Gilli Nata: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೆಂಡತಿಯಾಗುವವಳ ಬಗ್ಗೆ ಹೇಳಿರುವಂತಹ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಗಿಲ್ಲಿ ಹೇಳಿದ ಮಾತು 100ಕ್ಕೆ ನೂರರಷ್ಟು ಸತ್ಯ ಎಂದು ಜನರು ಹೇಳುತ್ತಿದ್ದಾರೆ. ಪಾಡ್ ಕಾಸ್ಟ್ ನಲ್ಲಿ ಗಿಲ್ಲಿ ನಟ ಹೇಳಿದ್ದೇನು ಅನ್ನೋದನ್ನು ನೋಡೋಣ.
ತಮ್ಮ ಮಾತು, ಕಾಮಿಡಿ, ಪಂಚಿಂಗ್ ಡೈಲಾಗ್ ಗಳ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಮುರು ತಿಂಗಳುಗಳ ಕಾಲ ಮನರಂಜನೆ ನೀಡಿ, ವೀಕ್ಷಕರನ್ನು ಸಂಪೂರ್ಣವಾಗಿ ನಗೆಗಡಲಿನಲ್ಲೇ ತೇಲಾಡಿಸಿ, ಅಭಿಮಾನಿಗಳಿಂದ ಭರ್ಜರಿ ವೋಟ್ ಪಡೆದು, 40 ಕೋಟಿಗೂ ಅಧಿಕ ಮತಗಳ ಮೂಲಕ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಗಿಲ್ಲಿ ನಟ.
26
ಗಿಲ್ಲಿ ವಿಡಿಯೋ ವೈರಲ್
ಸದ್ಯಕ್ಕಂತೂ ಗಿಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಹಲವಾರು ಟಿವಿ ಚಾನೆಲ್ ಗಳಲ್ಲಿ ಇಂಟರ್ವ್ಯೂ ನೀಡುತ್ತಿದ್ದಾರೆ, ತಮ್ಮ ಹುಟ್ಟೂರಿನಲ್ಲಿ ವಿಜಯ ಯಾತ್ರೆ ಕೂಡ ನಡೆದಿದೆ. ಬಳಿಕ ಕಿಚ್ಚ ಸುದೀಪ್, ಶಿವರಾಜಕುಮಾರ್ ಅಲ್ಲದೇ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಗಿಲ್ಲಿ ನಟ ಭೇಟಿ ಮಾಡಿ ಬಂದಿದ್ದಾರೆ. ಈ ನಡುವೆ ಗಿಲ್ಲಿ ಮದುವೆಯ ಬಗ್ಗೆ ಹೇಳಿದಂತಹ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
36
ಮದುವೆ ಬಗ್ಗೆ ಏನ್ ಹೇಳಿದ್ರು ಗಿಲ್ಲಿ
ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಪಾಡ್ ಕಾಸ್ಟ್ ಮಾಡುತ್ತಿದ್ದು, ಒಂದು ಪಾಡ್ ಕಾಸ್ಟ್ ನಲ್ಲಿ ಗಿಲ್ಲಿ ನಟ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಯಶಸ್ವಿನಿಯವರು ಗಿಲ್ಲಿ ಬಳಿ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ, ನಿಮಗೆ ಕೆಲಸಕ್ಕೆ ಹೋಗುವಂತಹ ಹುಡುಗಿ ಬೇಕಾ? ಅಥವಾ ಮನೆಯಲ್ಲಿಯೇ ಇರುವಂತಹ ಹುಡುಗಿ ಬೇಕಾ? ಎಂದು ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಸಖತ್ ಆಗಿ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಕೆಲಸಕ್ಕೇ ಹೋದರೇನೆ ಬೆಟರ್, ಅವರು ದುಡಿತಾ ಇದ್ದರೆ, ನಾನು ದುಡಿಯುತ್ತಾ ಇದ್ದರೆ ಜೀವನ ಚೆನ್ನಾಗಿರುತ್ತೆ. ನಾವೇನೋ ಹೇಳಿ ಬಿಡ್ತೀನಿ, ನಿಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೇನೆ, ನಿನ್ನ ಕೈಯಲ್ಲ ಒಂದೂ ಕೆಲಸ ಮಾಡಿಸಲ್ಲ, ನಿನ್ನ ಮಹಾರಾಣಿಯಾಗಿ ನೋಡಿಕೊಳ್ಳುತ್ತೀನಿ ಅಂತ ನಾವು ಹೇಳ್ತೀವಿ. ಆದರೆ ಅದೆಲ್ಲಾ ಡೈಲಾಗ್ ಗೆ ಮಾತ್ರ ಸರಿ.
56
ಆರ್ಥಿಕವಾಗಿ ಸಬಲರಾಗಿರಬೇಕು
ಮದುವೆಯಾಗಿ ಚೆನ್ನಾಗಿ ಇರಬೇಕು ಅಂದ್ರೆ, ಅವರು ಕೆಲಸಕ್ಕೆ ಹೋಗಿ, ನಾನು ಕೆಲಸಕ್ಕೆ ಹೋಗಬೇಕು. ಇಬ್ಬರದು ದುಡಿಮೆ ಅಂತಾಗಿ, ಆರ್ಥಿಕವಾಗಿ ಇಬ್ಬರು ಜೀವನದಲ್ಲಿ ಚೆನ್ನಾಗಿ ಇರಬೇಕು. ರಾಣಿ ತರ ನೋಡ್ತೀನಿ ಅನ್ನೋದೆಲ್ಲಾ ಡೈಲಾಗ್ ಅಷ್ಟೇ, ಅದೆಲ್ಲಾ ಮದುವೆಯಾಗೋವರೆಗೂ ಮಾತ್ರ ಎಂದಿದ್ದಾರೆ ಗಿಲ್ಲಿ.
66
ಗಿಲ್ಲಿ ಮಾತಿಗೆ ಫ್ಯಾನ್ಸ್ ಫಿದಾ
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಮತ್ತು ಗಿಲ್ಲಿ ಜೋಡಿ ಭಾರಿ ಸದ್ದು ಮಾಡಿತ್ತು. ಮನೆಯ ಹೊರಗೆ ಕೂಡ ಗಿಲ್ಲಿ-ಕಾವ್ಯರನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇಬ್ಬರು ಮದುವೆಯಾಗಬೇಕು ಅಂತಾನೂ ಹೇಳಿದ್ದರು. ಇದೀಗ ಗಿಲ್ಲಿ ಹೇಳಿದ ಮಾತುಗಳನ್ನು ಕೇಳಿ ಜನ ಖುಷಿಯಾಗಿದ್ದಾರೆ. ನಿಮಗೆ ಖಂಡಿತವಾಗಿ ಒಳ್ಳೆ ಹುಡುಗಿಯೇ ಸಿಗುತ್ತಾಳೆ ಎಂದು ಹಾರೈಸಿದ್ದಾರೆ. ವಿಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.