ಕಿಚ್ಚನ ಪಂಚಾಯಿತಿ ಮಧ್ಯೆ ಸುದೀಪ್‌ಗೂ ಹೇಳದೆ, ಏಕಾಏಕಿ Bigg Boss ಶೋನಿಂದ ಹೊರಬಿದ್ದ ಚಂದ್ರಪ್ರಭ!

Published : Nov 09, 2025, 02:50 PM IST

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚ ಸುದೀಪ್‌ ಅವರ ಪಂಚಾಯಿತಿ ನಡೆಯುತ್ತಿತ್ತು. ಚಂದ್ರಪ್ರಭ ಅವರಿಗೆ ಬೇಸರವಾಗಿ ಯಾರಿಗೂ ಹೇಳದೆ, ಏಕಾಏಕಿ ಮನೆಯಿಂದ ಹೊರಬಂದಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್‌ ಆಗಿದೆ. ಹಾಗಾದರೆ ಏನಾಯ್ತು?

PREV
16
ನೀಡಿದ್ದ ಟಾಸ್ಕ್‌ ಏನು?

20 ಹೆಸರುಗಳಲ್ಲಿ ಯಾರಿಗೆ ಯಾವ ಪದ ಸೂಕ್ತ ಎಂದು ಹೇಳಿ ಕೊಡಬೇಕು ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ಆಗ ಕೆಲವರು ಕೆಲವರಿಗೆ ಒಂದಿಷ್ಟು ಟೈಟಲ್‌ ಕೊಟ್ಟಿದ್ದಾರೆ. ಇದರ ಪರಿಣಾಮ ಚಂದ್ರಪ್ರಭ ಅವರು ಹೊರಗಡೆ ಬಂದಿದ್ದಾರೆ.

26
ಚಂದ್ರಪ್ರಭ - ಊಸರವಳ್ಳಿ

ಆ ವೇಳೆ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂದು ಹೇಳಲಾಗಿದೆ. ಇದು ಚಂದ್ರಪ್ರಭಗೆ ಬೇಸರ ಬಂದಿದೆ. ಕಣ್ಣೀರು ಹಾಕಿರುವ ಚಂದ್ರಪ್ರಭ ಯಾರಿಗೂ ಹೇಳದೆ ಹೊರಗಡೆ ಬಂದಿದ್ದಾರೆ. ಅಂದಹಾಗೆ ಈ ಬಾರಿ ದೊಡ್ಮನೆಯ ಡೋರ್ ಒಪನ್‌ ಇತ್ತು. ಕಿಚ್ಚನ ಪಂಚಾಯಿತಿ ಟೈಮ್‌ನಲ್ಲಿ ಬ್ರೇಕ್‌ ಇತ್ತು, ಆ ವೇಳೆ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ.

36
ಯಾರಿಗೆ ಯಾವ ಪಟ್ಟ ಸಿಕ್ಕಿತು?

ಸ್ಪಂದನಾ ಸೋಮಣ್ಣ ಅವರು ಅಶ್ವಿನಿ ಗೌಡಗೆ ಸೊಕ್ಕು ಎಂದು ಹೇಳಿದ್ದಾರೆ.

ಚಂದ್ರಪ್ರಭ ಅವರು ಊಸರವಳ್ಳಿ- ಎಲ್ಲರ ಜೊತೆ ಚೆನ್ನಾಗಿದ್ದು, ವೇದಿಕೆಯಲ್ಲಿದ್ದಾಗ ಬೇರೆ ಮಾತು ಹೇಳುತ್ತಾರೆ ಎಂದು ಧನುಷ್‌ ಗೌಡ ಹೇಳಿದ್ದರು.

46
ಚಂದ್ರಪ್ರಭ ಹೀಗೆ ಯಾಕೆ ಮಾಡಿದ್ರು?

ಗಿಲ್ಲಿ ನಟ ಅರ್ಥಹೀನ, ಏನು ಮಾತನಾಡಿದರೂ ಅರ್ಥವೇ ಇಲ್ಲ ಎಂದು ರಾಶಿಕಾ ಶೆಟ್ಟಿ ಹೇಳಿದ್ದರು.

ಧ್ರುವಂತ್‌ ಅವರು ಗಿಲ್ಲಿ ನಟ ಅತಿರೇಕ ಎಂದು ಹೇಳಿದ್ದಾರೆ.

ಚಂದ್ರಪ್ರಭ ಅವರು ಕಿಚ್ಚ ಸುದೀಪ್‌ಗೂ ತಿಳಿಸದೆ ಹೊರಗಡೆ ಹೋಗಿದ್ದಾರೆ. ಉಳಿದವರೆಲ್ಲರೂ ಚಂದ್ರಪ್ರಭರನ್ನು ತಡೆಯಲು ನೋಡಿದ್ದಾರೆ. ಆದರೂ ಕೂಡ ಅವರು ಹೊರಗೆ ಹೋಗಿದ್ದಾರೆ.

56
ಬೆಲೆಯೇ ಕೊಡಲಿಲ್ಲ

ಹೊರಗಡೆ ಹೋಗಿರುವ ಚಂದ್ರಪ್ರಭ ಅವರು ಆಮೇಲೆ ಮನಸ್ಸು ಬದಲಾಯಿಸಿ, ಅವರು ಮನೆಯೊಳಗಡೆ ಎಂಟ್ರಿ ಕೊಡ್ತಾರಾ? ಅಥವಾ ವೇದಿಕೆಗೆ ಗೌರವ ಕೊಡದೆ, ಕಿಚ್ಚ ಸುದೀಪ್‌ಗೂ ಬೆಲೆ ಕೊಡದೆ ಹೊರಗಡೆ ಬಂದರು ಎಂದು ಕಾಣುತ್ತದೆ.

66
ಚಂದ್ರಪ್ರಭ ಎಲಿಮಿನೇಟ್‌ ಆಗೋ ಸಾಧ್ಯತೆ ಇತ್ತು

ಅಂದಹಾಗೆ ಚಂದ್ರಪ್ರಭ ಅವರು ನಾಮಿನೇಟ್‌ ಆಗಿದ್ದರು. ಚಂದ್ರಪ್ರಭ ಅವರು ಎಲಿಮಿನೇಟ್‌ ಆಗುವ ಸಾಧ್ಯತೆಯೂ ಇತ್ತು. ಆದರೆ ಅವರು ಎಲಿಮಿನೇಶನ್‌ ಆಗುವ ಮುಂಚೆಯೇ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ.

Read more Photos on
click me!

Recommended Stories