ಬೆಂಗಳೂರು: 12ನೇ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಗಿಲ್ಲಿ ನಟನ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ಗಿಲ್ಲಿ ನಟ ತಮಗಾದ ಎಮೋಷನಲ್ ಮೂಮೆಂಟ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಗಿಲ್ಲಿ ನಟ ಬಿಗ್ ಬಾಸ್ ಚಾಂಪಿಯನ್ ಆಗುವ ಮೂಲಕ ಕನ್ನಡಿಗರ ಮನೆಮಗ ಎನಿಸಿಕೊಂಡಿದ್ದಾರೆ. 113 ದಿನಗಳ ಕಾಲ ಕನ್ನಡಿಗರ ಮುಖದಲ್ಲಿ ನಗು ತರಿಸಿದ್ದ ಗಿಲ್ಲಿ ಬಂಪರ್ ನಗದು ನಗದು ಬಹುಮಾನಗಳನ್ನು ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.
26
ಬಿಗ್ ಬಾಸ್‌ನಲ್ಲಿ ಭರ್ಜರಿ ಬಹುಮಾನ ಗೆದ್ದ ಗಿಲ್ಲಿ
ಹೌದು, ಕೋಟ್ಯಾಂತರ ಕನ್ನಡಿಗರ ಹೃದಯ ಗೆದ್ದ ಗಿಲ್ಲಿ, ಬಿಗ್ ಬಾಸ್ ಚಾಂಪಿಯನ್ ಆಗುತ್ತಿದ್ದಂತೆಯೇ ಸುಮಾರು 60 ಲಕ್ಷ ರುಪಾಯಿ ನಗದು ಬಹುಮಾನ ಹಾಗೂ 20 ಲಕ್ಷ ರುಪಾಯಿ ಮೌಲ್ಯದ ಸುಜುಕಿ ವಿಕ್ಟೋರಿಯಸ್ ಕಾರನ್ನು ಗೆಲ್ಲುವಲ್ಲಿ ಗಿಲ್ಲಿ ಯಶಸ್ವಿಯಾಗಿದ್ದಾರೆ.
36
ಗಿಲ್ಲಿಯನ್ನು ಯಾವಾಗಲೂ ಕಾಡುವ ಎಮೋಷನಲ್ ಕ್ಷಣ
ಇನ್ನು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸಂದರ್ಶನವೊಂದರಲ್ಲಿ, ಗಿಲ್ಲಿಗೆ ಸದಾ ಕಾಡುವ ಎಮೋಷನಲ್ ಕ್ಷಣ ಯಾವುದು ಎನ್ನುವ ಪ್ರಶ್ನೆಗೆ ನಟರಾಜ್ ಮನಬಿಚ್ಚಿ ಮಾತನಾಡಿದ್ದಾರೆ.
ಕನಕಪುರದಲ್ಲಿ ಒಂದು ಸಿನಿಮಾ ಶೂಟಿಂಗ್‌ಗೆ ಹೋಗಿದ್ದೆ. ಅದೇ ಸಮಯದಲ್ಲಿ ಭರ್ಜರಿ ಬ್ಯಾಚುಲರ್ ಶೋ ನಡೀತಾ ಇತ್ತು. ಹಳ್ಳಿಯ ರಸ್ತೆ ಬದಿಯಲ್ಲಿ ಶೂಟಿಂಗ್ ಮಾಡುವ ವೇಳೆಯಲ್ಲಿ ನನ್ನ ತಾಯಿ ವಯಸ್ಸಿನ ಮಹಿಳೆಯೊಬ್ಬರು ನನ್ನನ್ನು ಮಾತಾಡಿಸಲು ಕರೆದರು. ಡೈರೆಕ್ಟರ್ ಸೂಚನೆ ಮೇರೆಗೆ ನಾನೇ ಅವರ ಬಳಿ ಹೋದೆ.
56
ಭಾವನಾತ್ಮಕ ಕ್ಷಣಗಳನ್ನು ಮೆಲುಕು ಹಾಕಿದ ಗಿಲ್ಲಿ
ನಾನು ಅವರ ಬಳಿ ಹೋಗುತ್ತಿದ್ದಂತೆಯೇ ಅವರು ನನ್ನ ಕೈಹಿಡಿದುಕೊಂಡು ಅಳಲಾರಂಭಿಸಿದರು. ಯಾಕೆ ಏನಾಯ್ತು ಅಂತ ಅವರನ್ನು ಕೇಳಿದೆ. ನಿಮ್ಮ ಅಪ್ಪ ಅಮ್ಮನ್ನ ಟಿವಿಗೆ ಕರ್ಕೊಂಡು ಬಂದ್ಯಲ್ಲ, ನಿಮ್ಮ ಅಮ್ಮನಿಗೆ ಗೆಜ್ಜೆ ತೊಡಿಸಿದ್ಯಲ್ಲ. ನಿಮ್ಮ ಅಪ್ಪನಿಗೆ ಬಟ್ಟೆ ವಾಚ್ ಕೊಡಿಸಿದ್ದು ನೋಡಿ ಖುಷಿಯಾಯ್ತು. ನಿಜವಾಗಲೂ ಹುಟ್ಟಿದ್ರೆ ನಿನ್ನ ಥರದ ಮಗ ಹುಟ್ಟಬೇಕು ಅಂದ್ರು.
66
ನನ್ನ ಜೀವನ ಸಾರ್ಥಕವಾಯ್ತು ಅನಿಸ್ತು
ಭರ್ಜರಿ ಬ್ಯಾಚುಲರ್ ಶೋನಲ್ಲಿ ಮೊದಲ ಸಲ ನಮ್ಮ ಅಪ್ಪ-ಅಮ್ಮನನ್ನು ಟಿವಿ ಶೋಗೆ ಕರೆದುಕೊಂಡು ಬಂದಿದ್ದೆ. ಆ ಅಮ್ಮ ಹೇಳಿದ್ದು ಕೇಳಿ ನನ್ನ ಜೀವನ ಸಾರ್ಥಕವಾಯ್ತು ಅಂತ ಅನಿಸ್ತು ಎಂದು ಗಿಲ್ಲಿ ಆ ಭಾವನಾತ್ಮಕ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.