ರಕ್ಷಕ್ ಅಂದ್ರೆ ತುಂಬಾ ಕೋಪಿಷ್ಟ ಸಖತ್ ನೇರವಾಗಿ ಮಾತನಾಡುತ್ತಾನೆ ಅಂದುಕೊಂಡಿದ್ದಾರೆ ಅದರೆ ಮತ್ತೊಂದು ಸೈಡ್ ಬೇರೆನೇ ಇದೆ. ಜನರಿಗೆ ತಿಳಿಸಬೇಕು ಅಂತ ಬಿಗ್ ಬಾಸ್ ಮನೆಯೊಳಗೆ ಬರುತ್ತಿರುವೆ.
ನಾನ್‌ವೆಚ್ ಅಂದ್ರೆ ನನ್ನ ಪ್ರಾಣ ನನ್ನ ಜೀವ ಅದು. ದಿನದಲ್ಲಿ ಮೂರು ಸಲ ನಾನ್‌ವೆಚ್ ಕೊಟ್ಟರೂ ಮೂರು ಸಲವೂ ತಿನ್ನುವೆ ಆದರೆ ಬಿಗ್ ಬಾಸ್ ಮನೆಯೊಳಗೆ ಹೋಗಿ ಊಟ ಬಿಟ್ಟು ಹೇಗಿರುತ್ತೀನಿ ಗೊತ್ತಿಲ್ಲ ಭಯ ಶುರುವಾಗಿದೆ.
ನೆಗೆಟಿವ್ ವಿಚಾರಕ್ಕೆ ಬಂದರೆ ನನ್ನ ಬಗ್ಗೆ ಸಾಕಷ್ಟು ಟ್ರೋಲ್ ರೋಟ್ಸ್ ಅಂತ ಮಾಡುತ್ತಾರೆ ಗೊಂದರೆ ಇಲ್ಲ ಜನರು ಮಾಡಲಿ. ನೇರವಾಗಿ ಮಾತನಾಡುತ್ತೀನಿ ಏಕೆಂದರೆ ನಮ್ಮ ತಂದೆ ಅದೇ ರೀತಿ ಇದ್ದರು ನನ್ನ ತಾತ ಅದೇ ರೀತಿ ಇದ್ದರು. ಅದೇ ರಕ್ತದಲ್ಲಿ ನಾನು ಹುಟ್ಟಿರುವ ಕಾರಣ ನನ್ನಲ್ಲಿ ಏನೂ ಬದಲಾವಣೆ ಆಗುವುದಿಲ್ಲ.
ಅಪ್ಪ ಅಂತ ಬಂದರೆ ಮುಖದಲ್ಲಿ ಖುಷಿ ಬರುತ್ತದೆ. ನನಗೆ ನೆಗೆಟಿವ್ ಯಾವುದು ಪಾಸಿಟಿವ್ ಯಾವುದು ಯಾವ ಕೆಲಸ ಮಾಡಬೇಕು ಮಾಡಬಾರದು ಅಂತ ತೋರಿಸಿಕೊಟ್ಟ ವ್ಯಕ್ತ ನಮ್ಮ ತಂದೆ. ಇಲ್ಲಿವರೆಗೂ ಅದೇ ನನಗೆ ಪಿಲ್ಲರ್ ಆಗಿದೆ.
ನನ್ನ ಮೊದಲ ಸಿನಿಮಾ ಬಂದು ಗುರು ಶಿಷ್ಯರು. ಚಿತ್ರರಂಗಕ್ಕೆ ನಾನು ಬರಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಹೆಸರನ್ನು ಉಳಿಸಬೇಕು ಮತ್ತು ಬೆಳಸಬೇಕು ಅಂತ ಬಂದಿರುವೆ.
ನಮ್ಮ ತಂದೆ ಒಂದಿಷ್ಟು ಪಾಠ ಹೇಳಿಕೊಟ್ಟಿದ್ದಾರೆ. ಇಂದು ರಕ್ಷಕ್ ಆಗಿ ನಿಂತಿರುವೆ ಅಂದ್ರೆ ಅದಕ್ಕೆ ನಮ್ಮ ತಾಯಿನೇ ಕಾರಣ ಅವರ ಸಪೋರ್ಟ್ ಹೆಚ್ಚಿದೆ. ಬಿಗ್ ಬಾಸ್‌ನಲ್ಲಿ ಇರಬೇಕು ಅನ್ನೋದು ನನ್ನ ಚಿಕ್ಕ ವಯಸ್ಸಿನ ಕನಸು ಈಗ ಲಕ್ಷ್ಮಿ ಮನೆ ಬಾಗಿಲಿಗೆ ಬಂದಿದ್ದಾಳೆ.
ವೇದಿಕೆ ಮೇಲೆ ನೆಗೆಟಿವ್ ಟ್ರೋಲ್‌ಗಳ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ ಪರ್ವಾಗಿಲ್ಲ ಸರ್ ನೆಗೆಟಿವ್‌ನ ಪಾಸಿಟಿವ್ ಮಾಡಿಕೊಂಡಿರುವೆ ನನಗೆ ಪಬ್ಲಿಸಿಟಿ ಬೇಕು ಅದು ಸಿಗುತ್ತಿದೆ ಅಂದಿದ್ದಾರೆ.
ಇನ್ನು ಕೋಪದ ವಿಚಾರ ಪ್ರಶ್ನೆ ಮಾಡಿದಾಗ ನಾನು ಹೊಡೆಯುವುದು ಮುರಿದು ಹಾಕುವ ಕೆಲಸ ಮಾಡಲ್ಲ ಕೋಪ ಬಂದಾಗ ಬಾಯಲ್ಲಿ ಕೆಲವೊಂದು ಬೀಪ್ ಪದಗಳು ಬರುತ್ತದೆ ಅದನ್ನು ಕಂಟ್ರೋಲ್ ಮಾಡಬೇಕು ಎಂದಿದ್ದಾರೆ ರಕ್ಷಕ್.