ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಮತಗಳನ್ನು ಪಡೆದು ಗೆದ್ದ ಗಿಲ್ಲಿ ನಟ, ಇದೀಗ ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ಫಿಟ್ನೆಸ್ ಕಡೆಗಣಿಸಿದ್ದ ಅವರ ಈ ಬದಲಾವಣೆ, ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪಾದಾರ್ಪಣೆ ಮಾಡುವ ಸಿದ್ಧತೆಯೇ ಎಂಬ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.
ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಮತವನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದವರು ಗಿಲ್ಲಿ ನಟ. ಬಿಗ್‌ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಜಾಹೀರಾತು, ಪ್ರಮೋಷನ್ ಸೇರಿದಂತೆ ವಿವಿಧೆಡೆಗಳಲ್ಲಿ ಇಂದಿಗೂ ಸಕತ್ ಡಿಮಾಂಡ್ ಕುದುರಿಸಿಕೊಳ್ತಿದ್ದಾರೆ ಗಿಲ್ಲಿ ನಟ.
26
ಮ್ಯೂಟೆಂಟ್ ರಘು ಸಲಹೆ
ಬಿಗ್‌ಬಾಸ್ ಮನೆಯಲ್ಲಿ ಇರುವಾಗ, ಇವರಿಗೆ ಮ್ಯೂಟೆಂಟ್ ರಘು ಅವರು ವರ್ಕ್ ಔಟ್ ಮಾಡುವಂತೆ ಸಾಕಷ್ಟು ಬಾರಿ ಹೇಳಿದ್ದರೂ ಡೋಂಟ್ ಕೇರ್ ಅಂದಿದ್ರು ಗಿಲ್ಲಿ ನಟ. ‘ವರ್ಕೌಟ್ ಮಾಡೋ. ಫಿಟ್ ಆಗಿರ್ತೀಯಾ’ ಎಂದು ಅಡ್ವೈಸ್ ಕೊಟ್ಟಿದ್ದರೂ ಗಿಲ್ಲಿ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.
36
ಲುಕ್ಕೇ ಚೇಂಜ್ ಆಯ್ತು
ಆದರೆ, ಇದೀಗ ಲುಕ್ಕೇ ಚೇಂಜ್ ಆಗಿ ಹೋಗಿದೆ. ಗಿಲ್ಲಿ ನಟ, ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದಾರೆ. ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ.
ಗಿಲ್ಲಿ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ಕೊಡಲು ಹೀಗೆ ಮಾಡ್ತಿರಬಹುದು ಎನ್ನುತ್ತಿದ್ದಾರೆ ಅವರ ಫ್ಯಾನ್ಸ್. ಅಷ್ಟಕ್ಕೂ ಗಿಲ್ಲಿಗೆ ಬಿಗ್ ಬಾಸ್ ನಿಂದ ಸಿಕ್ಕ ಜನಪ್ರಿಯತೆಯನ್ನ ನೋಡಿದವರು ಆತ ನಟಿಸಿದ ಸಿನಿಮಾಗಳ ಪಾಲಿಗೆ ಪ್ಲಸ್ ಆಗುತ್ತೆ ಅಂದುಕೊಂಡಿದ್ರು. ಆದ್ರೆ ಗಿಲ್ಲಿ ನಟಿಸಿದ ಸರ್ಕಾರಿ ಶಾಲೆ ಎಚ್.8 ಆಗಲಿ, ಸೂಪರ್ ಹಿಟ್ ಅನ್ನೋ ಚಿತ್ರವಾಗಲಿ ಸದ್ದು ಮಾಡ್ಲಿಲ್ಲ. ಬಿಗ್ ಬಾಸ್ನಲ್ಲಿ ಗಿಲ್ಲಿಯನ್ನ ನೋಡಿ ಮೆಚ್ಚಿದವರು ಬಿಗ್ ಸ್ಕ್ರೀನ್ನಲ್ಲಿ ಗಿಲ್ಲಿಯನ್ನ ನೋಡ್ಲಿಕ್ಕೆ ಬರಲಿಲ್ಲ.
56
ನಿರ್ದೇಶಕನಾಗೋ ಹಂಬಲ
ತನಗೆ ನಿರ್ದೇಶಕನಾಗೋ ಆಸೆ ಇದೆ ಎಂದಿದ್ದರು ಗಿಲ್ಲಿ. ಇವರ ಒಂದೇ ಒಂದು ಫೋನ್ ಕಾಲ್ ಮಾಡಿದ್ರೂ ಸಾಕು, ನಟನಾಗಲು ಅವಕಾಶ ಕೊಡುವುದಾಗಿ ಹೇಳಿದ್ದರು ತರುಣ್ ಸುಧೀರ್. ಗಿಲ್ಲಿಯ ಮುಂದಿನ ನಡೆ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
66
ಈ ಹಿಂದೆ ಪ್ರಥಮ್
ಈ ಹಿಂದೆ ಬಿಗ್ ಬಾಸ್ ಗೆದ್ದಿದ್ದ ಪ್ರಥಮ್, ಅದೇ ಫೇಮ್ನಿಂದ ಸಿನಿಮಾದಲ್ಲೂ ಗೆಲ್ತಿನಿ ಅಂದುಕೊಂಡು ಸಾಲು ಸಾಲು ಸಿನಿಮಾ ಮಾಡಿ ನೆಲಕಚ್ಚಿದ್ದರು. ಸದ್ಯ ಗಿಲ್ಲಿಗೂ ಇಂಥದ್ದೇ ಚಾಲೆಂಜ್ ಎದುರಾಗಿದೆ. ಮುಂದೇನು ಮಾಡಬೇಕು ಅನ್ನೋದು ತಲೆಯಲ್ಲಿ ಕೊರೀತಾ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.