ಮಾಲ್ಡೀವ್ಸ್‌ನಲ್ಲಿ ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ಗೊಂಡ್ ಹೊಡೆದ್ರಂತೆ ಗಿಚ್ಚಿಗಿಲಿ ಗಿಲಿ ಧನ್‌ರಾಜ್!

First Published | Oct 8, 2023, 6:22 PM IST

ಬೆಂಗಳೂರು (ಅ.08): ಸಾಮಾನ್ಯವಾಗಿ ಎಲ್ಲರೂ ಮಾಲ್ಡೀವ್ಸ್‌ಗೆ ಹೋದರೆ ಬಿಕಿನಿ ಡ್ರೆಸ್‌ನಲ್ಲಿ ಅಥವಾ ಚಡ್ಡಿಯ ಮೇಲೆ ಪೋಸ್‌ ಕೊಟ್ಟು ಹಾಟ್‌ ಆಗಿ ಕಾಣಿಸಿಕೊಳ್ತಾರೆ. ಈಗ ಬಿಗ್‌ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್‌ 2 ಖ್ಯಾತಿಯ ಧನ್‌ರಾಜ್‌ ಆಚಾರ್‌ ಮಾಲ್ಡೀವ್ಸ್‌ನಲ್ಲಿ ಮಜಾಮಾಡುತ್ತಿದ್ದಾರೆ. ಈ ವೇಳೆ ಧನ್‌ರಾಜ್‌ ನಡೆಯನ್ನು ನೋಡಿದ ನೆಟ್ಟಿಗರು ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ತಿಕೊಂಡು ಹೊಡೆದಿದ್ದೀರಿ ಎಂದು ಕಮೆಂಟ್‌ ಮಾಡಿದ್ದಾರೆ.

ಈಗ ಬಿಗ್‌ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್‌ 2 ಖ್ಯಾತಿಯ ಧನ್‌ರಾಜ್‌ ಆಚಾರ್‌ ಮಾಲ್ಡೀವ್ಸ್‌ನಲ್ಲಿ ಮಜಾಮಾಡುತ್ತಿದ್ದಾರೆ. 

ಈಗ ಬಿಗ್‌ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಮಾಲ್ಡೀವ್ಸ್‌ಗೆ ಹೋಗಿ ತಾನು ಯಾವ ಹೀರೋಯಿನ್‌ಗೂ ಕಡಿಮೆಯಿಲ್ಲವೆಂಬಂತೆ ಬಿಕಿನಿ ತೊಟ್ಟು ಹಾಟ್‌ ಪೋಸ್‌ ನೀಡಿದ್ದಾರೆ. 

Tap to resize

ಗಿಚ್ಚಿ ಗಿಲಿಗಿಲಿ ಸೀಸನ್‌-2 ಖ್ಯಾತಿಯ ಧನ್‌ರಾಜ್‌ ಹಾಗೂ ಅವರ ಪತ್ನಿ ಪ್ರಜ್ಞಾ ಧನ್‌ರಾಜ್‌ ಮಾಲ್ಡೀವ್ಸ್‌ಗೆ ಹೋಗಿದ್ದು ದಂಪತಿ ಸಮೇತವಾಗಿ ಫೋಟೋಗೆ ಪೋಸ್‌ ನೀಡಿದ್ದಾರೆ.

ಸೋನುಗೌಡ ಮತ್ತು ಧನ್‌ರಾಜ್‌ ದಂಪತಿಯ ಫೋಟೋಗಳನ್ನು ಹೋಲಿಕೆ ಮಾಡಿದ ನೆಟ್ಟಿಗರು, ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ತಿಕೊಂಡು ಹೊಡೆದಿದ್ದೀರಿ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಸೋನುಗೆ ರೇಷ್ಮೆ ಬಟ್ಟೆಗೆ ಚಪ್ಲಿ ಸುತ್ಗೊಂಡ್ ಹೊಡೆದ ಹಾಗೆ ಮಾಡಿದಿರಾ ಸೂಪರ್ ಎಂದು ಗಿಚ್ಚಿ ಗಿಲಿಗಿಲಿ ಧನರಾಜ್ ಆಚಾರ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಬರೇ ಬಟ್ಟೆ ಬಿಚ್ಚುದನ್ನು ನೋಡಿ ಶೇರ್ ಮಾಡೋದು ಬಿಟ್ಟು, ಇಂತಹ ಸಂಸ್ಕೃತಿ ಉಳಿಸುವ ನಮ್ಮ ಊರಿನ ದಂಪತಿಗಳನ್ನು ಪ್ರೋತ್ಸಾಹಸಿ ಎಂದು ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ನಡೆದ ಕಲರ್ಸ್‌ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್‌ನಲ್ಲಿ ಧನರಾಜ್‌ ಆಚಾರ್‌ ಅವರು ಜನಮೆಚ್ಚಿದ ಹೊಸ ಪರಿಚಯ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್‌ ಆಗಿರುವ ಧನರಾಜ್‌ ದಂಪತಿ ಮಾಲ್ಡೀವ್ಸ್‌ಗೆ ಹೋಗಿ ವಿಭಿನ್ನವಾಗಿ ರೀಲ್ಸ್‌ ಮಾಡಿ ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
 

ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಸಂಸ್ಕೃತಿ ಸಂಸ್ಕಾರ ನಾ ಮಾಲ್ಡೀವ್ಸ್ ಗೆ ತೆಗೆದುಕೊಂಡು ಹೋಗಿದಕ್ಕೆ ದನ್ಯವಾದಗಳು ಎಂದು ಧನರಾಜ್‌ ದಂಪತಿಗೆ ವಿಶ್‌ ಮಾಡಿದ್ದಾರೆ.

ನಮ್ಮ ಸಂಸ್ಕೃತಿ ನ ಬುದ್ದಿ ಇಲ್ಲದವರು ಎಲ್ಲಿ ಅಳಿಸಿದರೋ ಅಲ್ಲಿಯೇ ನಮ್ಮ ಸಂಸ್ಕೃತಿ, ಗೌರವವನ್ನು ಉಳಿಸುವ ಕಾರ್ಯ ಎಂದು ಕಮೆಂಟ್‌ ಮಾಡಿದ್ದಾರೆ. 

Latest Videos

click me!