ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ

Published : Apr 04, 2026, 03:09 PM IST

ಕನ್ನಡ ಧಾರಾವಾಹಿಗಳಲ್ಲಿ ಪುರುಷರನ್ನು ಶತದಡ್ಡರೆಂದು ಚಿತ್ರಿಸುವುದು ಸಾಮಾನ್ಯವಾಗಿದೆ. 'ಬ್ರಹ್ಮಗಂಟು' ಮತ್ತು 'ಶ್ರಾವಣಿ ಸುಬ್ರಹ್ಮಣ್ಯ'ದಂತಹ ಸೀರಿಯಲ್‌ಗಳಲ್ಲಿ, ನಾಯಕರು ವೇಷ ಬದಲಿಸಿ ಬಂದ ತಮ್ಮ ಪತ್ನಿಯರನ್ನು ಗುರುತಿಸಲು ವಿಫಲರಾಗುತ್ತಾರೆ. ಈ ಚಿತ್ರಣವು ಪುರುಷ ವೀಕ್ಷಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ

PREV
16
ಮಹಿಳೆಯರೇ ನಂಬರ್​ 1

ಸೀರಿಯಲ್​ಗಳು ಯಾವ ಭಾಷೆಯಾದರೂ ಇರಲಿ, ಅಲ್ಲಿ ಮೈಮನವನ್ನೆಲ್ಲಾ ಒಂದು ಮಾಡಿ, ಆ ಸೀರಿಯಲ್​ನಲ್ಲಿ ಇರೋ ಪಾತ್ರಗಳನ್ನು ಮೈಮೇಲೆ ಆಹ್ವಾನಿಸಿಕೊಂಡು ಆಸ್ವಾದಿಸುವಲ್ಲಿ ಮಹಿಳೆಯರದ್ದು ಎತ್ತಿದ ಕೈ ಎನ್ನೋದೇನೂ ಹೊಸ ವಿಷಯವಲ್ಲ. ಇದೇ ಕಾರಣಕ್ಕೆ ಎಲ್ಲಾ ಸೀರಿಯಲ್​ಗಳಲ್ಲಿಯೂ ಮಹಿಳೆಯೇ ನಾಯಕಿ, ಮಹಿಳೆಯೇ ವಿಲನ್​. ಪುರುಷ ಎನ್ನೋನು ನೆಪಕ್ಕೆ ಮಾತ್ರ, ಇದ್ದರೂ ಆತ ಶತದಡ್ಡ.

26
ಪುರುಷರು ಶತದಡ್ಡರು

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಪುರುಷನನ್ನು ಶತದಡ್ಡ ಎಂದೇ ತೋರಿಸುವುದು ಸೀರಿಯಲ್​ ಯುಗ ಆರಂಭವಾದಾಗಿನಿಂದಲೂ ನಡೆದೇ ಬಂದಿದೆ. ಅಲ್ಲಿರುವ ಲೇಡಿ ವಿಲನ್​ಗಳು ವಿಲನ್​ ಎಂದು ಅವರಿಗೆ ಗೊತ್ತಾಗೋದೇ ಇಲ್ಲ. ಅವರು ಸರಿಯಿಲ್ಲ ಎಂದು ಗಂಡನಿಗೆ ತಿಳಿಸುವುದೇ ಹೀರೋಯಿನ್​ಗಳ ವರ್ಷಾನುಗಟ್ಟಲೆ ಕೆಲಸ. ಅದು ಹೇಗೆ ಹೇಳಿದ್ರು, ಯಾವ ರೂಪದಲ್ಲಿ ಹೇಳಿದ್ರೂ ಸೀರಿಯಲ್​ ಗಂಡಸರಿಗೆ ಅರ್ಥನೇ ಆಗಲ್ಲ ಎನ್ನುವುದು ಮಾತ್ರ ಸೋಜಿಗ.

36
ಸಮಾಧಾನ ಪಟ್ಕೊಂಡ್ರೆ ಆಗಿದ್ದೇ ಬೇರೆ

ಇರಲಿ ಬಿಡಿ ಇಂಥ ಶತದಡ್ಡರನ್ನಾಗಿ ಮಾಡಿರೋ ಪುರುಷರನ್ನು ಕಂಡು ಮಹಿಳಾ ವೀಕ್ಷಕರು ಸಮಾಧಾನ ಪಟ್ಟುಕೊಳ್ತಿದ್ದಾರಲ್ಲ, ಅಷ್ಟೇ ಸಾಕು ಎಂದು ತಮ್ಮಷ್ಟಕ್ಕೆ ತಾವು ಸಮಾಧಾನ ಮಾಡ್ಕೋತಿರೋ ಪುರುಷರು ಅದೆಷ್ಟೋ ಮಂದಿ. ಕೆಲವೊಮ್ಮೆ ಈ ಸೀರಿಯಲ್​ ಬರೆದವರ, ನಿರ್ದೇಶಕ ಮೇಲೆ ಕೋಪ ಮಾಡಿಕೊಂಡ್ರೂ ಪುರುಷರದ್ದು ಬಡವನ ಕೋಪ... ಎನ್ನೋದೇ ಆಗಿ ಬಿಟ್ಟಿದೆ.

46
ಬ್ರಹ್ಮಗಂಟು ಹಾಸ್ಯ

ಆದ್ರೆ ಇದೀಗ ಬ್ರಹ್ಮಗಂಟು ಸೀರಿಯಲ್​​ (Brahmagantu Serial) ನೋಡಿ ಹಲವರು ಸಿಕ್ಕಾಪಟ್ಟೆ ನಗುತ್ತಿದ್ದರೆ, ಮತ್ತೆ ಪುರುಷರ ಕೋಪ ಅಂತೂ ನೆತ್ತಿಗೇರಿತ್ತು. ಆದರೆ ಸ್ವಲ್ಪ ಸಮಾಧಾನ ಪಟ್ಟುಕೊಂಡಿದ್ದರು. ಇದಕ್ಕೆ ಕಾರಣ, ದೀಪಾ, ದಿಶಾ ಆಗಿ ಸ್ವಲ್ಪ ಮೇಕಪ್​ ಮಾಡಿಕೊಂಡು ಬಂದರೆ ಅವಳು ತನ್ನದೇ ಹೆಂಡತಿ ಎಂದು ಚಿರುಗೂ ಗೊತ್ತಾಗ್ತಿಲ್ಲ, ಬುದ್ಧಿವಂತ ವಿಲನ್​ ಸೌಂದರ್ಯ ಸೇರಿ ಸ್ವಂತ ಅಪ್ಪ-ಅಮ್ಮಂಗೇ ತಿಳೀತಿಲ್ಲ. ಈಗ ಅಪ್ಪ-ಅಮ್ಮಂಗೆ ದೀಪಾನೇ ಹೇಳಿದ ಬಳಿಕ ಗೊತ್ತಾಗಿದೆ ಬಿಟ್ರೆ, ದೀಪಾಳ ದನಿ, ಅವಳ ನಡತೆ ಅದೂ ಹೋಗ್ಲಿ ಅವಳ ರೂಪ ನೋಡಿದ್ರೂ ಸ್ವಲ್ಪನೂ ಡೌಟ್​ ಬರದೇ ಇರೋದು ಮಾತ್ರ ವಿಚಿತ್ರ ಆದ್ರೂ ಸತ್ಯ ಎಂದುಕೊಂಡೇ ಎಂಜಾಯ್​ ಮಾಡ್ತಿದ್ದಾರೆ ವೀಕ್ಷಕರು.

56
ಗಂಡಸರ ಸಮಾಧಾನ

ಇದರಲ್ಲಿ ಗಂಡನಿಗೆ ಮಾತ್ರವಲ್ಲ, ಯಾರಿಗೂ ದೀಪಾನೇ ದಿಶಾ ಎಂದು ಡೌಟ್​ ಬರಲಿಲ್ಲ ಎನ್ನೋದೇ ಪುರುಷರಿಗೆ ಸಮಾಧಾನ ಆಗಿತ್ತು ಪಾಪ. ಆದರೆ ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ (Shravani Subramanya) ಬುದ್ಧಿವಂತ ರಾಜಕಾರಣಿ ವೀರುನ ಸ್ಥಿತಿ ನೋಡಿ ನಮ್ಮಿಂದ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಕಣ್ಣೀರು ಹಾಕ್ತಿದ್ದಾರೆ ಪುರುಷ ವೀಕ್ಷಕರು!

66
ಶ್ರಾವಣಿ- ಸುಬ್ರಹ್ಮಣ್ಯ ಸ್ಟೋರಿ

ಇದಕ್ಕೆ ಕಾರಣ, ವೀರು ತನ್ನ ಪತ್ನಿ ನಂದಿನಿಯನ್ನು ಯಾವುದೋ ಕಾರಣಕ್ಕೆ ದೂರ ಮಾಡಿದ್ದ. ಈಗ ಅವಳು ಜಾನಕಿಯಾಗಿ ವಾಪಸಾಗಿದ್ದಾಳೆ. ವೀರುನ ಮನೆಯಲ್ಲಿ ಮಾಸ್ಕ್​ ಹಾಕಿ ಇದ್ದಾಳೆ. ಆದರೆ ಇವಳೇ ತನ್ನ ಪತ್ನಿ ಎಂದು ವೀರುಗೆ ಗೊತ್ತೇ ಆಗ್ತಿಲ್ಲ. ಅದೂ ಹೋಗಲಿ ಎಂದ್ರೆ, ಜಾನಕಿಯ ಗುಣ, ಅವಳು ತೋರುವ ಪ್ರೀತಿ ಕಂಡು ವೀರುಗೆ ಅವಳ ಮೇಲೆ ಲವ್​ ಆಗಿದ್ದು, ಅದನ್ನು ನಿವೇದನೆ ಮಾಡಿಕೊಂಡಿದ್ದಾನೆ. ಆಗ ಮಾಸ್ಕ್​ ಧರಿಸಿ ತನ್ನ ಪತ್ನಿಯೇ ಬಂದರೂ ಅವಳೇ ಇವಳು ಎಂದು ವೀರುಗೆ ಗೊತ್ತಾಗ್ತಾನೇ ಇಲ್ಲ. ಇದನ್ನು ನೋಡಿದ ವೀಕ್ಷಕರು ಗಂಡಸರ ಮೇಲೆ ಯಾಕಿಷ್ಟು ನಿರ್ದೇಶಕರಿಗೆ ಕೋಪ ಎಂದು ಪ್ರಶ್ನೆ ಮಾಡ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories