ಒಳ್ಳೆಯದು ಮಾಡಲು ಹೋಗಿ ಸಮಸ್ಯೆ ತನ್ಕೊಂಡಿದ್ರು; ಓಡಿ ಹೋಗಿ ಮದುವೆಯಾಗಿದ್ದ ಕನ್ನಡ ಯುಟ್ಯೂಬರ್ ಜೋಡಿ ಈಗ 23 ಲಕ್ಷದ ಕಾರ್ ಮಾಲೀಕರು

Published : Aug 02, 2026, 10:25 AM IST

ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ದೇವಸ್ಥಾನದಲ್ಲಿ ಮದುವೆಯಾದ ಈ ಕನ್ನಡ ಯುಟ್ಯೂಬರ್ ಜೋಡಿ ಇದೀಗ ಜೀವನದಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ನ್ನಡ ಯುಟ್ಯೂಬರ್ ಜೋಡಿ ಈಗ 23 ಲಕ್ಷದ ಕಾರ್ ಮಾಲೀಕರು

PREV
15
ಪಿಯುಸಿಯಲ್ಲೇ ಶುರುವಾಗಿತ್ತು ಪ್ರೀತಿ

ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ದೇವಸ್ಥಾನದಲ್ಲಿ ಮದುವೆಯಾದ ಈ ಕನ್ನಡ ಯುಟ್ಯೂಬರ್ ಜೋಡಿ ಇದೀಗ ಜೀವನದಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ಅಷ್ಟೇ ಅಲ್ಲ, ತಮ್ಮ ವೈಯಕ್ತಿಕ ಜೀವನದ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಉದ್ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದೇ ಕೆಲಸ ಕೆಲವೊಮ್ಮೆ ಅವರಿಗೆ ಸಂಕಷ್ಟವನ್ನೂ ತಂದಿದೆ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಮಾಹಿತಿ ಹಂಚಿಕೊಂಡಿದ್ದಕ್ಕೆ ಕಂಪೆನಿಯಿಂದ ನೋಟಿಸ್ ಪಡೆದುಕೊಂಡು, ಕೇಸ್ ಕೂಡ ಎದುರಿಸಿದ ಈ ಜೋಡಿ ಇದೀಗ ತಮ್ಮದೇ ಆದ ಹೊಸ ಮೈಲಿಗಲ್ಲು ತಲುಪಿದೆ.

ಪಿಯುಸಿಯಲ್ಲೇ ಶುರುವಾಗಿತ್ತು ಪ್ರೀತಿ

ತಾರೇಶ್ ಹಾಗೂ ಸ್ವಾತಿಗೆ ಪಿಯುಸಿ ಓದುತ್ತಿದ್ದ ಸಮಯದಲ್ಲೇ ಪರಿಚಯವಾಗಿತ್ತು. ಈ ಪರಿಚಯ ಮುಂದೆ ಪ್ರೀತಿಗೆ ತಿರುಗಿತ್ತು. ಆದರೆ ಇವರ ಪ್ರೀತಿಗೆ ಸ್ವಾತಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಮನೆಯವರ ವಿರೋಧದ ನಡುವೆಯೇ ಇಬ್ಬರೂ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

25
ಒಳ್ಳೆಯದು ಮಾಡಲು ಹೋಗಿ ಕೇಸ್ ಎದುರಿಸಿದ್ರು

ತಾರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಉದ್ಯೋಗ ಹುಡುಕುತ್ತಿರುವವರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ, ತಮಗೆ ಸಿಗುವ ಮಾಹಿತಿಯನ್ನು ಪರಿಶೀಲಿಸಿ ಜನರಿಗೆ ತಿಳಿಸುತ್ತಿದ್ದರು. ಆದರೆ, ಇದೇ ವಿಚಾರದಲ್ಲಿ ಅವರಿಗೆ ಸಮಸ್ಯೆಯೊಂದು ಎದುರಾಗಿತ್ತು. ತಾರೇಶ್ ಅವರು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ನೋಟಿಸ್ ಬಂದಿತ್ತು ಎನ್ನಲಾಗಿದೆ. "ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರು ಬೇರೆ ಕಡೆ ಜಾಬ್ ಇದೆ ಎಂದು ಮಾಹಿತಿ ನೀಡಬಾರದು. ಇದು ಕಂಪೆನಿ ನಿಯಮಕ್ಕೆ ವಿರುದ್ಧ" ಎಂದು ನೋಟಿಸ್ ನೀಡಲಾಗಿತ್ತು

ಬೇರೆಯವರಿಗೆ ಕೆಲಸ ಸಿಗಲಿ ಅಂತ ಹರಕೆ ಹೊತ್ತಿದ್ದರು

ತಮ್ಮಿಂದ ಉದ್ಯೋಗದ ಮಾಹಿತಿ ಪಡೆದವರಿಗೆ ಕೆಲಸ ಸಿಗಬೇಕು ಎಂಬುದು ತಾರೇಶ್ ಅವರ ಆಸೆಯಾಗಿತ್ತಂತೆ. ಭಾರತದಲ್ಲಿ ಉದ್ಯೋಗಕ್ಕಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸುತ್ತಾರೆ. ಆದರೆ, ಅವರಲ್ಲಿ ಪ್ರತಿಭೆ ಇರುವವರಿಗೆ ಮಾತ್ರ ಕೆಲಸ ಸಿಗುತ್ತದೆ ಎಂಬುದು ತಮಗೆ ಗೊತ್ತಿದೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಪಡೆದವರಿಗೆ ಒಳ್ಳೆಯದಾಗಲಿ, ಉದ್ಯೋಗ ಸಿಗಲಿ ಎಂಬ ಉದ್ದೇಶದಿಂದ ಚಾಮುಂಡಿ ಬೆಟ್ಟ ಹತ್ತಿದ್ದೆ. ನೆಲದ ಮೇಲೆ ಊಟ ಮಾಡಿದ್ದೆ ಎಂದು ತಾರೇಶ್ ತಮ್ಮ ಅನುಭವವನ್ನು ಹೇಳಿಕೊಂಡಿದ್ದರು.

35
ಈಗ ₹23 ಲಕ್ಷದ ಕಾರ್ ಮಾಲೀಕರು

ಇದೀಗ ಈ ಯೂಟ್ಯೂಬರ್ ಜೋಡಿ ಜೀವನದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ MG Windsor ಎಲೆಕ್ಟ್ರಿಕ್ ಕಾರನ್ನು ಈ ಜೋಡಿ ಖರೀದಿಸಿದೆ.ಕಾರು ಖರೀದಿಸಿ ಮೂರು ತಿಂಗಳಾಗಿದ್ದು, ಮೊದಲ ಸರ್ವಿಸ್ ಕೂಡ ಮುಗಿದಿದೆ. ಇದೀಗ ತಮ್ಮ ಹೊಸ ಕಾರಿನ ಸಂಪೂರ್ಣ ರಿವ್ಯೂ ಅನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ಅನಿರೀಕ್ಷಿತವಾಗಿ ಕೈಗೂಡಿದ ಕನಸು

ಕಾರಿನ ಬಗ್ಗೆ ಮಾತನಾಡಿರುವ ತಾರೇಶ್, MG ಬ್ರ್ಯಾಂಡ್ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ. MG ಬ್ರ್ಯಾಂಡ್ ಅಂದರೆ ನಮಗೆ ಮೊದಲಿನಿಂದಲೂ ಇಷ್ಟ. ಆನ್ ದಿ ವೇನಲ್ಲಿ MG ಶೋರೂಮ್ ಇತ್ತು. ಕೆಲಸಕ್ಕೆ ಹೋಗುವಾಗಲೆಲ್ಲಾ ಅಲ್ಲಿಂದ ಒಂದು ಕಾರು ತೆಗೆದುಕೊಳ್ಳಬೇಕು ಎಂದು ಅಂದುಕೊಳ್ಳುತ್ತಿದ್ದೆವು. ಆದರೆ ಈ ಕಾರನ್ನೇ ತೆಗೆದುಕೊಳ್ಳುತ್ತೇವೆ ಎಂದು ಯಾವುದೇ ಪ್ಲಾನ್ ಮಾಡಿರಲಿಲ್ಲ. ಇದು ಅನಿರೀಕ್ಷಿತವಾಗಿ ಕೈಗೂಡಿದ ಕನಸು ಎಂದು ಸಂತಸ ಹಂಚಿಕೊಂಡಿದ್ದಾರೆ. ಕಾರಿನ ಸೀಟುಗಳು ಹಾಗೂ ಕಂಫರ್ಟ್ ಬಗ್ಗೆ ತಾರೇಶ್ ಅವರ ತಾಯಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

45
ಫ್ಲೈಟ್‌ನಲ್ಲಿ ಕೂತಂತ ಅನುಭವ ಎಂದ ತಂದೆ

ತಾರೇಶ್ ಅವರ ತಂದೆ ಕೂಡ ಕಾರಿನ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಾಡಿ ಓಡಿಸುವಾಗ ಯಾವುದೇ ಸೌಂಡ್ ಬರಲ್ಲ. ಯಾವುದೇ ಡಿಸ್ಟರ್ಬೆನ್ಸ್ ಇರಲ್ಲ. ಒಳಗೆ ಕೂತರೆ ಫ್ಲೈಟ್‌ನಲ್ಲಿ ಕೂತಂತ ಅನುಭವ ಆಗುತ್ತೆ. ಕಂಫರ್ಟ್ ತುಂಬಾನೇ ಚೆನ್ನಾಗಿದೆ" ಎಂದು ಅವರು ಹೇಳಿದ್ದಾರೆ. ಇನ್ನು ಗೇರ್ ಕಾರು ಓಡಿಸಲು ಭಯಪಡುತ್ತಿದ್ದ ತಮ್ಮ ತಂದೆ, ಈ ಎಲೆಕ್ಟ್ರಿಕ್ ಕಾರನ್ನು ಮಾತ್ರ ತುಂಬಾ ಸುಲಭವಾಗಿ ಹಾಗೂ ಆತ್ಮವಿಶ್ವಾಸದಿಂದ ಓಡಿಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

400 ಕಿ.ಮೀ ವರೆಗೆ ರೇಂಜ್

ಕಾರಿನ ರೇಂಜ್ ಬಗ್ಗೆ ಮಾತನಾಡಿರುವ ತಾರೇಶ್, ಕಂಪೆನಿ 450 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಿದ್ದರೂ, ಸಾಮಾನ್ಯವಾಗಿ ನಾರ್ಮಲ್ ಮೋಡ್‌ನಲ್ಲಿ ಆರಾಮವಾಗಿ ಸುಮಾರು 400 ಕಿ.ಮೀ ರೇಂಜ್ ಸಿಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಕಾರಿನ ತೂಕ, ಚಾಲನೆ ಮಾಡುವ ರೀತಿ ಸೇರಿದಂತೆ ಹಲವು ಅಂಶಗಳ ಮೇಲೆ ರೇಂಜ್ ಬದಲಾಗಬಹುದು ಎಂದಿದ್ದಾರೆ. ಈ ಬೆಲೆಗೆ ಸಿಗುವ ಕಂಫರ್ಟ್ ಹಾಗೂ ಲಕ್ಸುರಿ ಬೇರೆ ಕಾರುಗಳಲ್ಲಿ ಸಿಗುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ವೇಳೆ ಕಾರಿನ ಇಂಟೀರಿಯರ್ ಎಲ್‌ಇಡಿ ಲೈಟ್ಸ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

55
19.5 ಲಕ್ಷದಿಂದ ₹23 ಲಕ್ಷಕ್ಕೆ ಏರಿದ ಬೆಲೆ

ಈ ಕಾರಿನ ಟಾಪ್ ಎಂಡ್ ವೇರಿಯೆಂಟ್‌ನ ಆನ್‌ರೋಡ್ ಬೆಲೆ ಪ್ರಸ್ತುತ ಸುಮಾರು ₹23 ಲಕ್ಷದ ಆಸುಪಾಸಿನಲ್ಲಿದೆ ಎಂದು ತಾರೇಶ್ ಹೇಳಿದ್ದಾರೆ. ನಾವು ಬುಕ್ ಮಾಡಿದಾಗ ಕಾರಿನ ಬೆಲೆ ₹19.5 ಲಕ್ಷ ಇತ್ತು. ಈಗ ರೋಡ್ ಟ್ಯಾಕ್ಸ್ ಸೇರಿ ಸುಮಾರು ₹23 ಲಕ್ಷ ಆಗಿದೆ. ನಮ್ಮ ಅದೃಷ್ಟಕ್ಕೆ ನಮಗೆ ಹಳೆಯ ಬೆಲೆಯಲ್ಲೇ ಕಾರು ಸಿಕ್ಕಿತು ಎಂದು ಅವರು ಹೇಳಿದ್ದಾರೆ.

ಕಾರು ಖರೀದಿಸಲು ಅಮ್ಮನ ಒಡವೆ ಕೂಡ ಇಟ್ಟಿದ್ದರು

ಈ ಹೊಸ ಕಾರಿನ ಖರೀದಿಯ ಹಿಂದೆ ತಮ್ಮ ಕುಟುಂಬದ ದೊಡ್ಡ ಸ್ಟ್ರಗಲ್ ಇದೆ ಎಂದು ತಾರೇಶ್ ಭಾವುಕರಾಗಿ ಹೇಳಿದ್ದಾರೆ. ನಮ್ಮ ಹಳೆಯ ಸ್ವಿಫ್ಟ್ ಕಾರನ್ನು ಕೇವಲ ₹4 ಲಕ್ಷಕ್ಕೆ ಮಾರಾಟ ಮಾಡಬೇಕಾಯಿತು. ಅಮ್ಮನ ಒಡವೆಗಳನ್ನು ಇಟ್ಟು ಹಣ ಹೊಂದಿಸಬೇಕಾಯಿತು. ಇಂಟೀರಿಯರ್ ಹಾಗೂ ಇತರ ಖರ್ಚುಗಳೆಲ್ಲ ಸೇರಿ ಸುಮಾರು ₹25 ಲಕ್ಷದ ಆಸುಪಾಸು ಖರ್ಚಾಗಿದೆ" ಎಂದು ತಮ್ಮ ಕಾರು ಖರೀದಿಯ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories