Bigg Boss Kannada 12: ಯಾಕೆ ಈ ಮೌನ ರಾಶಿಕಾ? ನಿಮಗೆಲ್ಲಾ ಗೊತ್ತಿತ್ತು ಅಲ್ಲವಾ?

Published : Jan 03, 2026, 11:49 AM IST

Rashika: ಪಾತ್ರೆ ತೊಳೆಯುವ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ತೀವ್ರ ಜಗಳ ನಡೆದಿದೆ. ಈ ಜಗಳದಲ್ಲಿ ರಾಶಿಕಾ ಮಧ್ಯ ಪ್ರವೇಶಿಸದೆ ಮೌನವಾಗಿದ್ದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ ರಾಶಿಕಾ ತಪ್ಪಿನ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

PREV
15
ಆರೋಪ ಪ್ರತ್ಯಾರೋಪ

ಕಳಪೆ ಮತ್ತು ಉತ್ತಮ ಯಾರು ಎಂಬ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ದೊಡ್ಡಮಟ್ಟದ ವಾಕ್ಸಮರವೇ ನಡೆದಿತ್ತು. ಒಬ್ಬರಿಗೊಬ್ಬರು ಕಳಪೆ ನೀಡಿಕೊಂಡ ಸ್ಪರ್ಧಿಗಳು ಆರಂಭದ ಮೊದಲ ದಿನದ ವಿಷಯದಿಂದ ಕೊನೆ ಕ್ಷಣದವರೆಗಿನ ಬಗ್ಗೆಯೂ ಮಾತನಾಡಿದರು. ಆರೋಪ ಪ್ರತ್ಯಾರೋಪಗಳಲ್ಲಿ ಇಬ್ಬರು ಸ್ಪರ್ಧಿಗಳು ತೊಡಗಿಕೊಂಡಿದ್ದರು.

25
ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ

ಈ ಹಿಂದಿನ ವಾರಕ್ಕೆ ಸುದೀಪ್ ಗೈರಾದ ಹಿನ್ನೆಲೆ ಬಿಗ್‌ಬಾಸ್ ಮನೆಗೆ ಸಾಲು ಸಾಲು ಅತಿಥಿಗಳು ಬಂದಿದ್ದರಿಂದ ಸ್ಪರ್ಧಿಗಳೆಲ್ಲಾ ಸುಸ್ತಾಗಿದ್ದರು. ಸ್ವತಃ ಗಿಲ್ಲಿ ನಟ ಸಹ ಸಾಲು ಸಾಲು ಚಟುವಟಿಕೆಗಳಿಂದ ದಣಿದಿದ್ದರು. ಇದೆಲ್ಲಾ ಬಳಿಕ ಪಾತ್ರೆ ತೊಳೆಯುವ ವಿಷಯಕ್ಕೆ ಸಂಬಂಧಿಸಿದಂತೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಜಗಳ ಮಾಡಿಕೊಂಡಿದ್ದರು. ಬೆಳಗ್ಗೆ ಅಡುಗೆ ಕೆಲಸ ನನ್ನದೇ ಇರೋದರಿಂದ ಎಲ್ಲವನ್ನು ಬೆಳಗ್ಗೆ ಮಾಡಿಕೊಳ್ಳುವೆ ಎಂದಿದ್ದರು. ಅಶ್ವಿನಿ ರೀತಿಯಲ್ಲಿಯೇ ರಾಶಿಕಾ ಸಹ ಹೇಳಿಕೊಂಡಿದ್ದರು.

35
ಪಕ್ಕಕ್ಕೆ ಸರಿದುಕೊಂಡ ರಾಶಿಕಾ

ಗಿಲ್ಲಿ ಪಾತ್ರೆ ತೊಳೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಶ್ವಿನಿ ಗೌಡ ಮುಂದೆ ರಾಶಿಕಾ ದೂರು ನೀಡಿದ್ದರು. ಇದೇ ವಿಷಯವಾಗಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ ಆರಂಭವಾಗುತ್ತಲೇ ರಾಶಿಕಾ ಪಕ್ಕಕ್ಕೆ ಸರಿದುಕೊಂಡಿದ್ದರು.

45
ವೀಕ್ಷಕರ ಬೇಸರ

ಇದೇ ವಿಷಯ ಶುಕ್ರವಾರ ಸಂಚಿಕೆಯಲ್ಲಿಯೂ ಪ್ರಸ್ತಾಪವಾಗಿತ್ತು. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೇ ವಿಷಯವಾಗಿ ಜಗಳ ಮಾಡಿಕೊಳ್ಳುತ್ತಿದ್ರೂ ರಾಶಿಕಾ ಮಾತ್ರ ತಮಗೆ ಏನು ಗೊತ್ತಿಲ್ಲ ಎಂಬಂತೆಯೇ ಕುಳಿತಿದ್ದರು. ಅಂದು ಅಸಲಿಗೆ ಏನಾಯ್ತು? ತಮಗೆ ಗೊತ್ತಿರುವ ವಿಷಯವನ್ನು ರಾಶಿಕಾ ತಿಳಿಸಿ ಜಗಳದ ತೀವ್ರತೆ ಕಡಿಮೆ ಮಾಡಬಹುದಿತ್ತು. ಆದ್ರೆ ರಾಶಿಕಾ ಮಾತ್ರ ಇದ್ಯಾವ ಕೆಲಸವನ್ನು ಮಾಡಲಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BBK 12: ರಕ್ಷಿತಾ ಯಾಕೆ ಟಾರ್ಗೆಟ್? ಮನೆಮಂದಿಗೆ ಸತ್ಯ ದರ್ಶನ ಮಾಡಿಸಿದ ಅಶ್ವಿನಿ ಗೌಡ! ಇದು ಟಿವಿಯಲ್ಲಿ ಬರಲೇ ಇಲ್ಲ!

55
ನೆಟ್ಟಿಗರ ಪ್ರಶ್ನೆ

ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿರುವ ಸಂದರ್ಭದಲ್ಲಿಯೂ ರಾಶಿಕಾ ಮಾಡಿದ ಎಡವಟ್ಟಿನಿಂದ ಬಿಗ್‌ಬಾಸ್ ಮನೆಯಲ್ಲಿ ಸಂಚಲನವೇ ಸೃಷ್ಟಿಯಾಗಿತ್ತು. ತಮ್ಮ ತಪ್ಪು ಉಸ್ತುವಾರಿಯಿಂದ ಒಬ್ಬರಿಗೆ ಅನ್ಯಾಯ ಆಗಿದೆ ಎಂಬುದರ ರಾಶಿಕಾ ಪಶ್ಚತ್ತಾಪ ಪಡಲಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK 12: ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ: ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories