'ಲೆವಂಟಿ' ರೀಲ್ಸ್‌ನಿಂದ ಖ್ಯಾತರಾದ ಮುಗ್ಧ ಮನಸ್ಸಿನ ಮಲ್ಲಮ್ಮ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಅವರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ತಮ್ಮ ಲೆಮನ್ ಟೀ ಕಥೆ, ಸಿನಿಮಾ ವೀಕ್ಷಣೆಯ ಬಗ್ಗೆ ನಿಷ್ಕಲ್ಮಶವಾಗಿ ಹೇಳಿಕೊಂಡ ಅವರು, ಪ್ರೇಕ್ಷಕರ ಮತಗಳಿಂದ ಒಂಟಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.
ಮುಗ್ಧ ಮನಸ್ಸಿನ ಮಲ್ಲಮ್ಮ ವೇದಿಕೆಗೆ ಬರುತ್ತಲೇ ಸುದೀಪ್ ಸೇರಿದಂತೆ ಎಲ್ಲರನ್ನು ನಗೆಗಡಿಲಿನಲ್ಲಿ ತೇಲಾಡಿಸಿದ್ದಾರೆ. ಮಲ್ಲಮ್ಮ ಅವರು ತಮ್ಮ ರೀಲ್ಸ್‌ಗಳಿಂದಲೇ ಫೇಮಸ್ ಆದವರು. ಇದೀಗ ಮಲ್ಲಮ್ಮ ಮುಂದೆ ಸುದೀಪ್ ಅವರೇ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.
25
ಲೆವಂಟಿ
ತಮ್ಮ ವಿಟಿಯಲ್ಲಿ ಮಲ್ಲಮ್ಮ ಅವರು, ನನ್ನ ನಾಲಿಗೆ ಸ್ವಲ್ಪ ದಪ್ಪವಿದೆ. ಒಮ್ಮೆ ನನಗೆ ಲೆಮನ್ ಟೀ ಅಂತ ಹೇಳೋದಕ್ಕೆ ಬರಲ್ಲ. ನಾನು ಅದನ್ನು ಲೆವಂಟಿ ಅಂದಿಬಿಟ್ಟೆ. ನಮ್ಮ ಮೇಡಂ ಮತ್ತು ಸರ್ ಅವರು ಆ ವಿಡಿಯೋ ಮಾಡಿ ಹಾಕಿದರು. ಆ ವಿಡಿಯೋವನ್ನು ಎಲ್ಲರೂ ನೋಡಿ ಖುಷಿಯಾಯ್ತು ಎಂದರು.
35
12 ರೂಪಾಯಿ ಕತೆ
ಮಲ್ಲಮ್ಮ ಅವರು ಬರುತ್ತಿದ್ದಂತೆ ನೀವು ನನಗಾಗಿ ಆ ಲೆವಂಟಿ ಹೇಳಿ ಅಂತ ಮನವಿ ಮಾಡಿಕೊಂಡರು. ಆಗ ಮಲ್ಲಮ್ಮ ಸ್ವಲ್ಪವೂ ನಾಚಿಕೆ ಮಾಡಿಕೊಳ್ಳದೇ ಇಡೀ ಲೆಮನ್ ಟೀ ಮಾಡೋದು ಹೇಗೆ ಅಂತ ಇಡೀ ರೆಸಿಪಿಯನ್ನೇ ಹೇಳಿದರು. ನಿಂಬೆಹಣ್ಣು, ಸಕ್ಕರೆ, ಚಹಾ ಪುಡಿ ಹಾಕ್ತಾರೆ. ನಂತರ ಅದನ್ನು ಗಾಜಿನ ಗ್ಲಾಸ್ ಹಾಕಿ 12 ರೂಪಾಯಿಗೆ ಮಾರ್ತಾರೆ ಸರ್ ಎಂದು ಹೇಳಿ ಅಲ್ಲಿದ್ದ ಎಲ್ಲಾ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು.
ಇದೇ ವೇಳೆ ಹುಚ್ಚ ಮತ್ತು ಕಾಶಿ ಎರಡು ಸಿನಿಮಾ ಮಾತ್ರ ನೋಡಿದ್ದೇನೆ ಎಂದು ಸುದೀಪ್ ಅವರಿಗೆ ಹೇಳಿದರು. ಈ ಮಾತುಗಳನ್ನು ಕೇಳಿ ಸುದೀಪ್ ಸಹ ಶಾಕ್ ಆದರು. ಮಲ್ಲಮ್ಮ ಅವರಿಗೆ ಮನೆಯೊಳಗೆ ಹೋಗಿ ಏನ್ ಮಾಡ್ತೀರಿ ಅಂತ ಕೇಳಿದ್ದಕ್ಕೆ ಜಗಳ ಮಾಡೋದು ಅಂತ ನಿಷ್ಕಲ್ಮಶದಿಂದ ಹೇಳಿದರು. ಈ ಹಿಂದಿನ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ವಿಕ್ರಂ ಅವರು ಇಷ್ಟ ಎಂದು ಹೇಳಿದರು.
ಬಿಗ್‌ಬಾಸ್ ವೇದಿಕೆ ಬಳಿಯಲ್ಲಿದ್ದ ವೀಕ್ಷಕರು ಮಲ್ಲಮ್ಮ ಅವರನ್ನು ಒಂಟಿಯಾಗಿ ನೋಡಲು ಬಯಸಿ ವೋಟ್ ಮಾಡಿದರು. ತಮಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿ ಮಲ್ಲಮ್ಮ ಮನೆಯೊಳಗೆ ಹೋದರು. ಮಲ್ಲಮ್ಮ ಅವರನ್ನು ಕಂಟ್ರೋಲ್ ಮಾಡೋದು ತುಂಬಾ ಕಷ್ಟ ಎಂದು ಸುದೀಪ್ ಸಹ ಒಪ್ಪಿಕೊಂಡರು. ಮನೆಯೊಳಗೆ ಹೋಗಿ ಅಲ್ಲಿದ್ದವರನ್ನು ಪರಿಚಯ ಮಾಡಿಕೊಂಡು ಆಟ ಆಡೋದಾಗಿಯೂ ಮಲ್ಲಮ್ಮ ತಿಳಿಸಿದ್ದಾರೆ.