BBK 12: ಹನ್ನೆರಡು ವರ್ಷಗಳಿಂದ ಪಾಲಕರಿಂದ, ಮನೆಯಿಂದ ದೂರ ಇರೋ 'ಮುದ್ದುಲಕ್ಷ್ಮೀ' ನಟಿ ಅಶ್ವಿನಿ; ಯಾಕೆ

Published : Sep 28, 2025, 09:31 PM IST

ನಿರೂಪಕಿಯಾದಮೇಲೆ ಸಾಕಷ್ಟು ಆಡಿಷನ್‌ಗಳು ರಿಜೆಕ್ಟ್‌ ಆದವು. ಒಂದು ತಿಂಗಳುಗಳ ಕಾಲ ಕತ್ತಲೆಯಲ್ಲಿದ್ದೆ. ಆಮೇಲೆ ರಿಜೆಕ್ಟ್‌ ಆದರೂ ಕೂಡ ಪರವಾಗಿಲ್ಲ, ಪ್ರಯತ್ನಪಡೋಣ ಎಂದುಕೊಂಡಿರುವಾಗಲೇ ‘ಮುದ್ದುಲಕ್ಷ್ಮೀ’ ಸೀರಿಯಲ್‌ ಆಫರ್‌ ಬಂದಿತ್ತು. ಮುಂದಿನ ಭವಿಷ್ಯಕ್ಕೋಸ್ಕರ ಅಶ್ವಿನಿ ಅವರು ಹೋರಾಡುತ್ತಿದ್ದಾರಂತೆ. 

PREV
15
ಸೀರಿಯಲ್‌ಗಳಲ್ಲಿ ನಟನೆ

ಡಿಗ್ರಿ ಮುಗಿಸಿದಕೂಡಲೇ ನಿರೂಪಕರಾದರು. ಆಮೇಲೆ ಆಡಿಷನ್‌ಗಳಲ್ಲಿ ಭಾಗವಹಿಸಿ, ‘ಅನುರಾಧ ಸಂಗಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಅವರ ಮೊದಲ ಪ್ರಾಜೆಕ್ಟ್.‌ ಆಮೇಲೆ ‘ಕುಲವಧು’, ‘ಗಿರಿಜಾ ಕಲ್ಯಾಣʼ ಧಾರಾವಾಹಿಗಳಲ್ಲಿ ನಟಿಸಿದ್ದರು.

25
ಕನ್ನಡದ 'ಮುದ್ದುಲಕ್ಷ್ಮೀ'

‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಶ್ವಿನಿ ಅವರು ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ನಿಜಕ್ಕೂ ಅಶ್ವಿನಿ ಅವರಿಗೆ ಈ ಪಾತ್ರ ತುಂಬ ಇಷ್ಟ ಆಗಿತ್ತಂತೆ.

35
ಸ್ಟ್ರಾಂಗ್‌ ವ್ಯಕ್ತಿತ್ವ ಇರುವ ಹುಡುಗಿ

ಉದಯ ಟಿವಿ ವಾಹಿನಿಯ ‘ಸೂರ್ಯವಂಶ’ ಧಾರಾವಾಹಿಯಲ್ಲಿ ಕೂಡ ಅಶ್ವಿನಿ ನಟಿಸಿದ್ದರು. ಸ್ವತಂತ್ರ, ಸ್ಟ್ರಾಂಗ್‌ ವ್ಯಕ್ತಿತ್ವ ಇರುವ ಹುಡುಗಿಯಾದ ನಾನು ಜನರ ಮನಸ್ಸನ್ನು ಮುಟ್ಟುವೆ ಎಂದು ಅಶ್ವಿನಿ ಹೇಳಿದ್ದಾರೆ.

45
ಕುಟುಂಬದಿಂದ ದೂರ

"12 ವರ್ಷಗಳ ಕಾಲ ಸ್ವತಂತ್ರರಾಗಿ ಬದುಕಿದೆ. ಯಾಕೆ ಕೆಲಸ ಮಾಡಬೇಕು? ಯಾಕೆ ಒಬ್ಬರೇ ಇರಬೇಕು ಎನ್ನೋ ಪ್ರಶ್ನೆ ಬಂದಿತ್ತು, ಆದರೆ ಸುಮ್ಮನೆ ಇರೋಕೆ ಇಷ್ಟ ಆಗಲಿಲ್ಲ. ಇಷ್ಟು ವರ್ಷಗಳಲ್ಲಿ ಮನೆಯಿಂದ ಆಗಾಗ ಫೋನ್‌ ಬಂದಿತ್ತು. ನನಗೆ ಹೋಗಬೇಕು ಅಂತ ಅನಿಸಲೇ ಇಲ್ಲ" ಎಂದು ಅಶ್ವಿನಿ ಅವರು ಹೇಳಿದ್ದಾರೆ.

55
ಮನೆಯವರು ಕರೆದ್ರೂ ಹೋಗಲ್ಲ

“ಎಲ್ಲ ಕುಟುಂಬುಗಳು ಫ್ಯಾಮಿಲಿಯಾಗಿ ಇರೋದಿಲ್ಲ, ಎಲ್ಲವೂ ಅಟ್ಯಾಚ್‌ಮೆಂಟ್‌ ಹೊಂದಿರೋದಿಲ್ಲ. ಆರು ತಿಂಗಳ ಹಿಂದೆ ಮನೆಯವರು ಫೋನ್‌ ಮಾಡಿದರೂ ಕೂಡ ನನಗೆ ಹೋಗಬೇಕು ಅಂತ ಅನಿಸಲೇ ಇಲ್ಲ” ಎಂದು ಅಶ್ವಿನಿ ಹೇಳಿದ್ದಾರೆ. 

Read more Photos on
click me!

Recommended Stories