Bhagyalakshmi Serial ಕೊನೇ ಸಂಚಿಕೆಯಲ್ಲಿ ಆದಿ ಭಾಗ್ಯ ಒಂದಾಗ್ತಾರಾ? ಸಕಲೇಶಪುರದಲ್ಲಿ ಸಿಕ್ಕ ಸಾಕ್ಷಿಯಿದು

Published : Feb 09, 2026, 02:54 PM IST

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಮನೆಗೆ ಬಂದ ತಾಂಡವ್‌ ಧರಣಿ ಕೂತಿದ್ದಾನೆ. ಅವನಿಗೆ ಭಾಗ್ಯ ಒಪ್ಪುತ್ತಾಳಾ? ಇಲ್ಲವಾ ಎನ್ನುವ ಚಿಂತೆ ಶುರುವಾಗಿದೆ. ಈಗ ಸಕಲೇಶಪುರದಲ್ಲಿ ಕೊನೆಯ ಸಂಚಿಕೆ ಶೂಟಿಂಗ್‌ ನಡೆದಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. 

PREV
16
ಭಾಗ್ಯಳ ನಿರ್ಧಾರ ಏನು?

ಇನ್ನೊಂದು ಕಡೆ ಭಾಗ್ಯಳಿಗೆ ಪ್ರಪೋಸ್‌ ಮಾಡಬೇಕು ಎಂದು ಆದಿ ಕಾಯುತ್ತಿದ್ದಾನೆ. ಹೌದು, ಈ ಧಾರಾವಾಹಿಯಲ್ಲಿ ಆದಿಯನ್ನು ಭಾಗ್ಯ ಒಪ್ಪುತ್ತಾಳಾ? ಅಥವಾ ತಾಂಡವ್‌ನನ್ನು ಕ್ಷಮಿಸಿ ಅವನ ಜೊತೆ ಇರುತ್ತಾಳಾ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಸೀರಿಯಲ್‌ ಅಂತ್ಯ ಎಂದು ವೀಕ್ಷಕರು ಅಂದುಕೊಂಡಿದ್ದಾರೆ.

26
ತಾಂಡವ್‌ ಕ್ಷಮೆ ಕೇಳಿದ್ದಾಯ್ತು

ಇಷ್ಟುದಿನ ಮಾಡಿದ್ದೆಲ್ಲವೂ ತಪ್ಪು, ನಾನು ಹೀಗೆ ಮಾಡಬಾರದಿತ್ತು, ನನ್ನಿಂದ ಅನ್ಯಾಯ ಆಗಿದೆ. ಇನ್ಮೇಲಾದರೂ ನಾನು ಮಕ್ಕಳು, ಪತ್ನಿ ಜೊತೆ ಖುಷಿಯಿಂದ ಬಾಳಬೇಕು ಎಂದು ತಾಂಡವ್‌ ಅಂದುಕೊಂಡಿದ್ದಾನೆ. ಈಗ ಭಾಗ್ಯ ಒಪ್ಪಿಕೊಳ್ಳಬೇಕು.

36
ಭಾಗ್ಯ ಕ್ಷಮಿಸೋದಿಲ್ಲ

ನನ್ನ ಜೀವನವನ್ನು ಹಾಳು ಮಾಡಿರೋ, ಲೆಕ್ಕವಿಲ್ಲದಷ್ಟು ತಪ್ಪು ಮಾಡಿರೋ ತಾಂಡವ್‌ನನ್ನು ಭಾಗ್ಯ ಒಪ್ಪಿಕೊಳ್ಳೋದಿಲ್ಲವಂತೆ. ಈಗ ಏನಾಗಲಿದೆ ಎಂದು ಕಾದು ನೋಡೇಕಿದೆ.

46
ಪ್ರಪೋಸ್‌ ಮಾಡಿದ್ರಾ?

ಸಕಲೇಶಪುರದಲ್ಲಿ ಶೂಟಿಂಗ್‌ ನಡೆದಿದ್ದು, ನಟ ಹರೀಶ್‌ ರಾಜ್‌ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹುಶಃ ಸಕಲೇಶಪುರದಲ್ಲಿ ಆದಿ, ಭಾಗ್ಯಗೆ ಪ್ರಪೋಸ್‌ ಮಾಡಬಹುದಾ ಎಂಬ ಅನುಮಾನ ಶುರುವಾಗಿದೆ.

56
ತನ್ವಿ ಆಸೆಯಂತೆ ಆಗುತ್ತದೆಯಾ?

ತನ್ವಿಗೆ ತನ್ನ ತಂದೆ-ತಾಯಿ ಜೊತೆಗೆ ಇರಬೇಕು ಎನ್ನುವ ಆಸೆ ಇದೆ. ಹೀಗಾಗಿ ಅವಳು ಕೂಡ ತಾಯಿ ಹಿಂದೆ ಹೋಗಲೂಬಹುದು, ಆದಿ-ಭಾಗ್ಯ ಒಂದಾಗಬಾರದು ಎಂದು ಅವಳು ಹೇಳಲೂಬಹುದು. ಒಟ್ಟಿನಲ್ಲಿ ಮುಂದಿನ ಸಂಚಿಕೆಗಳು ಕುತೂಹಲದಿಂದ ಕೂಡಿವೆ.

66
ಹರೀಶ್‌ ರಾಜ್‌ ರಿಯಲ್‌ ಕುಟುಂಬ

ಹರೀಶ್‌ ರಾಜ್‌ ಅವರ ರಿಯಲ್‌ ಪತ್ನಿ, ಮಕ್ಕಳು ಕೂಡ ಸೆಟ್‌ಗೆ ಭೇಟಿ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories