌ಗಳ ಜೊತೆ ಜಾಯಿಂಟ್ ವೆಂಚರ್ ಒಪ್ಪಂದ ಮಾಡಿಕೊಂಡು ಇಂದು ಈ ಸುಂದರ ಅರಮನೆಯಂತಹ ಮನೆಯಲ್ಲಿ ವಾಸವಾಗಿದ್ದೇನೆ" ಎಂದು ಹೇಳಿದ್ದಾರೆ. ಶಿವಾಜಿ ಅವರು ಸಾಕಷ್ಟು ಕೆಲಸ, ಉದ್ಯಮಗಳನ್ನು ಮಾಡಿ ಹಣ ಮಾಡಿದ್ದರಂತೆ. ಇದರಿಂದಲೇ ಮನೆ ಕಟ್ಟಿದ್ದರಂತೆ.

45
ಮನೆಯಲ್ಲಿ ರಾಜರ ಮನೆ ಪೀಠೋಪಕರಣ!

1960-70ರ ದಶಕದಲ್ಲಿ ಮೈಸೂರು ಅರಮನೆಯಲ್ಲಿ ಹರಾಜಾದ ರಾಜತ್ವದ ಕಾಲದ ಟೀಕ್ ಮತ್ತು ರೋಸ್‌ವುಡ್ ಪೀಠೋಪಕರಣಗಳನ್ನು ಅವರ ತಂದೆ ಖರೀದಿಸಿದ್ದರು. ಅವುಗಳನ್ನು ಇಂದಿಗೂ ಶಿವಾಜಿರಾವ್ ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. 

55
ವಿದೇಶದ ವಸ್ತುಗಳು ಇವೆ

ಅಮೆರಿಕ ಸೇರಿದಂತೆ ವಿದೇಶಗಳಿಂದ ತಂದ ಗಾಜಿನ ಕೆತ್ತನೆಗಳು, ಹಿತ್ತಾಳೆಯ ಕಲಾಕೃತಿಗಳು ಮತ್ತು ಅಪರೂಪದ ಲೈಟರ್‌ಗಳ ಸಂಗ್ರಹ ಅವರ ಮನೆಯಲ್ಲಿವೆ. ಅಂದಹಾಗೆ ಶಿವಾಜಿ ಅವರ ಮಗಳು ಅಮೆರಿಕದಲ್ಲಿ ಇರುತ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories