Bigg Boss Kannada 12: ಸೂರಜ್​ ಎದುರೇ ರಾಶಿಕಾ, ರಜತ್​ ಜೊತೆ ರೊಮಾನ್ಸ್​ ಮಾಡೋದಾ? ಛೇ ಧ್ರುವಂತ್​ಗೆ ಇದೇನಾಯ್ತು?

Published : Dec 09, 2025, 12:14 PM IST

ಬಿಗ್​ಬಾಸ್​ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಲವ್​ಸ್ಟೋರಿ ಸದ್ದು ಮಾಡುತ್ತಿರುವಾಗಲೇ, ರಾಶಿಕಾ ಇದೀಗ ರಜತ್​ ಜೊತೆ ರೊಮ್ಯಾಂಟಿಕ್ ಡಾನ್ಸ್​ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಧ್ರುವಂತ್​ ಅವರ ರಿಯಾಕ್ಷನ್​ ಕೂಡ ಗಮನ ಸೆಳೆದಿದೆ.

PREV
17
ಸೂರಜ್​-ರಾಶಿಕಾ ಲವ್​ಸ್ಟೋರಿ

ಬಿಗ್​ಬಾಸ್​ (Bigg Boss) ನಲ್ಲಿ ಸೂರಜ್​ ಸಿಂಗ್​ ಮತ್ತು ರಾಶಿಕಾ ಶೆಟ್ಟಿ ಲವ್​ಸ್ಟೋರಿ ವೀಕ್ಷಕರಿಗೆ ತಿಳಿದದ್ದೇ. ಸೂರಜ್​ ಸಿಂಗ್​ ಬಿಗ್​ಬಾಸ್​ ಮನೆಯೊಳಕ್ಕೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಾಗ ಮೊದಲು ಗುಲಾಬಿ ಹೂವು ನೀಡಿ ಬಿಗ್​ಬಾಸ್​ ಮನೆಯ ಸುಂದರಿ ಎಂದು ಹೇಳಿದ್ದರು.

27
ಸದ್ದು ಮಾಡ್ತಿರೋ ಪ್ರೇಮ

ಆಗಿನಿಂದ ಈಗಿನವರೆಗೂ ಇವರಿಬ್ಬರ ಲವ್​ಸ್ಟೋರಿ ತುಂಬಾ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಬಿಗ್​ಬಾಸ್​ನಲ್ಲಿ ಇರುವಷ್ಟು ದಿನ ಇಂಥ ಲವ್​ಸ್ಟೋರಿಗಳು ಪ್ರತಿ ಸೀಸನ್​ನಲ್ಲಿ, ಪ್ರತಿ ಭಾಷೆಗಳಲ್ಲಿ ಇದದ್ದೇ. ಬಹುತೇಕ ಎಲ್ಲವೂ ಬಿಗ್​ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಮಾತ್ರ. ಕೊನೆಗೆ ಎಲ್ಲರೂ ದೂರ ದೂರ.

37
ಟಿಆರ್​ಪಿ ಹೆಚ್ಚಳ

ಒಟ್ಟಿನಲ್ಲಿ ಬಿಗ್​ಬಾಸ್​ ಟಿಆರ್​ಪಿ ಹೆಚ್ಚಿಸಲು ಇಂಥವರನ್ನು ಹುಡುಕಿ ಹುಡುಕಿ ಸೆಲೆಕ್ಟ್​ ಮಾಡುವುದೇ ಬಿಗ್​ಬಾಸ್​ನ ಜಾಣ್ಮೆಯೂ ಹೌದು. ಜಗಳ, ರೊಮಾನ್ಸ್​, ಹಾಸ್ಯ... ಹೀಗೆ ವಿಭಿನ್ನ ಕ್ಯಾರೆಕ್ಟರ್​ ಇದ್ದವರು ಬಹಳ ಕಾಲದವರೆಗೆ ಬಿಗ್​ಬಾಸ್​ನಲ್ಲಿ ಉಳಿಯುತ್ತಾರೆ. ಉಳಿದವರಿಗೆ ಬೇಗನೇ ಗೇಟ್​ಪಾಸ್ ಸಿಗುತ್ತದೆ. ಇಷ್ಟೇ ಇದರ ಸೀಕ್ರೆಟ್​.

47
ರಾಶಿಕಾ- ರಜತ್​ ಡಾನ್ಸ್​

ಅದೇನೇ ಇರಲಿ. ಬಿಗ್​ಬಾಸ್​​ ಮನೆಯಲ್ಲಿ ಆಗಾಗ್ಗೆ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಜುಂ ಜುಂ ಮಾಯಾ ಹಾಡಿಗೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಸಕತ್​ ರೊಮಾಂಟಿಕ್​ ಸ್ಟೆಪ್​ ಹಾಕಿದ್ರು. ಅದೇ ರೀತಿ ರಾಶಿಕಾ ಶೆಟ್ಟಿ ಮತ್ತು ರಜತ್​ ಕೂಡ ರೊಮಾಂಟಿಕ್ ಆಗಿ ಕಾಣಿಸಿಕೊಂಡಿದ್ದರು.

57
ಪಾಪ ಸೂರಜ್​ ಸಿಂಗ್​

ಇದೀಗ ಇವರ ಡಾನ್ಸ್​ ಕೂಡ ವೈರಲ್​ ಆಗಿದೆ. ಇದರಿಂದ ಬಿಗ್​ಬಾಸ್​​ ಫ್ಯಾನ್ಸ್​ ಸೂರಜ್​ ಸಿಂಗ್​ ಎದುರಿಗೇ ಹೀಗೆ ಬೇರೊಬ್ಬರ ಜೊತೆ ರೊಮಾನ್ಸ್​ ಮಾಡೋದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

67
ಧ್ರುವಂತ್​ಗೆ ಏನಾಯ್ತು?

ಆದರೆ, ಈ ಡಾನ್ಸ್​ ಮಾಡುತ್ತಿರುವಾಗ ಗಮನ ಸೆಳೆದದ್ದು ಧ್ರುವಂತ್​ ಅವರ ರಿಯಾಕ್ಷನ್​. ಅವರು ಸಹಜವಾಗಿ ಈ ರೊಮಾಂಟಿಕ್​ ಡಾನ್ಸ್ ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಅವರ ಆ್ಯಕ್ಷನ್​ ಸೆರೆಯಾಗಿದೆ. ಅದಕ್ಕೆ ಧ್ರುವಂತ್​ಗೆ ಏನಾಯ್ತು ಎಂದು ಹಲವರು ತಮಾಷೆ ಮಾಡುತ್ತಿದ್ದಾರೆ.

77
ಟಾಸ್ಕ್​ ಭರಾಟೆ

ಒಟ್ಟಿನಲ್ಲಿ ಬಿಗ್​ಬಾಸ್​ ಅಂತಿಮ ದಿನಗಳ ಹತ್ತಿರ ಆಗುತ್ತಿದ್ದಂತೆಯೇ ಒಂದು ಕಡೆ ಟಾಸ್ಕ್​ಗಳ ಭರಾಟೆ ನಡುವೆಯೇ ಇಂಥ ಸನ್ನಿವೇಶಗಳನ್ನು ಕ್ರಿಯೇಟ್​ ಮಾಡಿ ಸ್ಪರ್ಧಿಗಳನ್ನು ರಿಲ್ಯಾಕ್ಸ್​ ಮಾಡಲಾಗುತ್ತಿದೆ.

Read more Photos on
click me!

Recommended Stories