ಮೈಸೂರಿನಲ್ಲಿ ಹುಟ್ಟಿದ ಪ್ರಕೃತಿ ಪ್ರಸಾದ್ ಓದಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಸೈಕಾಲಜಿಯಲ್ಲಿ ಎಂಎಸ್‌ಸಿ ಮುಗಿಸಿದ್ದಾರೆ.
ಈಗಾಗಲೆ ಸಾಕಷ್ಟು ಕಿರುತೆರೆ ಜನಪ್ರಿಯ ಧಾರಾವಾಹಿಗಳಲ್ಲಿ ಮಿಂಚಿರುವ ಪ್ರಕೃತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಶೂಟಿಂಗ್ ಸಮಯದಲ್ಲಿ ಒಂದು ವೀಕೆಂಡ್ ಫ್ರೀ ಸಿಕ್ಕರೆ ಸಾಕು ರೆಸ್ಟ್ ಮಾಡೋಣ ಅಥವಾ ಫ್ಯಾಮಿಲಿ ಜೊತೆ ಸಮಯ ಕಳೆಯೋಣ ಅನಿಸುವುದು ಸಹಜ.
ಹೀಗಾಗಿ ಈ ವೀಕೆಂಡ್ ಪ್ರಕೃತಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಸಣ್ಣ ಟ್ರಿಪ್‌ನಲ್ಲಿ ಏನೆಲ್ಲಾ ತಿಂದಿದ್ದಾರೆ ಎಂದು ವಿಡಿಯೋ ಮಾಡಿದ್ದಾರೆ.
'ವೀಕೆಂಡ್‌ನಲ್ಲಿ ಹೊರ ಹೋಗಿ ಏನಾದರೂ ತಿನ್ನಬೇಕು ಎಂದು ಎಲ್ಲರಿಗೂ ರಿಮೈಂಡ್ ಮಾಡುವೆ. ನಿಮ್ಮೆಲ್ಲರ ಫೇವರೆಟ್ ಫುಡ್ ಯಾವುದು' ಎಂದು ಪ್ರಕೃತಿ ಬರೆದುಕೊಂಡಿದ್ದಾರೆ.
ಜಮಾಯಿಸು, ಮಸಾಲ ದೋಸೆ ತಿನ್ನೋದು ಮರೆಯಬೇಡಿ, ಅಬ್ಬಬ್ಬಾ ಊಟನಾ ಎಷ್ಟು ಎಂಜಾಯ್ ಮಾಡುತ್ತೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar