ಆನಿವರ್ಸರಿಗೆ ಸ್ಪೆಷಲ್ ಫೋಟೊ ಶೇರ್ ಮಾಡಿ, Divorce Rumours ಗೆ ಫುಲ್ ಸ್ಟಾಪ್ ಇಟ್ಟ ಮುರುಗ

Published : Nov 11, 2025, 08:01 PM IST

ಡ್ಯಾನ್ಸ್ ಕೊರಿಯೋಗ್ರಫರ್ ಮುರುಗನಂದ ಮತ್ತು ನಟಿ ಇಶಿತಾ ವರ್ಷ ಇತ್ತೀಚೆಗೆ ತಮ್ಮ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿದ್ದು, ಮುರುಗಾ ಇಬ್ಬರ ಮುದ್ದಾದ ಫೊಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿ, ತಮ್ಮ ಡಿವೋರ್ಸ್ ರೂಮರ್ಸ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

PREV
16
ಮುರುಗ-ಇಶಿತಾ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷ ಹಾಗೂ ಡ್ಯಾನ್ಸ್ ಕೊರಿಯೋಗ್ರಫರ್ ಮುರುಗಾನಂದ ಇತ್ತೀಚೆಗೆ ತಮ್ಮ ಆರನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದು, ಮುರುಗಾ ಇಬ್ಬರ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ.

26
ಆನಿವರ್ಸರಿ ಸ್ಪೆಷಲ್

ಮುರುಗ ಮತ್ತು ಇಶಿತಾ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ನವಂಬರ್ 10ರಂದು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮುರುಗಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಇಶಿತಾ ಜೊತೆಯಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, Wish you Happy wedding anniversary my dear wifey ಎಂದು ಕ್ಯಾಪ್ಶನ್ ಬರೆದಿದ್ದಾರೆ.

36
ಡಿವೋರ್ಸ್ ರೂಮರ್ಸ್ ಗಳಿಗೆ ಫುಲ್ ಸ್ಟಾಪ್

ಕಳೆದ ಹಲವಾರು ಸಮಯದಿಂದ ಇಶಿತಾ ಮತ್ತು ಮುರುಗಾ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ರೂಮರ್ಸ್ ಕೇಳಿ ಬರುತ್ತಿತ್ತು. ಇದೀಗ ಮುರುಗಾ ಎಲ್ಲಾ ಊಹಾಪೋಹಗಳಿಗೆ ತಮ್ಮ ಹೊಸ ಫೋಟೊ ಶೂಟ್ ಮೂಲಕ ಉತ್ತರ ನೀಡಿದ್ದಾರೆ.

46
ಸೈಲೆಂಟ್ ಆಗಿರುವ ಇಶಿತಾ

ನಟಿ ಇಶಿತಾ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ತಮ್ಮ ವೈವಾಹಿಕ ಜೀವನದ ಪರ್ಸನಲ್ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ತಮ್ಮ ಗಂಡ ಮುರುಗಾ ಫೋಟೊಗಳಿಗೆ ಉತ್ತರಿಸೋದು ಇಲ್ಲ. ಹಾಗಾಗಿ ಜನರಿಗೆ ಇವರಿಬ್ಬರ ಸಂಬಂಧ ಸರಿಯಾಗಿಲ್ಲ ಎನ್ನುವ ಸಂಶಯ ಕಾಡಿತ್ತು.

56
ಈ ಬಗ್ಗೆ ಇಶಿತಾ ಏನು ಹೇಳಿದ್ರು?

ಪ್ರೀತಿಸಿ ಮದುವೆಯಾಗಿರುವ ಇಶಿತಾ ತಮ್ಮ ಕನಸುಗಳನ್ನು ಚೇಸ್ ಮಾಡಿಕೊಂಡು ತಮ್ಮ ದಾರಿಯಲ್ಲಿ ಹೋಗುತ್ತಿದ್ದಾರೆ. ಅದೇ ರೀತಿ ಮುರುಗಾ ಕೂಡ ಅವರ ಕರಿಯರ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುವ ಬಗ್ಗೆ ಈ ಹಿಂದೆ ಮಾತನಾಡಿದ್ದು, ತಮಗೆ ಪರ್ಸನಲ್ ಲೈಫ್ ಪರ್ಸನಲ್ ಆಗಿಡೋದಕ್ಕೇನೆ ಇಷ್ಟ ಎಂದಿದ್ದರು.

66
ಅಭಿಮಾನಿಗಳಿಗೆ ಖುಷಿ

ಇದೀಗ ಹಲವಾರು ಸಮಯದ ಬಳಿಕ ಇಶಿತಾ ಮತ್ತು ಮುರುಗಾ ಅವರು ಜೊತೆಯಾಗಿರುವ ಫೋಟೋಗಳನ್ನು ನೊಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇಷ್ಟು ದಿನ ರೂಮರ್ಸ್ ಕೇಳಿ ಬೇಸರವಾಗಿದ್ದು, ಈವಾಗ ನಿಮ್ಮಿಬ್ಬರನ್ನು ಜೊತೆಯಾಗಿ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ಇಬ್ಬರು ಹೀಗೆ ಯಾವಾಗ್ಲೂ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.

Read more Photos on
click me!

Recommended Stories