Bhagyalakshmi Serial Twist: ಬಿಲ್ಡಿಂಗ್‌ನಿಂದ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರ ಮುಗಿದೋಯ್ತಾ?

Published : Feb 17, 2026, 08:26 AM IST

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ತಾಂಡವ್‌ನನ್ನು ಭಾಗ್ಯ ಮನೆಯೊಳಗಡೆ ಕರೆದಳು. ಶ್ರೇಷ್ಠ ಇದನ್ನೆಲ್ಲ ತಡೆಯೋಕೆ ಎಷ್ಟೇ ಪ್ರಯತ್ನಪಟ್ಟರೂ ಕೂಡ ಆಗಲೇ ಇಲ್ಲ. ಈಗ ಶ್ರೇಷ್ಠ ತನ್ನನ್ನು ತಾನೇ ಮುಗಿಸಿಕೊಳ್ಳೋಕೆ ನೋಡುತ್ತಿದ್ದಾಳೆ. 

PREV
16
ಯಾರಿಗೂ ನಂಬಲಾಗ್ತಿಲ್ಲ

ಮಗಳಿಗೋಸ್ಕರ ಭಾಗ್ಯ, ತಾಂಡವ್‌ನನ್ನು ಮನೆಯೊಳಗಡೆ ಬರೋಕೆ ಓಕೆ ಎಂದಳು. ತಾಂಡವ್‌ ಬದಲಾದ ಎಂದರೆ ಯಾರೂ ಕೂಡ ನಂಬುತ್ತಿಲ್ಲ. ಇನ್ನೊಂದು ಕಡೆ ಸುನಂದಾಗೂ ಕೂಡ ತನ್ನ ಮಗ ಬದಲಾದ ಎಂದರೆ ನಂಬಲು ಆಗುತ್ತಿಲ್ಲ. ಇನ್ನು ತಾಂಡವ್‌ ಹೀಗೆ ಬದಲಾಗಿರೋದು ಆದಿಗೂ ಕೂಡ ಆಶ್ಚರ್ಯ ತಂದಿದೆ.

26
ಆದಿಗೂ ಇರಿಸುಮುರಿಸು

ಭಾಗ್ಯಳಿಗೆ ಪ್ರೇಮ ನಿವೇದನೆ ಮಾಡಿ, ಮದುವೆ ಆಗಬೇಕು ಎಂದು ಆದಿ ಅಂದುಕೊಂಡಿದ್ದನು. ಆದರೆ ತಾಂಡವ್‌ ಈಗ ಮನೆಗೆ ಬಂದಿರೋದು ಆದಿಗೆ ಇರಿಸುಮುರಿಸು ತಂದಿದೆ. ಆದಿಗೆ ಕೂಡ ಏನು ಮಾಡಬೇಕು ಎಂದು ಗೊತ್ತಾಗ್ತಿಲ್ಲ.

36
ಇಕ್ಕಟ್ಟಿನಲ್ಲಿ ಭಾಗ್ಯ

ಭಾಗ್ಯಗೆ ಏನು ಮಾಡಬೇಕು ಎಂದು ಗೊತ್ತಾಗ್ತಿಲ್ಲ. ತಾಂಡವ್‌ನನ್ನು ನೋಡಿದಕೂಡಲೇ ಭಾಗ್ಯಗೆ ಅವನು ಕೊಟ್ಟ ಬೇಸರ, ನೋವು ಎಲ್ಲ ನೆನಪಾಗುತ್ತದೆ. ಈಗ ಮಗಳಿಗೋಸ್ಕರ ಅವಳು ತಾಂಡವ್‌ನನ್ನು ಮನೆಯೊಳಗಡೆ ಬರೋಕೆ ಓಕೆ ಎಂದಿದ್ದಾರೆ. ಆದರೆ ಅವಳಿಗೆ ಇದು ಇಷ್ಟವೇ ಇಲ್ಲ.

46
ಶ್ರೇಷ್ಠ ದುಡುಕಿನ ನಿರ್ಧಾರ

ಭಾಗ್ಯಳನ್ನು ಮದುವೆಯಾಗಿ, ಎರಡು ಮಕ್ಕಳಿವೆ ಎಂದು ಗೊತ್ತಿದ್ದರೂ ಕೂಡ ಶ್ರೇಷ್ಠ, ತಾಂಡವ್‌ನನ್ನು ಪ್ರೀತಿಸಿದಳು. ತಂದೆ-ತಾಯಿ, ಇಡೀ ಸಮಾಜದ ವಿರೋಧ ಕಟ್ಟಿಕೊಂಡು ಅವಳು ತಾಂಡವ್‌ನನ್ನು ಮದುವೆಯಾದಳು. ಅವಳಿಗೆ ತಾಂಡವ್‌ ಬೇಕಿತ್ತು, ತಾಂಡವ್‌ ಮಕ್ಕಳು ಬೇಕಿರಲಿಲ್ಲ. ಈಗ ಅವಳ ಜೊತೆ ತಾಂಡವ್‌ ಇಲ್ಲ. ಹೀಗಾಗಿ ಅವಳಿಗೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ.

56
ಆತ್ಮ*ಹತ್ಯೆ ಮಾಡ್ಕೊಳ್ತಾಳಾ?

ತಾಂಡವ್‌ ಹಾಗೂ ಭಾಗ್ಯಗೆ ವಾರ್ನ್‌ ಮಾಡಿದರೂ ಕೂಡ, ಶಾಪ ಹಾಕಿದರೂ ಕೂಡ ಶ್ರೇಷ್ಠ ಮಾತ್ರ ನೆಮ್ಮದಿಯಾಗಿಲ್ಲ. ಇವರನ್ನು ಯಾರನ್ನೂ ಚೆನ್ನಾಗಿ ಇರೋಕೆ ಬಿಡೋದಿಲ್ಲ, ತೊಂದರೆ ಕೊಡ್ತೀನಿ, ಬುದ್ಧಿ ಕಲಿಸ್ತೀನಿ ಎಂದು ಹೇಳಿದ್ದ ಶ್ರೇಷ್ಠ ಈಗ ಬಿಲ್ಡಿಂಗ್‌ನಿಂದ ಕೆಳಗಡೆ ಬೀಳೋ ನಿರ್ಧಾರ ಮಾಡಿದ್ದಾಳೆ. ಹಾಗಾದರೆ ಶ್ರೇಷ್ಠ ಸಾ*ವಾಗತ್ತಾ? ಅವಳ ಪಾತ್ರ ಮುಗಿಯತ್ತಾ ಎಂಬ ಪ್ರಶ್ನೆ ಎದ್ದಿದೆ.

66
ಮುಂದೆ ಏನಾಗಬಹುದು?

ಶ್ರೇಷ್ಠ ಸಾ*ಯೋದು ಡೌಟ್.‌ ಶ್ರೇಷ್ಠಳ ಕಾರಣಕ್ಕೆ ಭಾಗ್ಯ ಮನಸ್ಸಿನಲ್ಲಿ ತಾಂಡವ್‌ ಬಗ್ಗೆ ಇನ್ನೊಂದಿಷ್ಟು ಮನಸ್ತಾಪ ಬರುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಮುಂದೆ ಏನಾಗಬಹುದು ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories