ಇದಾಗಲೇ ರಕ್ಷಿತಾ ಅವರ ಮದುವೆಯ ವಿಷಯ ಕೆಲ ದಿನಗಳ ಹಿಂದೆ ಬಿಗ್ಬಾಸ್ ಮನೆಯಲ್ಲಿ ಚರ್ಚೆಗೆ ಒಳಗಾಗಿತ್ತು. ಸ್ಪರ್ಧಿ ತ್ರಿವಿಕ್ರಮ್ ಅವರು ತಮಾಷೆಗೆ ರಕ್ಷಿತಾ ಶೆಟ್ಟಿ ಬಳಿ, “ರಕ್ಷಿತಾ ನನ್ನ ಮದುವೆ ಆಗ್ತೀಯಾ?” ಎಂದು ಪ್ರಶ್ನೆ ಮಾಡಿದ್ದರು. ಆಗ ರಕ್ಷಿತಾ ಅವರಿಗೆ ಸರಿಯಾಗಿ ಕೇಳಿಸಿರಲಿಲ್ಲ. ಹೀಗಾಗಿ ಅವರು, “ನಿಮ್ಮ ಮದುವೆಗೆ ಬರೋಕೆ ಟ್ರೈ ಮಾಡ್ತೀನಿ, ನೀವು ನನ್ನ ಮದುವೆಗೆ ಬನ್ನಿ” ಎಂದು ಹೇಳಿದ್ದರು.