Bigg Boss ಅಶ್ವಿನಿ ಗೌಡಗೆ ಸುದೀಪ್​ರಿಂದ ಹೀಗೊಂದು ಪಾಠ! ಟವಲ್​ನಿಂದ ಸುತ್ತಿ ಹೊಡೆಯೋದು ಅಂದ್ರೆ ಇದೇನಾ?

Published : Nov 03, 2025, 12:44 PM IST

ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ತಮ್ಮ ಜಗಳಗಳಿಂದ ಹಾಗೂ ಏಕವಚನ ಬಳಕೆಯಿಂದ ಸದ್ದು ಮಾಡುತ್ತಿದ್ದಾರೆ. ಈ ವರ್ತನೆಗೆ ಬೇಸತ್ತ ನಿರೂಪಕ ಸುದೀಪ್ ಅವರು, 'ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು' ಎಂದು ಪರೋಕ್ಷವಾಗಿ ಕ್ಲಾಸ್ ತೆಗೆದುಕೊಂಡು, ಮನೆಯಲ್ಲಿ ಗೌರವದ ಮಹತ್ವವನ್ನು ತಿಳಿಸಿದ್ದಾರೆ.

PREV
16
ಅಶ್ವಿನಿ ಗೌಡ ಹವಾ

ಬಿಗ್​ಬಾಸ್​ (Bigg Boss)ನಲ್ಲಿ ಸದ್ಯ ಅಶ್ವಿನಿ ಗೌಡ ಅವರ ಹವಾ ಜೋರಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ನೆಗೆಟಿವ್​ ಕಮೆಂಟ್​ಗಳಿಗೆ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಹಲ್​ಚಲ್​ ಸೃಷ್ಟಿಸುತ್ತಿದ್ದಾರೆ. ಒಂದರ್ಥದಲ್ಲಿ ಇವರಿಂದಲೇ ಬಿಗ್​ಬಾಸ್​ಗೆ ಟಿಆರ್​ಪಿ ಕೂಡ ಹೆಚ್ಚಿಗೆ ಬರುತ್ತಿದೆ.

26
ಜಗಳ ಎಂಜಾಯ್​

ಜನರು ಬೈದುಕೊಳ್ಳುತ್ತಲೇ ಅಶ್ವಿನಿ (Bigg Boss Ashwini Gowda) ಅವರ ಜಗಳವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇವರು ಹೀಗೆ ಗಲಾಟೆ ಮಾಡದೇ ಸುಮ್ಮನೇ ಇದ್ದರೆ ಮುಗ್ಧ ಮಲ್ಲಮ್ಮನವರ ರೀತಿ ಮನೆಯಿಂದ ಬೇಗ ಆಚೆಗೆ ಬರಬೇಕಾಗುತ್ತಿತ್ತು ಎಂದು ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಅಶ್ವಿನಿ ಪರವಾಗಿ ಬ್ಯಾಟಿಂಗ್​ ಕೂಡ ಮಾಡುತ್ತಿದ್ದಾರೆ.

36
ಏಕ-ಬಹುವಚನಗಳು

ಇದರ ನಡುವೆಯೇ, ಅಶ್ವಿನಿ ಗೌಡ ಅವರು ಕೆಲವು ಸ್ಪರ್ಧಿಗಳಿಗೆ ಏಕವಚನದಿಂದ ಮಾತನಾಡುವುದು ಇದೆ. ತಮಗಿಂತ ಚಿಕ್ಕವರು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದರೆ, ಕೆಲವೊಮ್ಮೆ ಜಗಳವಾಡುವಾಗ ಸಿಟ್ಟಿನಿಂದ ಏಕವಚನ ಮಾತನಾಡುವುದು ಇದೆ. ಆದರೆ ಬೇರೆಯವರು ಏಕವಚನ ಮಾತನಾಡಿದಾಗ ಮಾತ್ರ ಕಾಲು ಕೆದರಿ ಜಗಳಕ್ಕೆ ಹೋಗುತ್ತಾರೆ.

46
ಗೌರವದ ಪಾಠ

ಇದರ ಬಗ್ಗೆ ಸುದೀಪ್​ ಅವರು ಅಶ್ವಿನಿ ಗೌಡ ಅವರಿಗೆ ಕ್ಲಾಸ್​​ ತೆಗೆದುಕೊಂಡಿದ್ದಾರೆ. ನಾನು ರೆಸ್​ಪೆಕ್ಟ್​ ಕೊಟ್ಟರೆ ಮಾತ್ರ ಬೇರೆಯವರು ಗೌರವ ಕೊಡುವುದು ಎನ್ನುವ ಮಾತನ್ನೇ ಉದಾಹರಣೆಯಾಗಿ ಪರೋಕ್ಷವಾಗಿ ನುಡಿದಿದ್ದಾರೆ.

56
ಟವಲ್​ನಿಂದ ಸುತ್ತಿ ಹೊಡೆಯೋದು?

ಟವಲ್​ನಿಂದ ಸುತ್ತಿ ಹೊಡೆಯೋದು ಎಂದ್ರೆ ಇದೇ ಎಂದು ಕಮೆಂಟ್​ಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.

66
ಸೂಚ್ಯವಾಗಿ ಹೇಳಿದ ಸುದೀಪ್​

ನಾನು ಚಿಕ್ಕ ಮಕ್ಕಳಾಗಲೀ, ಯಾರೇ ಆಗಲಿ ಅವರಿಗೆ ಬಹುವಚನ ಕೊಟ್ಟು ಮಾತನಾಡಿದಾಗ ಅವರು ನಮಗೂ ಹಾಗೆಯೇ ಮಾತನಾಡುತ್ತಾರೆ.ಮೊದಲು ನಾವು ಗೌರವ ಕೊಡುವುದನ್ನು ಕಲಿಯಬೇಕು ಎನ್ನುವುದನ್ನು ಸೂಚ್ಯವಾಗಿ ಸುದೀಪ್​ ಹೇಳಿದ್ದಾರೆ.

Read more Photos on
click me!

Recommended Stories