Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟನ ಕಾಮಿಡಿ ಅನೇಕರಿಗೆ ಇರಿಸುಮುರಿಸು ತಂದಿದೆ, ಬೇಸರ ಉಂಟು ಮಾಡಿದೆ. ಗಿಲ್ಲಿ ನಟ ಹಾಗೂ ಧ್ರುವಂತ್ ಪರಸ್ಪರ ಮಾತಿನಲ್ಲಿ ಯುದ್ಧ ಮಾಡುತ್ತಿರುತ್ತಾರೆ. ಈಗ ಧ್ರುವಂತ್ ಹೊಸ ಹೆಜ್ಜೆ ಹಾಕಿದ್ದಾರೆ.
ಧ್ರುವಂತ್ ಏನಾದರೂ ಅವಕಾಶ ಸಿಕ್ಕಿದರೆ ಡ್ರಿಲ್ ಮಾಡ್ತಾರೆ, ಎರಡು ಗಂಟೆ ಕೊರೆಯುತ್ತಾರೆ ಎಂದೆಲ್ಲ ಗಿಲ್ಲಿ ನಟ ಅವರು ಆಗಾಗ ಹೇಳುತ್ತಾರೆ. ಅಷ್ಟೇ ಅಲ್ಲದೆ ಧ್ರುವಂತ್ ಅವರ ನಡೆಯನ್ನು ಆಡಿಕೊಳ್ಳುತ್ತಿರುತ್ತಾರೆ. ಇದು ಧ್ರುವಂತ್‌ಗೆ ಬೇಸರ ತಂದಿದೆ.
25
ಗಿಲ್ಲಿ ನಟ ಎಲ್ಲರ ಬಳಿ ಕಾಮಿಡಿ ಮಾಡ್ತಾರೆ
ಅವಕಾಶ ಸಿಕ್ಕಿದಾಗೆಲ್ಲ ಗಿಲ್ಲಿ ನಟ ಎಲ್ಲರ ಬಳಿ ಕಾಮಿಡಿ ಮಾಡ್ತಾರೆ, ಬೇರೆಯವರನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾರೆ, ತೇಜೋವಧೆ ಮಾಡುತ್ತಾರೆ, ಗಿಲ್ಲಿ ನಟನಿಗೆ ಕಾಮಿಡಿ ಮಾಡೋಕೆ ಬರೋದಿಲ್ಲ, ಗಿಲ್ಲಿ ನಟನಿಗೆ ಬೇರೆಯವರ ವ್ಯಕ್ತಿತ್ವವೇ ಕಾಮಿಡಿ ಎಂದು ಧ್ರುವಂತ್ ಸಾಕಷ್ಟು ಬಾರಿ ಹೇಳಿದ್ದರು.
35
ಗಿಲ್ಲಿ ನಟ ತಿಗಣೆ ಥರ
ಕಳೆದ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಗಿಲ್ಲಿ ನಟ ತಿಗಣೆ ಥರ, ಎಲ್ಲರನ್ನು ಅವರು ಕಚ್ಚುತ್ತಿರಬೇಕು ಎಂದು ಕೂಡ ಧ್ರುವಂತ್ ಅವರು ಕಿಚ್ಚ ಸುದೀಪ್ ಮುಂದೆ ಹೇಳಿದ್ದರು. ಬೇರೆಯವರನ್ನು ಟಾರ್ಗೆಟ್ ಮಾಡಿ, ಕಾಮಿಡಿ ಮಾಡೋದು ನಿಲ್ಲಿಸು ಕೂಡ ಹೇಳಿದ್ದರು. ಆದರೆ ಗಿಲ್ಲಿ ಯಾರ ಮಾತನ್ನು ಕೇಳಿರಲಿಲ್ಲ.
ಚಾಮುಂಡಿ ದೇವಿ ಬಳಿ ಗಿಲ್ಲಿ ನಟ ಅವರನ್ನು ನಿಲ್ಲಿಸಿಕೊಂಡ ಧ್ರುವಂತ್ ಈಗ ಇನ್ನೊಂದು ಮಾತು ಹೇಳಿದ್ದಾರೆ. “ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೀನಿ. ನನ್ನ ಆಟ ಅಥವಾ ನನ್ನ ಮೇಲೆ ಆಡಿಕೊಳ್ಳಬೇಡಿ. ನನ್ನ ಹಿಂದೆ ನೀವು ಮಾತನಾಡಿದರೆ ಅದು ನಿಮ್ಮ ವ್ಯಕ್ತಿತ್ವ. ನಮ್ಮನ್ನೊಂದು ಬಿಟ್ಟುಬಿಡಿ, ಬಡಜೀವ ಬದುಕಿಕೊಳ್ತೀನಿ” ಎಂದು ಹೇಳಿದ್ದಾರೆ.
55
ಗಿಲ್ಲಿ ನಟ ಅವರು “ತಪ್ಪಾಯ್ತು” ಎಂದಿದ್ದಾರೆ
ಧ್ರುವಂತ್ ಅವರ ಮಾತು ಕೇಳಿ ಗಿಲ್ಲಿ ನಟ ಅವರು “ತಪ್ಪಾಯ್ತು” ಎಂದಿದ್ದಾರೆ. ಆಮೇಲೆ ಗಿಲ್ಲಿ ನಟ ಸುಮ್ಮನೆ ಅಲ್ಲಿಂದ ಹೋಗಿದ್ದಾರೆ. ಅದಾದ ಬಳಿಕ ವಿಲನ್ ಅಬ್ಬರ ಶುರುವಾಯ್ತು. ಗಿಲ್ಲಿ ನಟ ಅವರು ಮತ್ತೆ ಧ್ರುವಂತ್ ಆಟವನ್ನು ಆಡಿಕೊಂಡು, ನಕ್ಕಿದ್ದಾರೆ. ಧ್ರುವಂತ್ ಅವರು ಬಿಗ್ ಬಾಸ್ ಬಿಡಿಸ್ತೀನಿ, ಕರೆದುಕೊಂಡು ಬರ್ತೀನಿ, ತಪಸ್ಸು ಮಾಡ್ತೀನಿ ಎಂದು ಹೇಳಿದ್ದರು. ಇದನ್ನು ಗಿಲ್ಲಿ ಆಡಿಕೊಂಡು ನಕ್ಕಿದ್ದಾರೆ. ಚಾಮುಂಡಿ ದೇವಿ ಬಳಿ ಈ ರೀತಿ ಮಾತು ಆಡಿರೋದಿಕ್ಕೆ ಗಿಲ್ಲಿ ನಟ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ.