Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಪ್ರೊಮೋ ರಿಲೀಸ್ ಆಗಿದೆ. ಒಂದು ಕಡೆ ತನ್ನ ಗಂಡನನ್ನು ಬುಟ್ಟಿಗೆ ಹಾಕಲು ಪ್ರಯತ್ನಿಸುತ್ತಿರುವ ಪಿಂಕಿಗೆ ರಶ್ಮಿ ಪೊರಕೆ ಏಟು ಕೊಟ್ಟರೆ. ಇನ್ನೊಂದೆಡೆ ಪಾರು ಮಾಡಿದ ಕರಾಮತ್ತಿಗೆ ರೌಡಿಗಳು ಸುಸ್ತಾಗಿದ್ದಾರೆ.
ಅಣ್ಣಯ್ಯ ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಒಂದು ಕಡೆ ತನ್ನ ಗಂಡನನ್ನು ಪ್ರೀತಿಯ ಬಲೆಯಲ್ಲಿ ಬೀಸಿದ ಪಿಂಕಿಗೆ ರಶ್ಮಿ ಪೊರಕೆ ಏಟು ಕೊಟ್ಟರೆ, ಇನ್ನೊಂದು ಕಡೆ ರಾಣಿ ಮತ್ತು ಮನುವನ್ನು ಬೆಂಕಿಯಿಂದ ಕಾಪಾಡಿದ ಪಾರು, ಈಗ ರೌಡಿಗಳನ್ನೇ ಬೆಸ್ತು ಬೀಳಿಸಿದ್ದಾರೆ.
27
ಪಿಂಕಿ ಮತ್ತು ಸೀನನ ಕಳ್ಳ ಪ್ರೀತಿ
ಒಂದು ಕಡೆ ಅಮ್ಮನ ಮಾತಿಗೆ ಮರುಳಾಗಿ, ಮತ್ತೆ ಪಿಂಕಿಯ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಜಿಮ್ ಸೀನಾ, ಪಿಂಕಿಯನ್ನು ರಾತ್ರಿ ಹೊತ್ತು ಕದ್ದು ಮುಚ್ಚಿ ಭೇಟಿಯಾಗುತ್ತಾ, ಸರಸ ಸಲ್ಲಾಪ ಮಾಡುತ್ತಿದ್ದಾರೆ. ಇದೆಲ್ಲಾ ರಶ್ಮಿ ಮುಂದೆ ಬಯಲಾಗಿದೆ ಅಂದಮೇಲೆ ಗುಂಡಮ್ಮ ಸುಮ್ಮನೆ ಕೂರುವ ಹುಡುಗಿಯೇ ಅಲ್ಲ.
37
ಪಿಂಕಿಗೆ ಬಿತ್ತು ಪೊರಕೆ ಏಟು
ರಾತ್ರಿ ಹೊತ್ತು ತೋಟದಲ್ಲಿ ಸೀನನಿಗಾಗಿ ಕಾದು ನಿಂತಿರುವ ಪಿಂಕಿಗೆ ಹಿಂದಿನಿಂದ ಬಂದ ರಶ್ಮಿ, ಬೆಡ್ ಮುಖಕ್ಕೆ ಸುತ್ತಿ ಪೊರಕೆಯಲ್ಲಿ ಸರಿಯಾಗಿಯೇ ಹೊಡೆಯುತ್ತಾಳೆ. ಆ ಮೂಲಕ ತನ್ನ ಗಂಡನ ಮೇಲೆ ಕಣ್ಣು ಹಾಕಿರುವ ಪಿಂಕಿಗೆ ಸರಿಯಾಗಿಯೇ ಮಂಗಳಾರತಿ ಮಾಡುತ್ತಾಳೆ. ಮೂರು ಜನ್ಮಕ್ಕಾಗುವಷ್ಟು ಕೊಡ್ತೀನಿ ಎನ್ನುತ್ತಾ, ಪಿಂಕಿಗೆ ಸರಿಯಾಗಿಯೇ ಪೆಟ್ಟುಕೊಟ್ಟಿದ್ದಾಳೆ ರಶ್ಮಿ.
ಇನ್ನೊಂದೆಡೆ ತನ್ನ ಗಂಡನ ಮನೆಯಲ್ಲಿ ತನ್ನ ನಾದಿನಿಯರ ಜೀವನದಲ್ಲಿ ಏನೂ ಕೂಡ ತಪ್ಪಾಗಲು ಪಾರು ಬಿಡೋದೆ ಇಲ್ಲ. ತನ್ನ ನಾದಿನಿಯರಿಗೆ ಪಾರು ಕಾವಲಾಗಿ ನಿಂತು ಕಾಯುತ್ತಿದ್ದಾಳೆ, ಮೊಸ ಮಾಡುವ ಅಪ್ಪನಿಗೂ ಕೂಡ ಪಾರು ಸರಿಯಾಗಿಯೇ ಪಾಠ ಕಲಿಸಿದ್ದಾರೆ.
57
ರಾಣಿ-ಮನುವನ್ನು ರಕ್ಷಿಸಿದ ಪಾರು
ಒಂದು ಕಡೆ ರಾಣಿ ಮತ್ತು ಮನುವನ್ನು ಬಿದಿರಿನ ಗೊಂಬೆಗೆ ಕಟ್ಟಿ, ಅದರ ಬೆಂಕಿಯಲ್ಲಿ ಸುಟ್ಟು ಹೋಗುವಂತೆ ಪ್ಲ್ಯಾನ್ ಮಾಡಿದ ರೌಡಿಗಳಿಗೆ ಪಾರು ಬೆವರಿಳಿಸಿದ್ದಾಳೆ. ಮನು ಮತ್ತು ರಾಣಿಯನ್ನು ಜೋಪಾನವಾಗಿ ಬೇರೆಡೆಗೆ ಸಾಗಿಸಿ, ರೌಡಿಗಳ ಪ್ಲ್ಯಾನ್ ಉಲ್ಟಾ ಹೊಡೆಯುವಂತೆ ಮಾಡಿದ್ದಾರೆ.
67
ರೌಡಿಗಳ ಆಸ್ತಿಯ ಆಸೆಗೆ ಕೊಳ್ಳಿ
ಮನು ಮತ್ತು ರಾಣಿಯನ್ನು ಕೊಂಡು ಇಡೀ ಮಾಸ್ತಿಕೊಪ್ಪಲಿನ ಆಸ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಪ್ಲ್ಯಾನ್ ಮಾಡಿದ್ದ ರೌಡಿಗಳಿಗೆ, ಆ ಪೇಪರ್ ಮೇಲಿರೋದು ರಾಣಿಯ ಅಸಲಿ ಸಹಿ ಅಲ್ವೇ ಅಲ್ಲ ಅನ್ನೋದು ಗೊತ್ತಾದ ಮೇಲೆ ಸಿಟ್ಟು ನೆತ್ತಿಗೇರಿಗೆ. ಜೊತೆಗೆ ಆಸ್ತಿ ಪಡೆಯುವ ಅವರ ಆಸೆಗೆ ಕೊಳ್ಳಿ ಇಟ್ಟಂತಾಗಿದೆ.
77
ಇಂಟ್ರೆಸ್ಟಿಂಗ್ ಆಗಿದೆ ಎಪಿಸೋಡ್ ಗಳು
ಒಟ್ಟಲ್ಲಿ ಅಣ್ಣಯ್ಯ ಧಾರಾವಾಹಿಯ ಪ್ರತಿ ಎಪಿಸೋಡ್ ಗಳು ಬಹಳ ಇಂಟ್ರೆಸ್ಟಿಂಗ್ ಆಗಿ , ಅದ್ಭುತವಾಗಿ ಮೂಡಿ ಬರುತ್ತಿದ್ದು, ಮುಂದಿನ ಎಪಿಸೋಡ್ ಗಳಲ್ಲಿ ಕಥೆ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಇವತ್ತಿನ ಪ್ರೊಮೋ ನೋಡಿ ವೀಕ್ಷಕರಂತೂ ಸಖತ್ ಖುಷಿಯಾಗಿದ್ದಾರೆ.