Brahmagantu: ಬುದ್ಧಿ ಇರೋ ಗಂಡಸರನ್ನು ಸೀರಿಯಲ್​ಗಳಲ್ಲಿ ಬದುಕಲು ಬಿಡೋದೇ ಇಲ್ಲ ನೋಡಿ!

Published : Jun 11, 2026, 12:13 PM IST

ಹೆಚ್ಚಿನ ಸೀರಿಯಲ್​ಗಳಂತೆ 'ಬ್ರಹ್ಮಗಂಟು' ಕೂಡ ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿ ವಿಲನ್ ಸೌಂದರ್ಯಳ ಪತಿ ಗುರು, ಆಕೆಯ ಸತ್ಯವನ್ನು ಬಯಲು ಮಾಡಲು ಹೋದಾಗ ಆಕಸ್ಮಿಕವಾಗಿ ಸಾವನ್ನಪ್ಪುತ್ತಾನೆ. ಈ ಮೂಲಕ ಸೀರಿಯಲ್​ಗಳಲ್ಲಿ ಒಳ್ಳೆಯ ಪುರುಷ ಪಾತ್ರಗಳಿಗೆ ಉಳಿಗಾಲವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

PREV
16
ಮಹಿಳಾ ಪ್ರಧಾನ

ಇಂದು ಸೀರಿಯಲ್​ಗಳು ಎಂದರೆ ಅದು ಮಹಿಳಾ ಪ್ರಧಾನ. ಇದಕ್ಕೆ ಕಾರಣ ಹೆಚ್ಚಿನ ವೀಕ್ಷಕರು ಮಹಿಳೆಯರೇ ಅನ್ನೋದು. ಸೀರಿಯಲ್​ಗಳನ್ನು ಮೈಮೇಲೆ ಆಹ್ವಾನಿಸಿಕೊಂಡು ನೋಡುವ ಬಹುದೊಡ್ಡ ವರ್ಗದ ಮಹಿಳೆಯರು ಇರುವುದಕ್ಕಾಗಿ ಮಹಿಳೆಯರೇ ಸೀರಿಯಲ್​ಗಳಲ್ಲಿ ನಾಯಕ, ನಾಯಕಿ ಜೊತೆಗೆ ವಿಲನ್​ ಕೂಡ. ನಟರು ಅಥವಾ ಪುರುಷರು ಬಹುತೇಕ ಸೀರಿಯಲ್​ಗಳಲ್ಲಿ ಡಮ್ಮಿ ಪೀಸ್​ಗಳು ಅಷ್ಟೇ.

26
ಅಪರೂಪಕ್ಕೆ ಬುದ್ಧಿ

ಆದರೆ ಅಪರೂಪಕ್ಕೆ ಎನ್ನುವಂತೆ ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ವಿಲನ್​ ಸೌಂದರ್ಯ ಪತಿ ಗುರು ಒಳ್ಳೆಯವನಾಗಿದ್ದ. ಅದಕ್ಕಿಂತಲೂ ಬಹುಬೇಗನೆ ಪತ್ನಿಯ ಸತ್ಯದ ಅರಿವಾಗಿತ್ತು. ಆದರೆ ಸೀರಿಯಲ್​ಗಳಲ್ಲಿ ಪುರುಷರು ಡಮ್ಮಿ ಪೀಸ್​ ಆಗಿದ್ರೆ ಮಾತ್ರ ಬದುಕುತ್ತಾರೆ, ಒಳ್ಳೆಯವಾದ್ರೆ ಸಾಯಿಸಿಬಿಡ್ತಾರೆ ಎನ್ನೋ ಮಾತು ಈ ಸೀರಿಯಲ್​​ನಲ್ಲಿಯೂ ಇದೀಗ ನಿಜವಾಗಿದೆ.

36
ಸೌಂದರ್ಯಳ ಪತಿ ಪ್ರತ್ಯಕ್ಷ

ಸೌಂದರ್ಯಳ ಪತಿ ಗುರು ದಿಢೀರ್ ಎಂದು ಸೀರಿಯಲ್​​ಗೆ ಪ್ರತ್ಯಕ್ಷವಾದವ. ಬಹುಶಃ ಸೌಂದರ್ಯಳ ರಹಸ್ಯ ಬಿಚ್ಚಿಡಲು, ಆಕೆಯ ಕೈಯಿಂದ ಒಂದು ಸಾವಾಗಲು ಈ ಪಾತ್ರವನ್ನು ಸೃಷ್ಟಿ ಮಾಡಿರಬಹುದು. ಸೌಂದರ್ಯಳಿಗೆ ಮಗುವಾಗುವುದಿಲ್ಲ ಎಂಬ ಸತ್ಯ ದಿಶಾಗೆ ತಿಳಿದಿತ್ತು. ಆದರೆ, ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ನಾಟಕವಾಡಿದ್ದ ಸೌಂದರ್ಯ ಕೊನೆಗೆ ತನಗೆ ಗರ್ಭಪಾತ ಆಗಿದ್ದು, ಅದಕ್ಕೆ ದಿಶಾಳೇ ಕಾರಣ ಎಂದು ಹೇಳಿಬಿಟ್ಟಳು.

46
ಕಣ್ಮುಚ್ಚಿ ನಂಬೋ ಪೆದ್ದು ನಾಯಕ

ಈ ಸೀರಿಯಲ್​ನಲ್ಲಿಯೂ ನಾಯಕ ಬಹುತೇಕ ಎಲ್ಲಾ ಸೀರಿಯಲ್​ಗಳಂತೆ ಪೆದ್ದು. ಅತ್ತಿಗೆ ಚಿರುವನ್ನು ಕಣ್ಮುಚ್ಚಿ ನಂಬಿರುವ ಚಿರು ಪತ್ನಿ ದಿಶಾಳಮೇಲೆ ಕೈಮಾಡಿದ. ನನ್ನ ತಪ್ಪಿಲ್ಲ ಎಂದು ಹೇಳಿದ್ರೂ ಆತ ಕೇಳಲಿಲ್ಲ.

56
ಪತಿಗೆ ಗುಟ್ಟು ರಟ್ಟು

ಆದರೆ, ರಿಯಲ್​ ವಿಷ್ಯ ಗುರುಗೆ ಗೊತ್ತಾಗಿ, ಸೌಂದರ್ಯಳನ್ನು ಕರೆದು ಆಕೆಯ ಬಂಡವಾಳ ಎಲ್ಲರ ಎದುರು ಬಯಲು ಮಾಡುವುದಾಗಿ ಹೇಳಿದ. ಸೌಂದರ್ಯಳಿಗೆ ನಿಂತ ನೆಲವೇ ಕುಸಿದಂತಾಯ್ತು.

66
ಗಂಡನನ್ನು ಸಾಯಿಸಿಯೇ ಬಿಟ್ರು!

ಅವಳು ಗಂಡನನ್ನು ತಡೆಯಲು ಹೋದಾಗ, ಕಾಲು ಜಾರಿ ಆತ ಬಿದ್ದುಬಿಟ್ಟ. ಅಲ್ಲಿಗೆ ಅವನ ಕಥೆ ಮುಗೀತು. ಒಳ್ಳೆಯ ಗಂಡಸರಿಗೆ ಸೀರಿಯಲ್​ಗಳಲ್ಲಿ ಕಾಲವಿಲ್ಲ ಎನ್ನೋದು ಮತ್ತೊಮ್ಮೆ ಸಾಬೀತಾಯ್ತು. ಅತ್ತ ಮಾವ ಕೂಡ ಸೌಂದರ್ಯಳ ವಿಷಯ ತಿಳಿದಿರೋದ್ರಿಂದ ಅವನನ್ನು ಪೇಷಂಟ್​ ಮಾಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories