Bigg Boss Win​ ಆಗೋರು ಇವರೇ, ಆದ್ರೆ ಆಗಬೇಕಾಗಿದ್ದು ಅವರು- Suraj Singh​ ಹೇಳಿದ ಆ ಹೆಸರು ಯಾವುದು?

Published : Dec 29, 2025, 02:41 PM IST

ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿರುವ ಸೂರಜ್​ ಸಿಂಗ್​, ತಮ್ಮ ಪಯಣದ ಅನುಭವ ಹಂಚಿಕೊಂಡಿದ್ದಾರೆ. ಈ ಬಾರಿ  ವಿನ್ನರ್ ಆಗುವುದು ಅವರೇ ಖಚಿತ ಎಂದಿರುವ ಅವರು, ಆದರೆ ತಮ್ಮ ಪ್ರಕಾರ ಬೇರೆಯವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರು ಹೇಳಿದ್ದು ಯಾರ ಹೆಸರನ್ನು? 

PREV
16
ಎಲಿಮಿನೇಟ್​ ಆದ ಸೂರಜ್​

ಬಿಗ್​ಬಾಸ್​ನಿಂದ ಸೂರಜ್​ ಸಿಂಗ್​ (Bigg Boss Suraj Singh) ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಇದೀಗ ಅವರು ಬಿಗ್​ಬಾಸ್​ ಪಯಣದ ಕುರಿತು ಮಾಧ್ಯಮಗಳ ಜೊತೆ ಕೆಲವು ಅನುಭವವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

26
ಯಾರು ವಿನ್​?

ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ತಕ್ಷಣ ಸಾಮಾನ್ಯವಾಗಿ ಕೇಳುವ ಪ್ರಶ್ನೆ ಎಂದರೆ, ಟಾಪ್​-5 ಯಾರು ಹಾಗೂ ಯಾರು ಗೆಲ್ಲಬೇಕು ಎನ್ನುವುದು. ಅದರಂತೆಯೇ ಸೂರಜ್​ ಸಿಂಗ್​ ಅವರಿಗೂ ಇದೇ ಪ್ರಶ್ನೆಯನ್ನು ಕೇಳಲಾಗಿದೆ.

36
ಸ್ಪಂದನಾ ಸೋಮಣ್ಣ ಕುರಿತು...

ಅದಕ್ಕೂ ಮೊದಲು ಅವರು ಸ್ಪಂದನಾ ಸೋಮಣ್ಣ (Bigg Boss Spandana Somanna) ಹೆಸರನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣ, ಪ್ರತಿಬಾರಿಯೂ ಎಲ್ಲರೂ ಸ್ಪಂದನಾ ಹೊರಕ್ಕೆ ಹೋಗುತ್ತಾರೆ ಎಂದೇ ಹೇಳುತ್ತಿದ್ದಾರೆ. ಆದರೆ, ಇನ್ನೂ ಯಾಕೆ ಹೋಗಿಲ್ಲ ಎನ್ನುವುದೇ ಅಚ್ಚರಿ ಎಂದು ನುಡಿದಿದ್ದಾರೆ.

46
ಎರಡೂ ವಿಭಿನ್ನ

ಕೊನೆಗೆ ಈ ಬಾರಿ ಬಿಗ್​ಬಾಸ್​​ ಗೆಲ್ಲುವವರು ಯಾರು ಹಾಗೂ ಯಾರು ಗೆಲ್ಲಬೇಕು ಎನ್ನುವುದು ಎರಡೂ ಬೇರೆ ಬೇರೆಯಾಗಿದೆ ಎನ್ನುವ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ.

56
ಬಿಗ್​ಬಾಸ್​ ವಿನ್ನರ್​

ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಗಿಲ್ಲಿ ನಟ (Bigg Boss 12 Winner Gilli Nata) ಆಗುವುದು ನಿಜ ಎಂದಿರುವ ಸೂರಜ್​, ತಮ್ಮ ಪ್ರಕಾರ ಗೆಲ್ಲಬೇಕು ಎನ್ನುವುದು ಬೇರೆಯ ಹೆಸರು ಇದೆ ಎಂದಿದ್ದಾರೆ.

66
ಆ ಹೆಸರೂ ಬಂದೇ ಬಿಟ್ಟಿತು

ನನ್ನ ಪ್ರಕಾರ ಯಾರು ವಿನ್ನರ್​ ಆಗಬೇಕು ಎಂದು ಕೇಳುವುದಾದರೆ ಮೂರು ಹೆಸರು ಇದೆ ಅವರೆಂದರೆ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಎಂದಿದ್ದಾರೆ. ಇವರಿಬ್ಬರ ಹೆಸರನ್ನು ಬಹುತೇಕ ಎಲ್ಲರೂ ಹೇಳಿದ್ದಾರೆ. ಅವರ ಜೊತೆಗೆ ಸಹಜವಾಗಿ ಸೂರಜ್​ ಸಿಂಗ್​ ಅವರು ರಾಶಿಕಾ ಶೆಟ್ಟಿಯ (Bigg Boss Rashika Shetty) ಹೆಸರನ್ನೂ ಹೇಳಿದ್ದು, ಇವರು ವಿನ್ನರ್ ಆಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories