ನಾನು ಸೋತಿದ್ದೇನೆ ಸತ್ತಿಲ್ಲ- ಇನ್ಮುಂದೆ Bigg Boss ನೋಡಲ್ಲ ಎನ್ನುತ್ತಲೇ ಕಾರಣ ಹೇಳಿದ ಚಂದ್ರಪ್ರಭ

Published : Nov 11, 2025, 06:05 PM IST

ಬಿಗ್ ಬಾಸ್ ಮನೆಯಿಂದ 6 ವಾರಗಳ ಬಳಿಕ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಮನೆಯಿಂದ ಹೊರಬರಲು ನಾನೇ ನಿರ್ಧರಿಸಿದ್ದೆ, ಅದರ ಕಾರಣ ಮುಂದೆ ಹೇಳುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ಬಿಗ್ ಬಾಸ್ ನೋಡುವುದಿಲ್ಲ, ಅದು ನನ್ನಂತವರಿಗೆ ಅಲ್ಲ ಎಂದಿದ್ದಾರೆ. 

PREV
16
ಚಂದ್ರಪ್ರಭ ಎಲಿಮಿನೇಟ್

Bigg Bossನಲ್ಲಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ಆಗಲೇಬೇಕು. ಆ ಬಗ್ಗೆ ಸುದೀಪ್​ ಅವರು ಘೋಷಿಸುತ್ತಾರೆ. ಈ ಬಾರಿ ಎಲಿಮಿನೇಷನ್​ನಲ್ಲಿ ಚಂದ್ರಪ್ರಭ ಹಾಗೂ ಸುಧಿ ಉಳಿದುಕೊಂಡಿದ್ದರು. ಸುಧಿ ವಿಶೇಷ ಅಧಿಕಾರ ಬಳಸಿ ಅಲ್ಲಿಯೇ ಇದ್ದರೆ, ಚಂದ್ರಪ್ರಭ (Bigg Boss Chandraprabha) ಎಲಿಮಿನೇಟ್ ಆದರು. ಅವರು ಹೊರಕ್ಕೆ ಬಂದು ಬಿಟ್ಟರು.

26
6 ವಾರಗಳ ಬಳಿಕ ಹೊರಕ್ಕೆ

ಚಂದ್ರಪ್ರಭ ಅವರು 6 ವಾರಗಳ ಬಳಿಕ ದಿಢೀರ್ ಅಂತ ಹೊರಗೆ ಬಂದಿದ್ದಾರೆ. ಆದರೆ ಅವರು ಬೇರೆಯದ್ದೇ ರೀತಿಯಲ್ಲಿ ಹೊರಕ್ಕೆ ಬಂದಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಒಂದು ವಾರದಿಂದ ಹೊರ ಬರಬೇಕು ಎಂದು ಅನಿಸುತ್ತಲೇ ಇತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ ಎಂದು ಹೊರ ಬಂದ ತಕ್ಷಣ ರಿಯಾಕ್ಷನ್​ ಕೊಟ್ಟಿದ್ದಾರೆ.

36
ಮುಂದಿನ ದಿನಗಳಲ್ಲಿ ತಿಳಿಸುವೆ

ಇದಾಗಲೇ ಮಾಧ್ಯಮಗಳ ಮುಂದೆ ಮಾತನಾಡಿರುವ ಚಂದ್ರಪ್ರಭ ಅವರು, ಬಿಗ್ ಬಾಸ್ ಎಲಿಮಿನೇಟ್ ಮಾಡುವುದಕ್ಕೂ ಮುನ್ನವೇ ಮನೆಯ ಮೇನ್ ಡೋರ್ ಅನ್ನು ಬಡಿದು, ಆಚೆ ಬರುವ ನಿರ್ಧಾರ ಮಾಡಿರುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದಿದ್ದಾರೆ.

46
ಬಿಗ್​​ಬಾಸ್​ಗೆ ಹೋಗಲ್ಲ, ನೋಡಲ್ಲ

ಇದೇ ವೇಳೆ ಅವರು, 'ಇನ್ನು ಮುಂದೆ ಬಿಗ್‌ಬಾಸ್‌ಗೆ ಹೋಗುವುದಿಲ್ಲ, ಅದು ನನ್ನಂಥವರಿಗೆ ಅಲ್ಲ' ಎನ್ನುವ ಜೊತೆಗೇನೇ ಇನ್ಮುಂದೆ ಬಿಗ್​ಬಾಸ್​​ ಅನ್ನು ನೋಡುವುದಿಲ್ಲ ಕೂಡ ಎಂದಿದ್ದಾರೆ. ನಾನು ಹೇಗೆ ಆಡಿದ್ದೆ ಎನ್ನುವುದು ಕೂಡ ನೋಡಲು ನನಗೆ ಇಷ್ಟವಿಲ್ಲ. ನಾನು ಬಿಗ್​ಬಾಸ್​ನಲ್ಲಿ ಸೋತಿದ್ದೇನೆ, ವಿನಾ ಸತ್ತಿಲ್ಲ. ಹೊರಗೆ ಬರುವುದಕ್ಕೆ ನನ್ನದೇ ಕಾರಣಗಳು ಇವೆ ಎಂದು ನೋವಿನಲ್ಲಿ ನುಡಿದಿದ್ದಾರೆ.

56
ಬಿಗ್​ಬಾಸ್​ ವ್ಯಕ್ತಿತ್ವದ ಆಟ

ನಾನು 'ಗಿಚ್ಚಿ ಗಿಲಿಗಿಲಿ' ವಿಜೇತ ಆಗಿರಬಹುದು. ಆದರೆ ಅದಕ್ಕಿಂತಲೂ ಮಿಗಿಲಾದದ್ದು ಬಿಗ್​ಬಾಸ್​. ಇದು ವ್ಯಕ್ತಿತ್ವದ ಆಟವಾಗಿದ್ದು, ತನಗೆ ಅದು ಸರಿಹೋಗಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.

66
ಕಾವ್ಯಾ-ಗಿಲ್ಲಿ ಗೆಳೆತನದ ಬಗ್ಗೆ

ಅಷ್ಟಕ್ಕೂ, ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ ಗೆಳೆತನದ ಬಗ್ಗೆ ಈ ಮೊದಲು ಚಂದ್ರಪ್ರಭ ಈ ಮೊದಲು ಕೆಟ್ಟದಾಗಿ ಮಾತನಾಡಿದ್ದರು. ಅದು ಒಂದು ಹಂತ ದಾಟಿದ್ದ ಬಗ್ಗೆ ಎಲ್ಲರಲ್ಲಿಯೂ ಅಸಮಾಧಾನವಿತ್ತು. ಕಾವ್ಯಾ ಕೂಡ ತುಂಬಾ ಬೇಸರ ಪಟ್ಟುಕೊಂಡಿದ್ದರು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದ್ದರೂ ಅದನ್ನೂ ಕೇಳಲಿಲ್ಲ. ಕೊನೆಗೇ ಅವರೇ ಹೊರಗೆ ಬರುವ ಪರಿಸ್ಥಿತಿ ಬಂತು.

Read more Photos on
click me!

Recommended Stories