ಬ್ರಹ್ಮಗಂಟು ಧಾರಾವಾಹಿಯು ಅಂತಿಮ ಹಂತ ತಲುಪಿದ್ದು, ದಿಶಾಳೇ ದೀಪಾ ಎಂಬ ಸತ್ಯವನ್ನು ಚಿರು ಪತ್ತೆಹಚ್ಚಿದ್ದಾನೆ. ಕೃತಕ ಮಳೆ ಸೃಷ್ಟಿಸಿ ದಿಶಾಳ ಮೇಕಪ್ ಕರಗಿಸಿ ಸತ್ಯವನ್ನು ಸಾಬೀತುಪಡಿಸುವ ಮೂಲಕ ಕಥೆಗೆ ಸುಖಾಂತ್ಯ ಹಾಡಲಾಗುತ್ತಿದೆ. ಈ ಮೇಕಪ್ ವಿಚಾರವೇ ಇದೀಗ ವೀಕ್ಷಕರಲ್ಲಿ ತಮಾಷೆಗೆ ಕಾರಣವಾಗಿದೆ.
ಬ್ರಹ್ಮಗಂಟು ಸೀರಿಯಲ್ (Brahmagantu Serial)ನ ಅಂತಿಮ ಸಂಚಿಕೆಗಳು ಪ್ರಸಾರ ಆಗ್ತಿವೆ. ಕಳೆದ ಎರಡು ವರ್ಷಗಳಿಂದ ವೀಕ್ಷಕರನ್ನು ಹಿಡಿದುಕೊಂಡಿದ್ದ ಸೀರಿಯಲ್ ಒಂದೊಳ್ಳೆ ರೀತಿಯಲ್ಲಿ, ಹರಿಬರಿ ಮಾಡದೇ ಮುಗಿಸುತ್ತಿದ್ದಾರೆ.
26
ಅಂದುಕೊಂಡಂತೆ ಮುಕ್ತಾಯ
ಎಲ್ಲರೂ ಅಂದುಕೊಂಡ ರೀತಿಯಲ್ಲಿಯೇ ಸೀರಿಯಲ್ ಮುಗಿಯತ್ತೆ. ಇದರಲ್ಲಿ ಮಹಾ ಟ್ವಿಸ್ಟ್ ಏನೂ ಇಲ್ಲ. ಇದಾಗಲೇ ಚಿರುಗೆ ದಿಶಾನೇ ದೀಪಾ ಎನ್ನುವ ಸತ್ಯ ತಿಳಿದಿದೆ. ದೀಪಾ ಅಣ್ಣ ನರಸಿಂಹನಿಗೂ ಈ ವಿಷಯವನ್ನು ತಿಳಿಸಿದ್ದಾನೆ. ಇನ್ನು ಅಪ್ಪ, ಅಮ್ಮ ಅವರಿಗೆ ಮೊದಲೇ ಗೊತ್ತಿದೆ.
36
ಸತ್ಯ ತಿಳಿದ ಚಿರು
ಈಗ ಗೊತ್ತಾಗಬೇಕಿರುವುದು ಸೌಂದರ್ಯಂಗೆ ಮಾತ್ರ. ಅದು ಅಂತಿಮ ದಿನ ಗೊತ್ತಾಗಬಹುದು. ಏಕೆಂದರೆ, ಸದ್ಯ ದೀಪಾ-ದಿಶಾ ಒಬ್ಬಳೇ ಎಂದು ಗೊತ್ತಾಗಿ ದಿಶಾಳನ್ನು ಚಿರು ಲವ್ ಮಾಡ್ತಿದ್ರೆ, ಇವರಿಬ್ಬರ ಮದುವೆ ಮಾಡಿಸಿದ್ದ ಸೌಂದರ್ಯ ತತ್ತರಿಸಿಹೋಗಿದ್ದಾಳೆ. ಚಿರು ಎದುರು ಒಳ್ಳೆಯವಳಂತೆ ನಟಿಸಲೇಬೇಕಿದೆ.
ಇದಾಗಲೇ ಚಿರುಗೆ ಸೌಂದರ್ಯಳ ಸತ್ಯ ಗೊತ್ತಾಗೋದು ಬಾಕಿ ಇದೆ. ಏಕೆಂದರೆ ಅವನು ಅತ್ತಿಗೆಗೆ ಅಮ್ಮನ ಸ್ಥಾನ ನೀಡಿದ್ದಾನೆ. ಸೌಂದರ್ಯಳ ಗಂಡ ದೀಪಾ ಮನೆಯಲ್ಲಿ ಇದ್ದಾನೆ. ಅವನು ಎದುರಿಗೆ ಬಂದರೆ ಅವನ ಬಾಯಿಯಿಂದಲೇ ಸೌಂದರ್ಯಳ ಬಗ್ಗೆ ಹೇಳಿದ್ದರೆ ಅಲ್ಲಿಗೆ ಚಿರುಗೆ ಎಲ್ಲಾ ಗೊತ್ತಾಗತ್ತೆ.
56
ಸಾಕ್ಷಿ ಹುಡುಕ ಹೊರಟ ದೀಪಾ
ದೀಪಾ ಕೂಡ ಸೌಂದರ್ಯಳ ಬಂಡವಾಳವನ್ನು ಸಾಕ್ಷಿ ಸಹಿತ ಹುಡುಕಲು ಹೊರಟಿದ್ದಾಳೆ. ಅಲ್ಲಿಗೆ ಚಿರುಗೆ ಸತ್ಯ ಗೊತ್ತಾದರೆ ಸೀರಿಯಲ್ ಮುಗಿದಂತೆ. ಆದರೆ ಇವೆಲ್ಲವುಗಳ ಮಧ್ಯೆ ಒಂದು ಸಕತ್ ಟ್ರೋಲ್ ಆಗ್ತಿರೋದು ಏನೆಂದರೆ, ದಿಶಾ ಇನ್ನೂ ವಾಟರ್ಪ್ರೂಫ್ ಮೇಕಪ್ ಹಾಕಿಕೊಳ್ಳದೇ, ನೀರು ಚಿಮ್ಮಿಸಿದರೆ ಸಾಕು ಕಲರ್ ಬಿಡುವ ಮೇಕಪ್ ಹಾಕಿಕೊಳ್ತಿರೋದು. ಇದಾಗಲೇ ಹಲವಾರು ಬಾರಿ ಈ ಬಗ್ಗೆ ವೀಕ್ಷಕರು ಸಾಕಷ್ಟು ತಮಾಷೆ ಮಾಡಿದ್ದಾರೆ.
66
ವಾಟರ್ಪ್ರೂಫ್ ಮೇಕಪ್ ಸಿಗದೇ...
ಇದೀಗ ಕ್ಲೈಮ್ಯಾಕ್ಸ್ ಸೀನ್ನಲ್ಲಿಯೇ ಇದೇ ಆಗಿದೆ. ದಿಶಾ ಮತ್ತು ದೀಪಾ ಒಬ್ಬಳೇ ಎನ್ನುವುದನ್ನು ಸಾಬೀತು ಮಾಡಲು ಚಿರು, ಸ್ನೇಹಿತನಿಗೆ ಹೇಳಿ ಮಳೆಯನ್ನು ಬರೆಸಿದ್ದಾನೆ. ಅಲ್ಲಿ ದಿಶಾಳನ್ನು ಕರೆಸಿದ್ದಾನೆ. ದಿಶಾ ಮಳೆಯಲ್ಲಿ ನೆಂದಾಗ ಅವಳ ಮೇಕಪ್ ಹೋಗಿದೆ. ಆಗ ಚಿರು ಅವಳಿಗೆ ಕನ್ನಡಕ ತೊಡಿಸಿದ್ದಾನೆ. ಅಲ್ಲಿಗೆ ದೀಪಾ ಮತ್ತು ಚಿರು ಒಂದಾಗಿದ್ದಾರೆ. ಇದರ ಪ್ರೊಮೋ ನೋಡುತ್ತಿದ್ದಂತೆಯೇ ನೆಟ್ಟಿಗರು ದೀಪಾಳ ಕಾಲೆಳೆಯುತ್ತಿದ್ದಾರೆ. ಕೊನೆಗೂ ವಾಟರ್ಪ್ರೂಫ್ ಮೇಕಪ್ ಸಿಗದೇ ಸೀರಿಯಲ್ ಮುಗಿಸಿಬಿಟ್ರಲ್ಲಾ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.