ದೀಪಾ ಬದಲಾಗ್ತಿದ್ದಂಗೆ ಬಣ್ಣ ಕೂಡ ಬದಲಾಗಿಬಿಟ್ತು!... ಸೌಂದರ್ಯಳಿಗಿಂತಲೂ ದೀಪಾ ಚೆಂದ ಎಂದ ವೀಕ್ಷಕರು!

First Published | Nov 29, 2024, 10:51 AM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ ಸದ್ಯ ದೀಪಾ ಸಂಪೂರ್ಣವಾಗಿ ಬದಲಾಗಿದ್ದಾಳೆ. ಆಕೆ ಬದಲಾಗ್ತಿದ್ದಂತೆ, ಆಕೆಯ ಬಣ್ಣ ಕೂಡ ಬದಲಾಗಿದೆ, ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದಾರೆ ಅಂತಿದ್ದಾರೆ ಜನ. 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಥೆಯಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಎಲ್ಲರೂ ಹೇಳೋದನ್ನ ಕೇಳಿಸ್ಕೊಂಡು, ಅವರು ಹೇಳಿದಂತೆ ಮಾಡುತ್ತಿದ್ದ ದೀಪಾ ಈಗ ತಿರುಗಿ ಬಿದ್ದಿದ್ದಾಳೆ, ಅದು ಕೂಡ ಸೌಂದರ್ಯನಿಗೆ ಸವಾಲು ಎಸೆದಿದ್ದಾಳೆ. 
 

ನಾನೇ ಈ ಮನೆಗೆ ಎಲ್ಲಾ, ನಾನು ಹೇಳಿದ್ದೇ ಈ ಮನೆಯಲ್ಲಿ ನಡೆಯಬೇಕು ಎನ್ನುತ್ತಾ, ಚಿರುವನ್ನು ತನ್ನ ಕೈಗೊಂಬೆಯಾಗಿಸಿರುವ ಸೌಂದರ್ಯನಿಗೆ ದೀಪಾ ಇದೀಗ ಸವಾಲ್ ಹಾಕಿದ್ದಾಳೆ. ನಾನು ಈ ಮನೆ ಸೊಸೆ, ನಿಮಗೆಷ್ಟು ಹಕ್ಕು ಇದೆಯೋ, ಅಷ್ಟೇ ಹಕ್ಕು ನನಗೂ ಇದೆ ಎಂದಿದ್ದಾಳೆ ದೀಪಾ. 
 

Tap to resize

ಸದ್ಯಕ್ಕಂತೂ ದೀಪಾಳ ಪಾತ್ರ ಬದಲಾವಣೆಯಿಂದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ದೀಪಾ ಹೀಗೆ ಇದ್ರೆನೆ ನೋಡೋಕೆ ಚೆಂದ ಅಂತಿದ್ದಾರೆ. ಅಷ್ಟೇ ಅಲ್ಲ, ದೀಪಾ ಪಾತ್ರ ಬದಲಾಗ್ತಿದ್ದಂತೆ, ದೀಪಾ ರೂಪವೂ ಬದಲಾಗಿದೆ. ಮೊದಲು ಎರಡು ಜಡೆ ಕಟ್ಟಿ, ಕಪ್ಪಗೆ ಕಾಣುತ್ತಿದ್ದ ದೀಪ ಮುಖದಲ್ಲಿ ಈಗ ಹೊಳಪು ಕಾಣುತ್ತಿದೆ. 
 

ಅತ್ತ ಸೌಂದರ್ಯ ಯಾವಾಗಲೂ ಗ್ರ್ಯಾಂಡ್ ಸೀರೆಯುಟ್ಟು ರಾಣಿಯಂತೆ ಮೆರೆಯುತ್ತಿದ್ದವಳು, ಇದೀಗ ಸಿಂಪಲ್ ಸೀರೆ, ಒಂದು ಸಣ್ಣ ಕರಿಮಣಿ ಹಾಕಿ ಸೋತವಳಂತೆ ಕಾಣುತ್ತಿದ್ದಾರೆ. ಇವರಿಬ್ಬರನ್ನು ಜೊತೆಯಾಗಿ ನೋಡಿದ್ರೆ, ಸೌಂದರ್ಯನಿಗಿಂತ ದೀಪಾಳೇ ಈಗ ಮುದ್ದಾಗಿ ಕಾಣಿಸ್ತಿದ್ದಾಳೆ. ವೀಕ್ಷಕರು ಕೂಡ ಅದನ್ನೆ ಹೇಳ್ತಿದ್ದಾರೆ. 
 

ಈಗ ಸ್ವಲ್ಪ ದೀಪ ಫೇಸ್ ಚೆನ್ನಾಗಿ ಕಾಣಿಸ್ತಿದೆ. ಹಾಗೆ ದೀಪಾಗೆ ಸೀರೆ ಹಾಕ್ಸಿ, ಲೂಸ್ ಹೇರ್ ಬಿಡಿ, ಇನ್ನೂ ಚೆನ್ನಾಗಿ ಕಾಣಿಸ್ತಾಳೆ ಅಂದಿದ್ದಾರೆ. ಅಷ್ಟೇ ಅಲ್ಲ ದೀಪ ಈವಾಗ ಬೆಳ್ಳುಗೆ ಆಗಿದ್ದಾಳೆ. ಯಾವ ಕ್ರೀಂ ಹಾಕಿದ್ದು ದೀಪ ಹೇಳಿ, ಪಾತ್ರ ಬದಲಾಗ್ತಿದ್ದಂಗೆ ಬಣ್ಣನು ಬದಲಾಯ್ತು, ದೀಪಾನ ಯಾವಾಗ್ಲೂ ಹೀಗೆ ತೋರಿಸಿ ಎಂದು ಕೇಳಿಕೊಂಡಿದ್ದಾರೆ ಜನ. 
 

ಅಷ್ಟೇ ಅಲ್ಲ ಸೌಂದರ್ಯ ಗಿಂತ ದೀಪನೆ ಸೂಪರ್ ಆಗಿ ಕಾಣಿಸ್ತಿದ್ದಾಳೆ. ಸೌಂದರ್ಯ ಮೇಕ್ಅಪ್ ಸೆಟ್ ಒಳ್ಳೆ ಸೀರೆ ಆವಾಗ್ಲೇ ಸಾಕಾಯ್ತ, ಆದ್ರೂ ಸೌಂದರ್ಯ ಸಿಂಪಲ್ ಆಗಿದ್ರೆನೆ ಚೆನ್ನಾಗಿ ಕಾಣಿಸುತ್ತೆ ಅಂದಿದ್ದಾರೆ. ಜೊತೆಗೆ ದೀಪಗೆ ಇನ್ಮೇಲೆ ಫುಲ್ ಒಳ್ಳೆ ಒಳ್ಳೆ ಬಟ್ಟೆ ಹಾಕಿಸಬೇಕು. ದೀಪಾಳನ್ನು ಸೌಂದರ್ಯ ಥರ ರೆಡಿ ಮಾಡಿ, ಸೂಪರ್ ಆಗಿ ಕಾಣಿಸ್ತಾಳೆ ಎಂದಿದ್ದಾರೆ. 
 

ಒಟ್ನಲ್ಲಿ ಹೇಳ್ಬೇಕಂದ್ರೆ ಬ್ರಹ್ಮಗಂಟು ಸೀರಿಯಲ್ ಕಥೆಗಿಂತ (serial story) ಹೆಚ್ಚಾಗಿ ಜನರು ದೀಪಾ ಮೇಕ್ ಓವರ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ದೀಪಾಳನ್ನು ಇನ್ನಷ್ಟು ಚೆನ್ನಾಗಿ ಡ್ರೆಸ್ ಮಾಡಿರೋದನ್ನ ನೋಡೋಕೆ ಇಷ್ಟ ಪಡ್ತಿದ್ದಾರೆ. ದೀಪಾ ಚೆನ್ನಾಗಿ ಕಾಣ್ಸಿದ್ರೆ ಎಲ್ಲವೂ ಚೆನ್ನಾಗಿರುತ್ತೆ, ಚಿರು ಸಹ ಸರಿಯಾಗ್ತಾನೆ, ಸೌಂದರ್ಯ ಕೂಡ ಸರಿಯಾಳ್ತಾಳೆ ಅಂತಿದ್ದಾರೆ ವೀಕ್ಷಕರು. 
 

Latest Videos

click me!