ಗಾಯಕಿ ಸುಹಾನಾ ಸಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ತಮಾಷೆಯ ಸಂದರ್ಶನದ ಪ್ರೋಮೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮ್ಮ ದಾಂಪತ್ಯ ಜೀವನ ಮತ್ತು ಮನೆಗೆಲಸದ ಬಗ್ಗೆ ಮಾತನಾಡಿದ್ದಾರೆ.
ಗಾಯಕಿ ಸುಹಾನಾ ಸಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ಮದುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಧರ್ಮದ ಎಲ್ಲೆಗಳನ್ನು ಮೀರಿ ಇಬ್ಬರು ಕಲಾವಿದರು ಮಂತ್ರಮಾಂಗಲ್ಯ ಪರಿಕಲ್ಪನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಇಬ್ಬರು ಮೊದಲ ಬಾರಿಗೆ ಯಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದ ಪ್ರೋಮೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
25
ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಪತಿ ಜೊತೆ ಬಂದ ಸುಹಾನಾ
ಸುಹಾನಾ ಮತ್ತು ನಿತಿನ್ ಮೊದಲ ಬಾರಿ ಕೀರ್ತಿ ಅವರ keerthientclinic ಸಂದರ್ಶನ ನೀಡಿದ್ದಾರೆ. ನಿರೂಪಕರಾದ ಕೀರ್ತಿ ಎಲ್ಲವನ್ನು ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಾ, ಆಗಮಿಸಿರುವ ಅತಿಥಿಗಳನ್ನು ನಗಿಸುತ್ತಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ಅವರ ಮಾಡುವ ಸಂದರ್ಶನಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಗಾಯಕಿಯರಾದ ಪ್ರಥ್ವಿ ಭಟ್ ಮತ್ತು ಐಶ್ವರ್ಯಾ ರಂಗರಾಜನ್ ಅವರನ್ನು ಸಂದರ್ಶನ ಮಾಡಿದ್ದರು. ಇದೀಗ ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಪತಿ ನಿತಿನ್ ಜೊತೆ ಸುಹಾನಾ ಅಗಮಿಸಿದ್ದಾರೆ.
35
ತಮಾಷೆಯ ಸಂದರ್ಸನ
ಪ್ರೋಮೋದಲ್ಲಿ ಆರಂಭದಲ್ಲಿಯೇ ನಿತಿನ್ ತಮ್ಮನ್ನು ರಂಗಭೂಮಿ ಕಲಾವಿದ ಮತ್ತು ಸುಹಾನಾ ಅವರ ಗಂಡ ಅಂತ ಪರಿಚಯ ಮಾಡಿಕೊಳ್ಳುತ್ತಾರೆ. ಕೀರ್ತಿ ಸಹ ಶಿವಾಜಿನಗರದ ಮುಸ್ಲಿಮರು ಮಾತನಾಡುವ ಶೈಲಿಯಲ್ಲಿಯೇ ಪ್ರಶ್ನೆಗಳನ್ನು ಕೇಳಿದ್ದಾರೆ. ಸುಹಾನಾ ಸಹ ಅದೇ ರೀತಿಯಲ್ಲಿಯೇ ಉತ್ತರ ನೀಡುವ ಮೂಲಕ ಸಂದರ್ಶನವನ್ನು ಮತ್ತಷ್ಟು ತಮಾಷೆಯಾಗಿ ತೆಗೆದುಕೊಂಡು ಹೋಗಿದ್ದಾರೆ.
ಮನೆಯಲ್ಲಿ ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತೇನೆ ಎಂದು ನಿತಿನ್ ಹೇಳುತ್ತಾರೆ. ಪಾತ್ರೆ ತೊಳೆಯೋದು, ಕಸ ಗುಡಿಸೋದು, ನೆಲ ಒರೆಸೋದು, ಅಂಗಳಕ್ಕೆ ನೀರು ಹಾಕೋದು ಎಲ್ಲವನ್ನು ನಾನೇ ಮಾಡುತ್ತೇನೆ. ಪತ್ನಿ ಸುಹಾನಾಗೆ ಮಾಡೋಕೆ ಇನ್ನೇನು ಉಳಿದಿದೆ ಎಂದು ನಿತಿನ್ ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಕೀರ್ತಿ, ಮದುವೆ ಮಾಡಿಕೊಂಡು ಹುಡುಗನನ್ನು ಕೆಲಸ ಮಾಡೋಕೆ ಹಾಕೊಂಡಿದ್ದೀಯಾ ಎಂದು ತಮಾಷೆಯಾಗಿ ಪ್ರಶ್ನಿಸುತ್ತಾರೆ. ಕೆಲ ದಿನಗಳ ಹಿಂದೆ ಪತಿ ನಿತಿನ್ ಮನೆಗೆಲಸದಲ್ಲಿ ಹೇಗೆ ಸಹಾಯ ಮಾಡ್ತಾರೆ ಎಂಬುದರ ವಿಡಿಯೋವನ್ನು ಸುಹಾನಾ ಶೇರ್ ಮಾಡಿಕೊಂಡಿದ್ದರು.
55
ಪ್ರೋಮೋ ವೈರಲ್
ಇಲ್ಲಪ್ಪಾ.. ನಾನು ಮನೆಯಲ್ಲಿ ಅಡುಗೆ, ಪಾತ್ರೆ ತೊಳೆದು ಕಸವೆಲ್ಲವನ್ನು ನಾನೇ ಗುಡಿಸುವೆ ಅಂತಾ ಸುಹಾನಾ ಹೇಳ್ತಿದ್ರೆ, ಇದೆಲ್ಲವೂ ಕನಸಿನಲ್ಲಿ ಎಂದು ನಿತಿನ್ ಟಾಂಗ್ ಕೊಡುತ್ತಾರೆ. ಇದಕ್ಕೆ ಕೀರ್ತಿ, ಮದುವೆ ಮುಂಚೆ ಜಾತಕ ತೋರಿಸಿದ್ದೀರಾ ಎಂದು ಕೇಳಿದ್ರೆ ನಿತಿನ್ ಇನ್ಮುಂದೆ ತೋರಿಸಬೇಕಾಗಹುದು ಎಂದು ತಮಾಷೆ ಮಾಡಿದ್ದಾರೆ. ಇದೇ ಸಂದರ್ಶನದಲ್ಲಿ ಸುಹಾನಾ ಅವರು ಪ್ಯಾರ್ ಆಗೇ ಆಗ್ಬಿಟೈತೆ ಎಂಬ ಹಾಡು ಹೇಳಿದ್ದಾರೆ. ಸದ್ಯ ಪ್ರೋಮೋ ವೈರಲ್ ಆಗುತ್ತಿದ್ದು, ಇಬ್ಬರು ಎಲ್ಲವನ್ನೂ ಹಂಚಿಕೊಂಡು ಖುಷಿ ಖುಷಿ ಇಂದ ಪ್ಯಾರ್ ಗೆ ಗೀರ್ ಗೆ ಮಾಡಿ ಕೊಂಡು ಇರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.