Bigg Boss Kannada 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಕಂಡರೆ ರಿಷಾ ಗೌಡ ಉರಿದು ಬೀಳ್ತಾರೆ, ರಕ್ಷಿತಾಗೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತಾರೆ, ಆದರೆ ಸುಮ್ನೆ ನಾಟಕ ಮಾಡ್ತಾರೆ ಎಂದು ಸಾಕಷ್ಟು ಬಾರಿ ಮಿಮಿಕ್ರಿ ಮಾಡಿದ್ದರು. ಈಗ ಕಿಚ್ಚನ ಪಂಚಾಯಿತಿಯಲ್ಲಿ ಇದೇ ವಿಚಾರ ಚರ್ಚೆ ಆಗಿದೆ.
“ಕಿಚ್ಚ ಸುದೀಪ್ ಅವರು ನನಗೆ ಬೈದರೂ ಪರವಾಗಿಲ್ಲ, ನಾನು ಒಂದು ಪ್ರಶ್ನೆಯನ್ನು ಕೇಳ್ತೀನಿ ಎಂದು ಹೇಳಿದ್ದೀರಿ. ನಾನು ಬೈಯ್ಯೋದಿಲ್ಲ. ಏನು ಕೇಳಬೇಕೋ, ಕೇಳಿ” ಎಂದು ಕಿಚ್ಚ ಸುದೀಪ್ ಅವರು ರಿಷಾ ಗೌಡಗೆ ಹೇಳಿದ್ದಾರೆ.
26
ರಿಷಾ ಗೌಡಗೆ ಏನು ಪ್ರಶ್ನೆ ಕೇಳಬೇಕಿತ್ತಂತೆ?
ರಿಷಾ ಗೌಡ ಅವರು, “ನಾನು ಹೇಳಿದೀನಿ. ರಕ್ಷಿತಾ ಶೆಟ್ಟಿ ಅವರ ಜೊತೆ ಮಾತನಾಡುವಾಗ ಅವರಿಗೆ ಅಚ್ಚಕಟ್ಟಾಗಿ ಕನ್ನಡ ಬರುವುದು. ಒಂದು ವೇಳೆ ಅವಳಿಗೆ ಎಲ್ಲೋ ಒಂದು ಕಡೆ ಕನ್ನಡ ಬರೋದಿಲ್ಲ ಎಂದಾಗಲೂ ಕೂಡ ಅದು ಇದು ಅಂತ ಪ್ಲೇ ಕಾರ್ಡ್ ಮಾಡುತ್ತಿದ್ದಾಳೆ ಎಂದು ಅನಿಸುವುದು. ಅವಳ ಜೊತೆ ಮಾತನಾಡುವಾಗಲೂ ನಾರ್ಮಲ್ ಆಗಿ ಮಾತನಾಡುತ್ತಾಳೆ. ಯುಟ್ಯೂಬ್ ಚಾನೆಲ್ ಬಂದಾಗ ನೋಡಿ ಜನರೇ.. ಹಂಗೆ ಹಿಂಗೆ ಅಂತ ಮಾಡ್ತಾಳೆ, ಆಮೇಲೆ ನಾರ್ಮಲ್ ಆಗಿ ಮಾತನಾಡುತ್ತಾಳೆ.
36
ರಕ್ಷಿತಾ ಶೆಟ್ಟಿ ನಾಟಕ ಮಾಡ್ತಿದ್ದಾರೆ
“ರಕ್ಷಿತಾ ಮಾತನಾಡೋದು ತುಂಬ ನಾಟಕೀಯ ಎನಿಸುತ್ತದೆ. ನನ್ನ ಜೊತೆ ವಾದ ಮಾಡುವಾಗಲೂ ಹತ್ತು ಹದಿನೈದು ನಿಮಿಷ ಸ್ಪಷ್ಟ ಕನ್ನಡ ಮಾತನಾಡುತ್ತಾಳೆ. ಶನಿವಾರ, ರವಿವಾರ ಅಂತ ಕೇಳಿದಾಗ ಅದು ಇದು ಅಂತ ಮಾತನಾಡುತ್ತಾಳೆ, ಇದು ಅವಳ ತಂತ್ರವೇ ಎಂಬ ಪ್ರಶ್ನೆ ಆಯ್ತು" ಎಂದು ರಿಷಾ ಗೌಡ ಹೇಳಿದ್ದಾರೆ.
“ನಾನೊಂದು ಪ್ರಶ್ನೆ ಕೇಳಲಾ? ಇಡೀ ವಾರ ನಿಮ್ಮ ಧ್ವನಿ ಕಿತ್ತುಕೊಂಡು ಹೋಗುತ್ತಿರುತ್ತದೆ. ನಾನು ಬಂದಾಗ ಯಾಕೆ ಸಾಫ್ಟ್ ಆಗಿ ಮಾತನಾಡ್ತೀರಿ? ಪ್ರಜ್ಞಾವಂತರಾಗಿ ನಾನು ಮಾತನಾಡಬೇಕು, ಜನರು ನೋಡುತ್ತಿರುತ್ತಾರೆ, ಸ್ಪಷ್ಟನೆ ಕೊಡಬೇಕು. ಶನಿವಾರ, ರವಿವಾರ ನಾನು ಚೆನ್ನಾಗಿ ಕಾಣಬೇಕು ಎನ್ನೋದಿರುತ್ತದೆ. ಇಲ್ಲಿ ಎಲ್ಲರೂ ಮಾತನಾಡೋದು ವೀಕ್ ಡೇಸ್‌ನಲ್ಲಿ ಒಂದಾದರೆ, ವೀಕೆಂಡ್‌ನಲ್ಲಿ ಮಾತನಾಡೋದು ಬೇರೆ ಇರುತ್ತದೆ. ಅಲ್ಲಿ ಗೌರವ ಇರುತ್ತದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
56
ನೀವು ಯಾಕೆ ಮೊದಲಿನ ಥರ ಇಲ್ಲ?
“ಎಂಟ್ರಿ ಕೊಡುವಾಗ ಎಲ್ಲರ ತಲೆಬುರುಡೆ ಒಡೆದು ಹೋದಿರಿ. ಒಳಗಡೆ ಬೇರೆ ರಿಷಾ ಆದ್ರಿ. ಬೇರೆಯವರ ಕೆಲಸ ನಿಮ್ಮ ಕೆಲಸವಲ್ಲ, ನಿಮ್ಮ ಕೆಲಸ ಮಾಡಿ” ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
66
ರಿಷಾ ಗೌಡ ಮತ್ತೆ ಮಾತನಾಡಲಿಲ್ಲ
ಕಿಚ್ಚ ಸುದೀಪ್ ಅವರ ಮಾತಿಗೆ ರಿಷಾ ಗೌಡ ಸೈಲೆಂಟ್ ಆಗಿದ್ದಾರೆ. ರಿಷಾ ಗೌಡ ಆನಂತರ ಏನೂ ಮಾಡಿಲ್ಲ.