ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

First Published | Jun 7, 2024, 4:10 PM IST

ಸ್ಯಾಂಡಲ್‌ವುಡ್‌ನ ಸ್ಟಾರ್‌ ಜೋಡಿಗಳಲ್ಲಿ ಸಖತ್‌ ಸದ್ದು ಮಾಡುತ್ತಿದ್ದ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಹಾಗೂ ಬಿಗ್‌ ಬಾಸ್‌ ಮೂಲಕವೇ ಫೇಮ್‌ ಪಡೆದುಕೊಂಡಿದ್ದ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಹಾಕಿದ್ದಾರೆ. ಅದರ ಬೆನ್ನಲ್ಲಿಯೇ ಇವರ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಚರ್ಚೆ ಶುರುವಾಗಿದೆ.

ಸ್ಯಾಂಡಲ್‌ವುಡ್‌ನ ಸಖತ್‌ ಕ್ಯೂಟ್‌ ಜೋಡಿ  ನಟಿ ನಿವೇದಿತಾ ಗೌಡ ಹಾಗೂ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 


ಬಿಗ್‌ ಬಾಸ್‌ ಐದನೇ ಸೀಸನ್‌ನಲ್ಲಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲಿಗೆ  ಬಿಗ್‌ಬಾಸ್‌ನಲ್ಲಿ ನಿವೇದಿತಾಳನ್ನು ತನ್ನ ತಂಗಿ ಎಂದೇ ಹೇಳುತ್ತಿದ್ದ ಚಂದನ್‌ ಶೆಟ್ಟಿ ಬಳಿಕ ಮದುವೆಯಾಗಿದ್ದರು.
 

Tap to resize


ಅದಾದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಗುಸುಗುಸುಗಳ ನಡುವೆ, 2020ರ ಫೆಬ್ರವರಿ 26ರಂದು ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಅವರು ಚಂದನ್‌ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಪ್ರಪೋಸ್‌ ಮಾಡಿದ್ದರು.

Niveditha Gowda Chandan Shetty

ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಪ್ರಪೋಸ್‌ ಮಾಡಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಮಂದಿ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದರು.

Chandan Shetty Niveditha Gowda

ಅಂದು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಕೂಡ, ದಸರಾ ಕಾರ್ಯಕ್ರಮದಲ್ಲಿ ಇಂಥ ಘಟನೆ ನಡೆದಿದ್ದು ಸಹಿಸೋದಿಲ್ಲ ಇದು ಅಪರಾಧ ಎಂದು ಹೇಳಿದ್ದರು.

Chandan Shetty Niveditha Gowda

ಬಿಗ್‌ಬಾಸ್‌ನಲ್ಲಿ ಪರಿಚಯವಾಗಿದ್ದ ಈ ಜೋಡಿ ಆರಂಭದಲ್ಲಿ ಸ್ನೇಹಿತರಾಗಿಯೇ ಇದ್ದಿದ್ದರು. ಬಳಿಕ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು.

Chandan Shetty Niveditha Gowda


ಬಿಗ್‌ ಬಾಸ್‌ ಬಳಿಕ ರಾಜಾ ರಾಣಿ ಶೋನಲ್ಲೂ ಈ ಜೋಡಿ ಕಾಣಿಸಿಕೊಂಡಿದ್ದರು. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ  ಫೈನಲಿಸ್ಟ್‌ ಕೂಡ ಆಗಿದ್ದರು.

Chandan Shetty Niveditha Gowda

ಇನ್ನು ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಅವರ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಬಗ್ಗೆ ಇನ್ನೂ ಗೊಂದಲಗಳಿವೆ ಎನ್ನಲಾಗಿದೆ.

ಪರಸ್ಪರ ಒಪ್ಪಿಗೆಯ ಮೂಲಕ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರೂ ಕೂಡ, ಇಬ್ಬರ ನಡುವಿನ ದಾಂಪತ್ಯ ತೋರಿಕೆಯಲ್ಲಿ ಮಾತ್ರವೇ ಚೆನ್ನಾಗಿತ್ತು ಎನ್ನುವ ಮಾತುಗಳೂ ಇವೆ.

ಸೋಶಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ರೀಲ್ಸ್‌ಗಳು ವೈರಲ್‌ ಆಗಿದ್ದರೂ, ಇತ್ತೀಚೆಗೆ ನಿವೇದಿತಾ ಗೌಡ ಅವರ ಹೆಚ್ಚಿನ ರೀಲ್ಸ್‌ಗಳಲ್ಲಿ ಒಬ್ಬರೇ ಕಾಣಿಸಿಕೊಳ್ಳುತ್ತಿದ್ದರು.

ಕೆಲವು ಮೂಲಗಳ ಪ್ರಕಾರ ನಿವೇದಿತಾ ಗೌಡಗೆ ಇದ್ದ ಸೋಶಿಯಲ್‌ ಮೀಡಿಯಾ ಕ್ರೇಜ್‌ನಿಂದಾಗಿಯೇ ಅವರ ಮದುವೆ ವಿಚ್ಚೇದನದವರೆಗೆ ಮುಂದುವರಿದಿದೆ ಎನ್ನಲಾಗಿದೆ.

Latest Videos

click me!