'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಅಜ್ಜಿ ಭಾಗ್ಯಮ್ಮ ಮೊಮ್ಮಕ್ಕಳನ್ನು ಹುಡುಕಿ ಬಂದಿದ್ದಾರೆ. ಭೂಮಿಕಾಳ ಹಠದಿಂದ ದೂರವಾಗಿರುವ ಗೌತಮ್-ಭೂಮಿಕಾಳನ್ನು ಒಂದು ಮಾಡಲು ಅಜ್ಜಿ ಪಣತೊಟ್ಟಿದ್ದು, ವಠಾರದಲ್ಲಿ ಮೊಮ್ಮಕ್ಕಳನ್ನು ಭೇಟಿಯಾಗಿ ಮುದ್ದಾಡಿದ್ದಾರೆ. ಆದರೆ, ಜೈದೇವ್ ಕಥೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಅಮೃತಧಾರೆ (Amruthadhaare)ಯಲ್ಲಿ ಅತ್ತ ಭೂಮಿಕಾ ತನ್ನ ಹಠವನ್ನು ಬಿಡದೇ ಒಂದು ಹಂತದಲ್ಲಿ ವೀಕ್ಷಕರ ಕೆಂಗಣ್ಣಿಗೂ ಗುರಿಯಾಗುತ್ತಿದ್ದರೆ, ಇತ್ತ ಮೊಮ್ಮಕ್ಕಳನ್ನು ಹುಡುಕಿ ಅಜ್ಜಿ ಬಂದೇ ಬಿಟ್ಟಿದ್ದಾಳೆ.
27
ಒಂದು ಮಾಡುವ ಪಣ
ಗೌತಮ್ ಮತ್ತು ಭೂಮಿಕಾ ಬೇರೆ ಬೇರೆ ಇರುವುದು ತಿಳಿಯುತ್ತಲೇ ಭಾಗ್ಯಮ್ಮಾ ಇಬ್ಬರನ್ನೂಒಂದು ಮಾಡುವ ಪಣ ತೊಟ್ಟಿದ್ದಾಳೆ. ಆದರೆ ಶಕುಂತಲಾ ಭಯಕ್ಕೆ ಭೂಮಿಕಾ ಗೌತಮ್ ಜೊತೆ ಒಂದಾಗಲು ಒಪ್ಪುತ್ತಲೇ ಇಲ್ಲ.
37
ಲವ್ ಅಜ್ಜಿ ಎಂಟ್ರಿ
ಅದೇ ಇನ್ನೊಂದೆಡೆ ಲವ್ ಅಜ್ಜಿ ಎಂದೇ ಫೇಮಸ್ ಆಗಿರೋ ಗೌತಮ್ನ ಅಜ್ಜಿ ಎಂಟ್ರಿ ಆಗಿದೆ. ಭೂಮಿಕಾ ಮತ್ತು ಗೌತಮ್ ಇನ್ನು ಒಂದಾಗುವಲ್ಲಿ ಯಾವುದೇ ಸಂದೇಹವೇ ಇಲ್ಲ. ಇಬ್ಬರೂ ಬೇಗ ಒಂದಾಗಲಿ ಎನ್ನುವ ಆಶಯ ವೀಕ್ಷಕರದ್ದು ಕೂಡ.
ಆದರೆ ಅದರ ನಡುವೆಯೇ ಭಾಗ್ಯಮ್ಮ ವಠಾರಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಮೊಮ್ಮಕ್ಕಳ ಮೇಲಿನ ಅಜ್ಜಿಯ ಪ್ರೀತಿ ಎಂದ್ರೆ ಸುಮ್ಮನೇನಾ? ಯಾರ ಮಾತನ್ನೂ ಕೇಳದೇ ಬಂದಿದ್ದಾಳೆ ಭಾಗ್ಯಮ್ಮ.
57
ಮೊಮ್ಮಕ್ಕಳ ಮುದ್ದಾಟ
ಅಲ್ಲಿ ಮಿಂಚು ಕೂಡ ಭಾಗ್ಯಮ್ಮನ ಕಣ್ಣಿಗೆ ಬಿದ್ದಿದ್ದಾಳೆ. ಆಕಾಶ್ ನೀನು ನನ್ನ ಅಪ್ಪನ ಅಮ್ಮ ಎನ್ನುವುದು ಗೊತ್ತು ಎಂದು ಹೇಳಬೇಕು ಎಂದುಕೊಂಡಿದ್ದ, ಆದರೆ ಅದು ಸರಿಯಾಗುವುದಿಲ್ಲ ಎಂದು ಗೌತಮ್ ಸರ್ ಅಮ್ಮ ಎಂದು ಹೇಳಿದ್ದಾನೆ.
67
ತಬ್ಬಿಕೊಂಡ ಭಾಗ್ಯಮ್ಮ
ಇಬ್ಬರನ್ನೂ ತಬ್ಬಿಕೊಂಡು ಮುದ್ದಾಡಿದ್ದಾಳೆ ಭಾಗ್ಯಮ್ಮ. ಈ ಕ್ಷಣಕ್ಕಾಗಿ ಅದೆಷ್ಟೋ ದಿನಗಳಿಂದ ವೀಕ್ಷಕರು ಕಾದು ಕುಳಿತಿದ್ದರು. ಇನ್ನೇನು ಸೀರಿಯಲ್ ಮುಗಿಯೋ ಹಂತಕ್ಕೆ ಬಂದಿದೆ.
77
ಜೈದೇವ್ ಸ್ಟೋರಿ
ಆದರೆ, ಜೈದೇವ್ ಸ್ಟೋರಿ ಇನ್ನೂ ಬಾಕಿ ಇದೆ. ಮಲ್ಲಿಯ ಹುಡುಕಾಟದಲ್ಲಿ ಅವನಿದ್ದಾನೆ. ಆದರೆ ಇದಾಗಲೇ ಅವನು ಬಹುತೇಕ ಎಲ್ಲಾ ಕಡೆ ಸೋತಿದ್ದಾನೆ. ಆದರೂ ತನ್ನ ಹುಡುಕಾಟ ಬಿಡಲಿಲ್ಲ.