ಸಾವಿಗೆ ಶರಣಾದ ಸಿಜೆ ರಾಯ್-ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ-11' ವೇದಿಕೆ ಅದೇನು ಮಾತಾಡಿದ್ರು ಗೊತ್ತಾ?

Published : Jan 30, 2026, 09:55 PM IST

ಬಿಗ್ ಬಾಸ್ ಸೀಸನ್ 11ರ ವೇದಿಕೆ ಮೇಲೆ ಬಂದಿದ್ದ ಸಿಜೆ ರಾಯ್ ಅವರನ್ನು ಕಿಚ್ಚ ಸುದೀಪ್ ಅವರು ಸ್ವಾಗತಿಸಿ, ಅವರ ಬಗ್ಗೆ ‘ಕಾನ್ಫಿಡೆಂಟ್’ ಆಗಿ ಮಾತನ್ನಾಡಿದ್ದರು. ಆಗ ಸಿಜೆ ರಾಯ್ ಅದೇನು ಹೇಳಿದ್ದರು? ಈ ಸ್ಟೋರಿ ನೋಡಿ.. 

PREV
17

ಬಿಗ್ ಬಾಸ್ ಸೀಸನ್ 11ರ ವೇದಿಕೆ ಮೇಲೆ ಬಂದಿದ್ದ ಸಿಜೆ ರಾಯ್ ಅವರನ್ನು ಕಿಚ್ಚ ಸುದೀಪ್ ಅವರು ಸ್ವಾಗತಿಸಿ, ಅವರ ಬಗ್ಗೆ ‘ಕಾನ್ಫಿಡೆಂಟ್’ ಆಗಿ ಮಾತನ್ನಾಡಿದ್ದರು. ಅಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ರನ್ನರ್ ಅಪ್ ಡ್ರೋನ್ ಪ್ರತಾಪ್ ಇದ್ದರು. ಆಗ ಸಿಜೆ ರಾಯ್ ಅದೇನು ಹೇಳಿದ್ದರು? ಈ ಸ್ಟೋರಿ ನೋಡಿ..

27

ಹೌದು, ಸಿಜೆ ರಾಯ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರ ವೇದಿಕೆಗೆ ಬಂದು ಅಲ್ಲಿ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ‘ನಾನು ನಿಮ್ಮ ಪಕ್ಕಾ ಫ್ಯಾನ್’ ಎಂದು ನಟ ಸುದೀಪ್ ಸೇರಿದಂತೆ ಎಲ್ಲರ ಮುಂದೆ ಹೇಳಿದ್ದಾರೆ. 

47

ಅಂದರೆ, ಕಿಚ್ಚ ಸುದೀಪ್ ಹಾಗೂ ಸಿಜೆ ರಾಯ್ ಅವರಿಬ್ಬರೂ ಪರಸ್ಪರ ಮೊದಲೇ ಸ್ನೇಹಿತರು. ಅಷ್ಟಕ್ಕೂ ಸುದೀಪ್ ಹಾಗೂ ಸಿಜೆ ರಾಯ್ ಇಬ್ಬರಿಗೂ ಕೇರಳದ ನಂಟಿದೆ. ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಕೇರಳ ಮೂಲದವರು. ಸಿಜೆ ರಾಯ್ ಅವರು ಕೇರಳದವರು. 

57

ಸಿಜೆ ರಾಯ್ ಅವರು ಇಂದು ಅವರ ಕಚೇರಿ ಮೇಲೆ ನಡೆದ ಐಟಿ ದಾಳಿಗೆ ಬೇಸತ್ತು ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಪೊಲೀಸ್ ತನಿಖೆ ಇನ್ನೂ ಪ್ರಗತಿಯಲ್ಲಿದೆ. ನಿಖರವಾಗಿ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

67

ಸಿಜೆ ರಾಯ್ ಅವರು ಆದಾಯ ಮೀರಿದ ಗಳಿಕೆ ಹೊಂದಿದ್ದಾರೆ ಎಂಬುದೇ ಪದೇಪದೇ ಅವರ ಮೇಲೆ ಆಗುತ್ತಿರುವ ಐಟಿ ದಾಳಿಗೆ ಕಾರಣ ಎನ್ನಲಾಗಿದೆ. ಇಂದು, ಐಟಿ ಅಧಿಕಾರಿಗಳು ಲೆಕ್ಕಪತ್ರ ಪರಿಶೀಲನೆ ಮಾಡುತ್ತಿರುವ ಸಮಯದಲ್ಲಿಯೇ ಅವರು ಗುಂಡಿಕ್ಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

77

ಒಟ್ಟಿನಲ್ಲಿ, ಕಾನ್ಫಿಡೆಂಟ್ ಚೇರ್ಮನ್ ಸಿಜೆ ರಾಯ್ ಅವರ ಸಾವು ನಿಜಕ್ಕೂ ಶಾಕಿಂಗ್ ಎನ್ನುವಂತಿದೆ. ಕಾರಣ, ಕುಟುಂಬ, ಆಸ್ತಿ ಹಾಗೂ ಎಲ್ಲಾ ವ್ಯವಹರಾಗಳು-ಸಂಬಂಧಗಳು ಎಲ್ಲವನ್ನೂ ಬಿಟ್ಟು ಸಾವಿಗೆ ಶರಣಾಗುವಂಥ ಅನಿವಾರ್ಯತೆ ಏಕೆ ಬಂತು ಎಂಬುದು ನಿಜಕ್ಕೂ ಬಹಳಷ್ಟು ಕಾಡುವ ಪ್ರಶ್ನೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories