ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ವಾ? ಫುಲ್‌ ಟೈಟಾಗಿ I Love You ಹೇಳಿ- ಸೀರಿಯಲ್‌ಗಳಿಂದ ಇದೆಂಥ ಪಾಠ?

Published : Nov 06, 2025, 11:07 PM IST

ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ', 'ಲಕ್ಷ್ಮೀ ಬಾರಮ್ಮ' ದಿಂದ ಹಿಡಿದು 'ನಾ ನಿನ್ನ ಬಿಡಲಾರೆ'ಯವರೆಗೂ, ಪಾತ್ರಗಳು ಪ್ರೀತಿ ನಿವೇದನೆ ಮಾಡಿಕೊಳ್ಳಲು ಮದ್ಯ ಸೇವನೆಯ ಮೊರೆ ಹೋಗುತ್ತಿವೆ. ಪತಿ ಅಥವಾ ಪತ್ನಿಯ ನಿಜವಾದ ಪ್ರೀತಿಯನ್ನು ತಿಳಿಯಲು ಕುಡಿತದ ದೃಶ್ಯ ಸೀರಿಯಲ್‌ಗಳಲ್ಲಿ ಸಾಮಾನ್ಯ ತಂತ್ರವಾಗಿದೆ

PREV
17
ದೈಹಿಕ ಸಂಪರ್ಕವಿಲ್ಲದ ದಾಂಪತ್ಯ

ಈಗಿನ ಸೀರಿಯಲ್​ಗಳಲ್ಲಿ ಗಂಡ-ಹೆಂಡತಿ ನಡುವೆ ದೈಹಿಕ ಸಂಬಂಧ ಇಲ್ಲದೇ ದಾಂಪತ್ಯ ಜೀವನ ಶುರುವಾಗುವುದನ್ನು ತೋರಿಸುವುದು ಮಾಮೂಲಾಗಿದೆ. ಆದರೆ, ಪತಿ-ಪತ್ನಿ ನಡುವೆ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ನಿರ್ದೇಶಕರು ಆಯ್ಕೆ ಮಾಡಿಕೊಳ್ತಿರೋ ಮಾರ್ಗ ಮಾತ್ರ ಎಣ್ಣೆ ಪಾರ್ಟಿ!

27
ಅಮೃತಧಾರೆಯಲ್ಲಿ ಕುಡಿದಿದ್ದ ದಂಪತಿ

ಈ ಹಿಂದೆ ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಮತ್ತು ಗೌತಮ್​ ನಡುವೆ ಲವ್​ ಶುರುವಾದದ್ದು, ಮದ್ಯ ಸೇವನೆಯಿಂದಲೇ. ಭೂಮಿಕಾಗೆ ಗೊತ್ತಿಲ್ಲದೇ 2-3 ಸಲ ಡ್ರಿಂಕ್ಸ್​ ಕೊಟ್ಟಾಗ ಆಕೆ ಪ್ರೀತಿ ನಿವೇದನೆ ಮಾಡಿಕೊಂಡಿದ್ದಳು.

37
ಲಕ್ಷ್ಮೀ ಬಾರಮ್ಮದಲ್ಲೂ ಇದೇ ತಂತ್ರ

ಇದೇ ತಂತ್ರವನ್ನು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿಯೂ ತೋರಿಸಲಾಗಿತ್ತು. ಈ ಸೀರಿಯಲ್​ನಲ್ಲಿ ಲಕ್ಷ್ಮೀ ಕೂಡ ಕೂಲ್​ಡ್ರಿಂಕ್ಸ್​ನಲ್ಲಿ ಮದ್ಯ ಸೇವಿಸಿದ್ದು ಗೊತ್ತಾಗದೇ ಕುಡಿದಿದ್ದಳು. ಆಮೇಲೆ ತನ್ನ ಗಂಡ ವೈಷ್ಣವ್​ಗೆ ಪ್ರೀತಿಯ ಕುರಿತು ಹೇಳಿದ್ದಳು. ತನ್ನ ಪತ್ನಿ ತನ್ನನ್ನು ಇಷ್ಟೆಲ್ಲಾ ಲವ್​ ಮಾಡ್ತಾ ಇದ್ದಾಳೆ ಎಂದು ಗಂಡನಿಗೆ ತಿಳಿದದ್ದು ಅವಳು ಡ್ರಿಂಕ್ಸ್​ ಮಾಡಿ ಮಾತನಾಡಿದ ಮೇಲೆ. ಪತ್ನಿ ಎಷ್ಟು ಲವ್​ ಮಾಡ್ತಾಳೆ ಎಂದು ತಿಳಿಯಲು ಈ ರೀತಿ ಹೆಣ್ಣುಮಕ್ಕಳಿಗೆ ಡ್ರಿಂಕ್ಸ್​ ಕುಡಿಸುವುದು ಅನಿವಾರ್ಯನಾ ಎನ್ನುವ ಪ್ರಶ್ನೆ ಎದುರಾಗಿತ್ತು.

47
ಕುಡಿದಿದ್ದ ಚಿರು

ಕೊನೆಗೆ ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿಯೂ ಇದೇ ಡ್ರಿಂಕ್ಸ್​ ದೃಶ್ಯ ತುರುಕಲಾಗಿತ್ತು. ಗಂಡ ಚಿರುಗೆ ಕುಡಿಸಲಾಗಿತ್ತು. ಚಿರು ಇಂದಿಗೂ ದೀಪಾಳನ್ನು ಪತ್ನಿ ಎಂದು ಒಪ್ಪಿಕೊಳ್ಳದಿದ್ದ ಕಾರಣ, ಪಾರ್ಟಿ ಹೆಸರಿನಲ್ಲಿ ಚಿರುಗೆ ಕುಡಿಸಲಾಗಿತ್ತು. ಆಗ ಆತ ದೀಪಾಳನ್ನು ಹತ್ತಿರ ಕರೆದು ತಬ್ಬಿಕೊಂಡಿದ್ದ.

57
ನಾ ನಿನ್ನ ಬಿಡಲಾರೆಯಲ್ಲಿಯೂ ಇದೇ ತಂತ್ರ

ಇದೀಗ ಮತ್ತದೇ ತಂತ್ರವನ್ನು ನಾ ನಿನ್ನ ಬಿಡಲಾರೆ (Naa Ninna Bidalaare) ಮತ್ತು ಬ್ರಹ್ಮಗಂಟು ಸೀರಿಯಲ್‌ ಮಹಾಸಂಗಮದಲ್ಲಿ ಮಾಡಲಾಗಿದೆ. ಇಲ್ಲಿ ಚಿರು ಮತ್ತು ಶರತ್‌ ಇಬ್ಬರೂ ಮಜ್ಜಿಗೆ ಎಂದು ತಿಳಿದು ಡ್ರಿಂಕ್ಸ್‌ ಮಾಡಿದ್ದಾರೆ.

67
I Love You ಎಂದ ಶರತ್‌

ಕೊನೆಗೆ, ಪಾರ್ಟಿ ನಡೆಸಲಾಗಿದೆ. ಇದರಲ್ಲಿ acting ಮಾಡುವ ಮೂಲಕ ಹಾಡಿನ ಬಗ್ಗೆ ಹೇಳುವ ಟಾಸ್ಕ್‌ ನೀಡಲಾಗಿದೆ. ದುರ್ಗಾ ಲವ್‌ ಹಾರ್ಟ್ ಎನ್ನುವಂತೆ ಆಕ್ಷನ್‌ ಮಾಡಿದಾಗ, ಶರತ್‌ ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಹೇಳಿಕೊಂಡಿದ್ದಾನೆ. I Love You I Love You ಎಂದಿದ್ದಾನೆ. ಚಿರುನೂ ದೀಪಾಗೆ  ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಾನೆ. 

77
ದುರ್ಗಾ ಶಾಕ್‌

ಇದನ್ನು ಕೇಳಿ ದುರ್ಗಾ ಶಾಕ್‌ ಆದರೂ ನಾಚಿಕೊಂಡಿದ್ದಾಳೆ.  ಮಾಯಾ ಬಿಟ್ಟರೆ ಮತ್ತೆ ಎಲ್ಲರೂ ಖುಷಿಪಟ್ಟುಕೊಂಡಿದ್ದಾರೆ. ದೀಪಾಳನ್ನು ಚಿರು ಎತ್ತಿಕೊಂಡಿದ್ದಾನೆ. ಒಟ್ಟಿನಲ್ಲಿ ಪತ್ನಿಗೆ ಇಲ್ಲವೇ ಪತಿಯ ಮೇಲೆ ಪ್ರೀತಿ ನಿವೇದಿಸಿಕೊಳ್ಳಲು ಕುಡಿಯೋದು ಅನಿವಾರ್ಯ ಎನ್ನೋದನ್ನು ಸೀರಿಯಲ್‌ಗಳು ತೋರಿಸುತ್ತಿವೆ ಎನ್ನುವ ಕಮೆಂಟ್ಸ್‌ ಮಾತ್ರ ಹರಿದಾಡುತ್ತಿದೆ.

ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories