ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು, ಭೂಮಿಕಾ ಗೌತಮ್‌ರ ಮಗಳು ಮಿಂಚುವಿಗೆ ಹೊಸ ಹೇರ್‌ಸ್ಟೈಲ್ ಮಾಡಿ ಸರ್ಪ್ರೈಸ್ ನೀಡಿದ್ದಾಳೆ. ಮಗಳ ಮುದ್ದಾದ ಹೊಸ ಲುಕ್ ನೋಡಿ ಗೌತಮ್‌ಗೆ ಬಹಳ ಖುಷಿಯಾಗಿದೆ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್ ಮದುವೆಯ ವಾರ್ಷಿಕೋತ್ಸವದ ಸಂಭ್ರಮ. ಇಬ್ಬರೂ ದೈಹಿಕವಾಗಿ ಒಂದೆಡೆ ಇಲ್ಲದಿದ್ದರೂ ಮಾನಸಿಕವಾಗಿ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಷ್ಟು ಪ್ರೀತಿ.
26
ಎಷ್ಟೆಂದರೂ ಅಮ್ಮ ಅಲ್ವಾ|
ಇದೇ ವೇಳೆ, ಗೌತಮ್ನ ಸಾಕು ಮಗಳು ಮಿಂಚು, ಈಗ ಭೂಮಿಕಾಗೆ ಹತ್ತಿರವಾಗುತ್ತಿದ್ದಾಳೆ. ಗೌತಮ್ ಅಪ್ಪ ಎಂದಾದಮೇಲೆ, ಭೂಮಿಕಾ ಅಮ್ಮನೇ ತಾನೆ? ಅದಕ್ಕಾಗಿಯೇ ಈ ಬಾಂಡಿಂಗ್.
36
ಮಗಳಿಗೆ ಹೊಸ ಲುಕ್
ಇದೀಗ ಗೌತಮ್ ಮಗಳಿಗೆ ಬಾಚಿ ಕಳುಹಿಸಿದ್ದಾನೆ. ಆದರೆ ಆಕೆಯ ಹೇರ್‌ಸ್ಟೈಲ್ ಅನ್ನು ಚೇಂಜ್ ಮಾಡಿರೋ ಭೂಮಿಕಾ ಮಗಳಿಗೆ ಹೊಸ ಲುಕ್ ಕೊಟ್ಟಿದ್ದಾಳೆ. ಅದಕ್ಕೆ ಕಾರಣವೂ ಇದೆ. ಗೌತಮ್ ಬಾಚುವಾಗ ಅವನು ಪಡುವ ಕಷ್ಟವನ್ನು ನೋಡಿದ್ದಾಳೆ ಭೂಮಿಕಾ. ಇದರಿಂದಾಗಿ ಮಿಂಚುಗೆ ಬೇರೆ ಲುಕ್ ಕೊಡಲು ಯೋಚನೆ ಮಾಡಿದ್ದಾಳೆ.
ಇದನ್ನು ನೋಡಿ ಗೌತಮ್ ಸಿಕ್ಕಾಪಟ್ಟೆ ಆಶ್ಚರ್ಯ ಪಟ್ಟುಕೊಂಡಿದ್ದಾನೆ. ತನ್ನ ಮಗಳು ಮೊದಲಿಗಿಂತಲೂ ಮುದ್ದುಮುದ್ದಾಗಿ ಕಾಣುವುದನ್ನು ನೋಡಿ ಅವನಿಗೆ ತುಂಬಾ ಖುಷಿಯಾಗಿದೆ.
56
ಕೂದಲು ಕಟ್
ಇದೇ ವೇಳೆ ಭೂಮಿಕಾ, ಕೂದಲನ್ನು ಕಟ್ ಮಾಡಲು ಮಿಂಚು ಮನಸ್ಸನ್ನು ಒಲಿಸಿರೋದು ಕೂಡ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಮಕ್ಕಳ ಕೂದಲು split ಆಗತ್ತೆ. ಅದನ್ನು ಕಟ್ ಮಾಡಿದರೆ ಚೆನ್ನಾಗಿ ಬೆಳೆಯುತ್ತೆ ಎಂದು ಮಿಂಚುವಿನ ಮನಸ್ಸನ್ನು ಒಲಿಸಿದ್ದಾಳೆ.
66
ಮನಸ್ಸನ್ನು ಒಲಿಸಿದ ಭೂಮಿಕಾ
ನನಗೆ ಉದ್ದ ಕೂದಲು ಬೇಕು, ಹೂವು ಮುಡಿಯಬೇಕು ಎಂದಿರೋ ಮಿಂಚು ಕೂದಲನ್ನು ಕಟ್ ಮಾಡಲು ಮನಸ್ಸು ಮಾಡಲಿಲ್ಲ. ಆಗ ಕಟ್ ಮಾಡಿದರೆ ಇನ್ನೂ ಉದ್ದ ಬೆಳೆಯುತ್ತದೆ ಎಂದು ಮನಸ್ಸನ್ನು ಒಲಿಸಿದ್ದಾಳೆ. ಹೊಸ ಲುಕ್ ಕೊಟ್ಟಿದ್ದಾರೆ..