ಬಿಗ್‌ಬಾಸ್‌ನ ಸ್ಟ್ರಾಂಗ್ ಸ್ಪರ್ಧಿ ಮಲ್ಲಮ್ಮ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ನಡುವೆಯೇ, 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆಗಿನ ಅವರ ವಿಡಿಯೋ ವೈರಲ್ ಆಗಿದೆ. ಮನೋಜ್ ಕುಮಾರ್ ಅವರು ಮಲ್ಲಮ್ಮ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ
ಸದ್ಯ ಬಿಗ್ಬಾಸ್ (Bigg Boss)ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ಮಲ್ಲಮ್ಮ. ಸ್ಟ್ರಾಂಗ್ ಸ್ಪರ್ಧಿಯಾಗಿ ಮುನ್ನುಗ್ಗುತ್ತಿದ್ದಾರೆ. ಅವರು ಏಕಾಏಕಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದರು ಎಂದು ಸುದ್ದಿಯಾಗಿತ್ತು. ಕೊನೆಗೆ ಅದು ಸುಳ್ಳು ಎಂದು ಹೇಳಲಾಯಿತು.
26
ಕುಸಿದು ಬಿದ್ದಿದ್ದರು?
ಇದರ ಬೆನ್ನಲ್ಲೇ ಅವರು ಬಿಗ್ಬಾಸ್ ಆಟವಾಡುವ ಸಮಯದಲ್ಲಿ ಕುಸಿದು ಬಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಅವರು ಸ್ಟ್ರೆಚರ್ನಲ್ಲಿ ಹೋಗುವುದನ್ನು ತೋರಿಸಲಾಗಿತ್ತು. ಕೊನೆಗೆ ಅದು ಮನೆಯೊಳಗಿನ ನಾಟಕದ ಒಂದು ಭಾಗ ಎನ್ನುವ ಸ್ಪಷ್ಟನೆ ಬಂದಿತು.
36
ಭಾರ್ಗವಿ ಎಲ್ಎಲ್ಬಿಯ ನಾಯಕ
ಇವೆಲ್ಲವುಗಳ ನಡುವೆಯೇ ಇದೀಗ ಅವರು ನಟ ಮನೋಜ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದಾರೆ. ಮನೋಜ್ ಕುಮಾರ್ ಎಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಇವರೇ ಕಲರ್ಸ್ ಕನ್ನಡದ ಪ್ರಸಿದ್ಧ ಸೀರಿಯಲ್ ಭಾರ್ಗವಿ ಎಲ್ಎಲ್ಬಿಯ (Bhargavi LLB) ಅರ್ಜುನ್ ಉರ್ಫ್ ಪಾರ್ಥ.
ಇವರಿಬ್ಬರೂ ಒಟ್ಟಿಗೇ ಇರುವ ವಿಡಿಯೋ ಅನ್ನು ಮಲ್ಲಮ್ಮ ಟಾಕ್ಸ್ನಲ್ಲಿ ಶೇರ್ ಮಾಡಲಾಗಿದೆ. ಅಂದ ಮಾತ್ರಕ್ಕೆ ಮಲ್ಲಮ್ಮನವರು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದರು ಎನ್ನುವುದು ಅರ್ಥವಲ್ಲ. ಬದಲಿಗೆ ಇದನ್ನು ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಪೂರ್ವದಲ್ಲಿಯೇ ಶೂಟ್ ಮಾಡಲಾಗಿದೆ.
56
ಮಲ್ಲಮ್ಮ ಪರವಾಗಿ ಪ್ರಚಾರ
ಬಿಗ್ಬಾಸ್ ಸ್ಪರ್ಧಿಗಳು ಮನೆಯೊಳಕ್ಕೆ ಹೋಗುವ ಪೂರ್ವದಲ್ಲಿ ತಮ್ಮ ಪರವಾಗಿ ಪ್ರಚಾರಮಾಡಲು ಯಾರನ್ನಾದರೂ ನೇಮಕ ಮಾಡಿರುತ್ತಾರೆ. ಸ್ಪರ್ಧಿಗಳ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ಅವರ ಪರವಾಗಿ ಪ್ರಚಾರ ನಡೆಯುತ್ತದೆ. ಅದೇ ರೀತಿ ಮಲ್ಲಮ್ಮ ಪರವಾಗಿ ಮನೋಜ್ ಕುಮಾರ್ ಪ್ರಚಾರ ಮಾಡುತ್ತಿದ್ದಾರೆ.
66
ನಟನ ಕುರಿತು...
ಇನ್ನು ನಟ ಮನೋಜ್ ಕುಮಾರ್ ಕುರಿತು ಹೇಳುವುದಾದರೆ, ಇವರು, ಮಂಗಳೂರಿನವರು. ಫಾರ್ಮಸಿ ವಿಜ್ಞಾನ ಪದವೀಧರರಾಗಿದ್ದಾರೆ. ನಟನೆಯತ್ತ ಆಸಕ್ತಿ ಹುಟ್ಟಿದ್ದರಿಂದ ನಟನೆಗೆ ವಾಲಿದ್ದಾರೆ. ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.