ಕಡ್ಡಿ ಮುರಿದಂತೆ Bigg Boss Kannada ಆಫರ್‌ ರಿಜೆಕ್ಟ್‌ ಮಾಡಿದ ಕನ್ನಡದ ಸೆಲೆಬ್ರಿಟಿಗಳಿವರು!

Published : Sep 09, 2025, 03:08 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12  ಆರಂಭಕ್ಕೆ ದಿನಗಣನೆ ಶುರು ಆಗಿದೆ. ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಆರಂಭ ಆಗಲಿದೆ. ಹಾಗಾದರೆ ಯಾರು? ಯಾರು ಈ ಶೋನಲ್ಲಿ ಭಾಗವಹಿಸಲಿದ್ದಾರೆ? 

PREV
17
ಕಿಚ್ಷ ಸುದೀಪ್‌ ನಿರೂಪಣೆ

ಈ ಬಾರಿ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಯಾರೆಲ್ಲ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ. 

27
ಸ್ಯಾಮ್‌ ಸಮೀರ್‌

ಸ್ಯಾಮ್‌ ಸಮೀರ್‌ ಅವರು ಬಿಗ್‌ ಬಾಸ್‌ ಕನ್ನಡ ಶೋಗೆ ಹೋಗೋದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನನಗೆ ಬಿಗ್‌ ಬಾಸ್‌ ಆಫರ್‌ ಬಂದಿತ್ತು. ಅದು ಫೇಕ್‌ ಅಥವಾ ಸತ್ಯವೋ ಎಂದು ಗೊತ್ತಿಲ್ಲ. ಆದರೆ ನಾನು ಹೋಗೋದಿಲ್ಲ, ನನಗೆ ಇದರಲ್ಲಿ ಆಸಕ್ತಿ ಇಲ್ಲ, ಈ ಅವಕಾಶ ಬೇರೆಯವರಿಗೆ ಸಿಗಲಿ ಎಂದು ಹೇಳಿದ್ದಾರೆ.

37
ಜಯಪ್ರಕಾಶ್‌ ಶೆಟ್ಟಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆಫರ್‌ ಬಂದಿದ್ದು ಸತ್ಯ. ಆದರೆ ನಾನು ಹೋಗೋದಿಲ್ಲ ಎಂದು ಸುದ್ದಿ ನಿರೂಪಕ ಜಯಪ್ರಕಾಶ್‌ ಶೆಟ್ಟಿ ಹೇಳಿದ್ದಾರೆ.

47
ಶ್ರುತಿ ಹರಿಹರನ್‌

ನಟಿ ಶ್ರುತಿ ಹರಿಹರನ್‌ ಕೂಡ ಬಿಗ್‌ ಬಾಸ್‌ ಶೋನಿಂದ ಯಾವುದೇ ಆಫರ್‌ ಬಂದಿಲ್ಲ, ಹೋಗೋದಿಲ್ಲ ಎಂದು ಕಳೆದ ವರ್ಷವೇ ಹೇಳಿದ್ದರು.

57
ಮೇಘನಾ ರಾಜ್‌

ನಾನು ಬಿಗ್‌ ಬಾಸ್‌ ಕನ್ನಡ ಮನೆಗೆ ಹೋಗ್ತಿಲ್ಲ ಎಂದು ನಟಿ ಮೇಘನಾ ರಾಜ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

67
ಅನಿರುದ್ಧ ಜತ್ಕರ್‌

ಕೆಲ ಸೀಸನ್‌ಗಳಿಂದ ನಟ ಅನಿರುದ್ಧ ಅವರು ಬಿಗ್‌ ಬಾಸ್‌ ಮನೆಗೆ ಹೋಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರು ಹೋಗಿಲ್ಲ.

77
ನಟಿ ಅಶ್ವಿನಿ

ಗಟ್ಟಿಮೇಳ ಹಾಗೂ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಅವರು ಬಿಗ್‌ ಬಾಸ್‌ ಆಫರ್‌ ಬಂದರೂ ಕೂಡ ಹೋಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories