ಸಾಧನೆ ಅಂದ್ರೆ ಇದೇ..! ಒಟ್ಟಿಗೆ ದುಡಿದ್ರು, ಮದುವೆಯಾದ್ರು, ವಿದೇಶಕ್ಕೆ ಹೋದ್ರು ಮಜಾ ಭಾರತ ಜಗಪ್ಪ, ಸುಷ್ಮಿತಾ!

Published : Apr 13, 2025, 05:22 PM ISTUpdated : Apr 14, 2025, 11:03 AM IST

ಸುಷ್ಮಿತಾ, ಜಗಪ್ಪ ಅವರು ಈಗ ದುಬೈಗೆ ಹಾರಿದ್ದಾರೆ. ಅಲ್ಲಿ ಅವರು ಸುಂದರ ಸ್ಥಳಗಳ ವೀಕ್ಷಣೆ ಮಾಡೋದಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ.  

PREV
19
ಸಾಧನೆ ಅಂದ್ರೆ ಇದೇ..! ಒಟ್ಟಿಗೆ ದುಡಿದ್ರು, ಮದುವೆಯಾದ್ರು, ವಿದೇಶಕ್ಕೆ ಹೋದ್ರು ಮಜಾ ಭಾರತ ಜಗಪ್ಪ, ಸುಷ್ಮಿತಾ!

ಜಗಪ್ಪ, ಸುಷ್ಮಿತಾ ದುಬೈ ಟ್ರಿಪ್‌ ಮಾಡ್ತಿರೋದು ನೋಡಿ ಸೋಶಿಯಲ್‌ ಮೀಡಿಯಾದಲ್ಲಿ ಅನೇಕರು ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ಹೆಮ್ಮೆಪಟ್ಟುಕೊಂಡಿದ್ದಾರೆ. 

29

ಆರಂಭದಲ್ಲಿ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದ ಈ ಜೋಡಿ, ಇಂದು ಸಂಪಾದನೆ ಮಾಡಿ ದುಬೈಗೆ ಹಾರಿದೆ. ಈ ಮೂಲಕ ದುಡಿಯಬೇಕು, ದುಡಿದು ದೇಶ ತಿರುಗಬೇಕು ಎಂದು ಸಂದೇಶ ನೀಡಿದೆ.

39

ಜಗಪ್ಪ ಅವರು ಬೆಂಗಳೂರಿಗೆ ಬಂದಾಗ ಸುಷ್ಮಿತಾ ಅವರು ಸಾಕಷ್ಟು ಬೆಂಬಲ ನೀಡಿದ್ದರಂತೆ. ಇದರಿಂದ ಚಿತ್ರರಂಗದಲ್ಲಿ ಉಳಿಯಲು ಸಹಾಯ ಆಯ್ತು ಎಂದು ಜಗಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

49

ʼಮಜಾ ಭಾರತʼ ರಿಯಾಲಿಟಿ ಶೋನಲ್ಲಿ ಜಗಪ್ಪ ಹಾಗೂ ಸುಷ್ಮಿತಾ ನಟಿಸಿದ್ದರು. ಅದಾದ ಬಳಿಕ ಇವರಿಬ್ಬರು ಸಾಕಷ್ಟು ಕಾಮಿಡಿ ಶೋಗಳಲ್ಲಿ ಭಾಗವಹಿಸಿದ್ದಾರೆ.

59

ಜಗಪ್ಪ ಹಾಗೂ ಸುಷ್ಮಿತಾ ಪರಸ್ಪರ ಬೆಂಬಲ ಕೊಟ್ಟುಕೊಂಡು ಬೆಳೆದರು. ಇಂದು ಇವರಿಬ್ಬರು ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ ಎಂದು ಕನ್ನಡ ಚಿತ್ರರಂಗದಲ್ಲಿ ಫುಲ್‌ ಬ್ಯುಸಿ ಇದ್ದಾರೆ.
 

69

ಸುಷ್ಮಿತಾ ಹಾಗೂ ಜಗಪ್ಪ ಅವರ ಸ್ನೇಹ ನೋಡಿದ ಕೆಲವರು ಇವರಿಬ್ಬರು ಮದುವೆ ಆಗ್ತಾರೆ ಎಂದು ಊಹಿಸಿದ್ದರು. ಆರಂಭದಲ್ಲಿ “ನಾವು ಸ್ನೇಹಿತರು” ಎಂದು ಹೇಳಿದ್ದ ಈ ಜೋಡಿ ಕೊನೆಗೂ ಎಲ್ಲರ ಮುಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
 

79

ಸುಷ್ಮಿತಾ, ಜಗಪ್ಪ ಅವರು ಚಿತ್ರರಂಗದಲ್ಲಿ ಕಬಡ್ಡಿ, ಕ್ರಿಕೆಟ್‌ ಲೀಗ್‌ಗಳಲ್ಲಿ ಆಡುತ್ತಿದ್ದು, ಫುಲ್‌ ಆಕ್ಟಿವ್‌ ಆಗಿದ್ದಾರೆ. ಅಂದಹಾಗೆ ದುಬೈನ ಐಫೆಲ್‌ ಟವರ್‌ ಮುಂದೆ ಸುಷ್ಮಿತಾ ಕಾಣಿಸಿದ್ದು ಹೀಗೆ.. 

89

ಪರಸ್ಪರ ಇವರಿಬ್ಬರು ಚಿತ್ರರಂಗದಲ್ಲಿ ಆಕ್ಟಿವ್‌ ಆಗಲು, ನಟಿಸಲು ಬೆಂಬಲ ನೀಡುತ್ತಾರೆ. ಹೀಗಾಗಿಯೇ ಇಬ್ಬರು ಏಕಕಾಲದಲ್ಲಿ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ. 

99

ಅಂದಹಾಗೆ ಕೆಲ ತಿಂಗಳುಗಳ ಹಿಂದೆ ಈ ಜೋಡಿ ಹೊಸ ಕಾರ್ ಖರೀದಿ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಇವರಿಬ್ಬರು ವಿಡಿಯೋ ಮಾಡಿ ಹೇಳಿಕೊಂಡಿದ್ದರು. 

Read more Photos on
click me!

Recommended Stories