ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್

Published : Dec 07, 2025, 04:44 PM IST

ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್ , ಫಿನಾಲೆಗೂ ಮೊದಲೇ ಟ್ರೋಫಿ ಯಾರಿಗೆ ಅನ್ನೋದು ನಿರ್ಧಾರವಾಗಿದೆಯಾ? ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ಬಿಗ್ ಬಾಸ್

PREV
16
ಬಿಗ್ ಬಾಸ್ ಫಿನಾಲೆಗೂ ಮೊದಲೇ ವಿನ್ನರ್ ಹೆಸರು ಲೀಕ್

ಬಿಗ್ ಬಾಸ್ 19 ಆವೃತ್ತಿ ಅದ್ಧೂರಿ ಫಿನಾಲೆಗೆ ಕೆಲ ಗಂಟೆಗಳು ಮಾತ್ರ ಬಾಕಿ. ಈ ಬಾರಿ ಯಾರು ಟ್ರೋಫಿ ಗೆಲ್ಲುತ್ತಾರೆ ಅನ್ನೋ ಕುತೂಹಲ ಸಹಜವಾಗಿ ಎಲ್ಲರಲ್ಲಿ ಮನೆ ಮಾಡಿದೆ. ಫಿನಾಲೆ ಆರಂಭಗೊಳ್ಳುವ ಮೊದಲೇ ಬಿಗ್ ಬಾಸ್ ಟ್ರೋಫಿ ಯಾರಿಗೆ ಅನ್ನೋದು ನಿರ್ಧಾರವಾಗಿದೆಯಾ? ಈ ಕುರಿತು ಕೆಲ ಸ್ಕ್ರೀನ್‌ಶಾಟ್ ಹಾಗೂ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

26
ಯಾರ ಹೆಸರು ಲೀಕ್?

ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಇಂದು ಅಂತ್ಯಗೊಳ್ಳುತ್ತಿದೆ. ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ. ಇಂದು ರಾತ್ರಿ ಬಿಗ್ ಬಾಸ್ 19ನೇ ಆವೃತ್ತಿ ಫಿನಾಲೆ ನಡೆಯಲಿದೆ. ಇದಕ್ಕೂ ಮೊದಲು ಈ ಬಾರಿ ಗೌರವ್ ಖನ್ನಾ ಟ್ರೋಫಿ ವಿನ್ನರ್ ಎಂಬ ವದಂತಗಳು ಹರಿದಾಡುತ್ತಿದೆ. ಪ್ರಮುಖವಾಗಿ ವಿಕಿಪೀಡಿಯಾದಲ್ಲಿ ಬಿಗ್ ಬಾಸ್ 19ರ ವಿನ್ನರ್ ಗೌರವ್ ಖನ್ನಾ ಎಂದು ಎಡಿಟ್ ಮಾಡಿರುವ ಫೋಟೋಗಳು ಹರಿದಾಡಿದೆ.

36
ಫೈನಲಿಸ್ಟ್

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಬಿಗ್ ಬಾಸ್ 19 ಫೈನಲಿಸ್ಟ್‌ಗಳಾಗಿ ತಾನ್ಯ ಮಿತ್ತಲ್, ಪ್ರಣಿತ್ ಮೋರೆ, ಅಮಾಲ್ ಮಲಿಕ್ ಹಾಗೂ ಫರ್ಹನಾ ಭಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಹಂಚಿಕೊಂಡಿದ್ದಾರೆ. ಆದರೆ ಅಧೀಕೃತವಾಗಿ ಯಾವುದೂ ಘೋಷಣೆಯಾಗಿಲ್ಲ. ಇದು ಕೇವಲ ವದಂತಿ ಮಾತ್ರ.

46
ಫಿನಾಲೆಯಲ್ಲಿದ್ದಾರೆ ಐವರು

ಬಿಗ್ ಬಾಸ್ 19ರ ಫಿನಾಲೆಯಲ್ಲ ಐವರು ಕಣದಲ್ಲಿದ್ದಾರೆ. ಗೌರವ್ ಖನ್ನ, ತಾನ್ಯ ಮಿತ್ತಲ್, ಪ್ರಣಿತ್ ಮೋರೆ, ಅಮಾಲ್ ಮಲಿಕ್ ಹಾಗೂ ಫರ್ಹಾನ ಭಟ್ ಫಿನಾಲೆಯಲ್ಲಿದ್ದಾರೆ. ವೋಟಿಂಗ್ ಆರಂಭಗೊಂಡಿದ್ದು, ಅಭಿಮಾನಿಗಳು, ವೀಕ್ಷಕರು ವೋಟಿಂಗ್ ಮಾಡುತ್ತಿದ್ದಾರೆ. ಯಾರು ಅನ್ನೋ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.

56
ಬಿಗ್ ಬಾಸ್ ವಿನ್ನರ್ ಮೇಲೆ ಅನುಮಾನ

ಪ್ರತಿ ಬಿಗ್ ಬಾಸ್ ಆವೃತ್ತಿಯಲ್ಲಿ ವಿನ್ನರ್ ಮೇಲೆ ಫಿಕ್ಸ್ ಎಂಬ ಗಂಭೀರ ಆರೋಪ ಕೇಳಿಬರುತ್ತಲೇ ಇದೆ. ಕಳೆದ ಆವೃತ್ತಿಗಳಲ್ಲೂ ಬಿಗ್ ಬಾಸ್ ವಿನ್ನರ್ ಮೇಲೆ ಇದೇ ರೀತಿ ಆರೋಪಗಳು ಕೇಳಿಬಂದಿತ್ತು. ಈ ಬಾರಿಯೂ ಬಿಗ್ ಬಾಸ್ ವಿನ್ನರ್ ಮೊದಲೇ ಫಿಕ್ಸ್ ಆಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ.

ಬಿಗ್ ಬಾಸ್ ವಿನ್ನರ್ ಮೇಲೆ ಅನುಮಾನ

66
ಸಲ್ಮಾನ್ ಖಾನ್ ಶೋ

ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ ಶೋ ಅತ್ಯಂತ ಜನಪ್ರಿಯ ಶೋ ಆಗಿ ಹೊರಹೊಮ್ಮಿದೆ. 19ನೇ ಆವೃತ್ತಿ ಇಂದು ಮುಕ್ತಾಯಗೊಳ್ಳುತ್ತಿದೆ. ದುಬಾರಿ ಮೊತ್ತ ಸಂಭಾವನೆ ಪಡೆಯುವ ಸಲ್ಮಾನ್ ಖಾನ್, ಈ ಬಾರಿ ಬಿಗ್ ಬಾಸ್ ಶೋ ಹೋಸ್ ಮಾಡುವುದಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು.

ಸಲ್ಮಾನ್ ಖಾನ್ ಶೋ

Read more Photos on
click me!

Recommended Stories