Niveditha Gowdaಗೆ ಬಂದ ಕಮೆಂಟ್ಸ್​ಗಳೇ ಈಗ Rap Music: ಚಂದನ್​ ಶೆಟ್ಟಿನೂ ಸುಸ್ತಾಗಿ ಹೋಗ್ತಾರೆ ಎಂದ ನೆಟ್ಟಿಗರು!

Published : Nov 02, 2025, 11:42 AM IST

ಡಿವೋರ್ಸ್ ಬಳಿಕ ಹಾಟ್ ಫೋಟೋಗಳಿಂದ ಟ್ರೋಲ್ ಆಗುತ್ತಿರುವ ನಿವೇದಿತಾ ಗೌಡ ಅವರಿಗೆ ಬರುವ ಕೆಟ್ಟ ಕಮೆಂಟ್‌ಗಳೇ ಈಗ ಸುದ್ದಿಯಲ್ಲಿವೆ. ಈ ಅಶ್ಲೀಲ ಮತ್ತು ಅವಮಾನಕಾರಿ ಕಮೆಂಟ್‌ಗಳನ್ನೇ ಬಳಸಿ 'ಕಮೆಂಟ್‌ಬಾಕ್ಸ್ ಕನ್ನಡ' ಎಂಬ ಖಾತೆಯು ಒಂದು ವಿಶಿಷ್ಟವಾದ ರಾಪ್ ಹಾಡನ್ನು ಸೃಷ್ಟಿಸಿದ್ದಾರೆ.  

PREV
17
ಹಾಟೆಸ್ಟ್​ ನಿವೇದಿತಾ ಗೌಡ

ನಿವೇದಿತಾ ಗೌಡ (Niveditha Gowda) ದಿನದಿಂದ ದಿನಕ್ಕೆ ಹಾಟ್​ ಆಗಿ ಕಾಣಿಸಿಕೊಂಡು ಟ್ರೋಲ್​ಗೆ ಒಳಗಾಗ್ತಿರೋ ವಿಷ್ಯ ನೆಟ್ಟಿಗರಿಗೆ ಗೊತ್ತಿದ್ದದ್ದೇ. ಚಂದನ್​ ಶೆಟ್ಟಿ ಅವರನ್ನು ಮದುವೆಯಾಗುವ ಮೊದಲೇ ರೀಲ್ಸ್​ ಮಾಡಿಕೊಂಡು ಟ್ರೋಲ್​ಗೆ ಒಳಗಾಗಿದ್ದರಿಂದಲೇ ಬಿಗ್​ಬಾಸ್​ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದ ನಟಿ, ಇದೀಗ ಡಿವೋರ್ಸ್​ ಬಳಿಕ ತುಂಡುಡುಗೆಯಿಂದ ಫೇಮಸ್​ ಆಗ್ತಿದ್ದಾರೆ.

27
ಪ್ಲಾಸ್ಟಿಕ್​ ಸರ್ಜರಿ?

ಬಳಕುವ ಬಳ್ಳಿಯಂಥ ಶರೀರವಿದ್ದರೂ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ರೀತಿಯಲ್ಲಿ ಧಾರಾಳ ದೇಹ ಪ್ರದರ್ಶನ ಮಾಡುತ್ತಲೇ ದಿನನಿತ್ಯವೂ ಅತ್ಯಂತ ಕೆಟ್ಟ ಕೆಟ್ಟ ಕಮೆಂಟ್ಸ್​ಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ ನಿವೇದಿತಾ. ಇದೇನೇ ಆದರೂ ಅವರು ಡೋಂಟ್​ ಕೇರ್​.

37
ಟ್ರೋಲಿಗರಿಂದಲೇ ಜೀವನ

ಇವರು ರೀಲ್ಸ್​ ಮಾಡಿದರು ಎಂದರೆ ಸಾಕು, ಅದನ್ನು ಬಾಯಿ ಚಪ್ಪರಿಸಿಕೊಂಡು ನೋಡುತ್ತಾ, ಟ್ರೋಲ್​ ಮಾಡುವ ದೊಡ್ಡ ವರ್ಗ ಇದೆ, ಇದರಿಂದಲೇ ತಮಗೆ ಒಳ್ಳೆಯ ಸಂಪಾದನೆ ಎನ್ನುವುದು ನಿವೇದಿತಾ ಅವರಂಥ ಅನೇಕ ಯುವತಿಯರಿಗೆ ಗೊತ್ತಿರುವ ವಿಷ್ಯವೇ. ಇದೇ ಕಾರಣದಿಂದ ಕೆಟ್ಟ ಕಮೆಂಟ್ಸ್​ ಹೆಚ್ಚಾದಷ್ಟೂ ಅಂಗಾಂಗ ಪ್ರದರ್ಶನ ಮಿತಿ ಮೀರಿ ಹೋಗುವುದು ಇದೆ.

47
ಕೆಟ್ಟ ಕಮೆಂಟ್ಸ್​ Rap song

ಇದೇ ಸಾಲಿಗೆ ಸೇರಿರುವ Bigg Boss ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಬರುವ ಅತ್ಯಂತ ಕೆಟ್ಟ ಕಮೆಂಟ್ಸ್​ಗಳನ್ನೇ Rap song ಮಾಡಲಾಗಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು.

57
ಮಾನ ಹರಾಜಾಗುವ ಕಮೆಂಟ್ಸ್​

ಈ ಕಮೆಂಟ್ಸ್​ಗಳು ಎಷ್ಟು ಕೆಟ್ಟದ್ದಾಗಿರುತ್ತವೆ, ಮಾನ ಹರಾಜು ಹಾಕುವಂಥದ್ದು ಇರುತ್ತವೆ, ನಾಚಿಕೆಗೇಡಿನದ್ದಾಗಿರುತ್ತದೆ ಎನ್ನುವುದನ್ನು ಈ Rap ನೋಡಿದರೆ ತಿಳಿಯುತ್ತದೆ. ಖುದ್ದು ಚಂದನ್ ಶೆಟ್ಟಿ ಅವರೇ Rapper ಆಗಿರುವ ಕಾರಣ, ಅವರಿಗೂ ಕೂಡ ಇಂಥ ಐಡಿಯಾ ಬಂದಿರಲಿಕ್ಕಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

67
ಕಂಪೋಸ್​ ಮಾಡಿದ್ದು ಯಾರು?

ಇದನ್ನು ಕಂಪೋಸ್​ ಮತ್ತು ಎಡಿಟಿಂಗ್​ ಮಾಡಿರುವುದು jewinson_urf_commentbox, kannada ಎಂದು ಬರೆದುಕೊಳ್ಳಲಾಗಿದ್ದು, ಕಮೆಂಟ್ಸ್​ಗಳನ್ನೇ ಹೇಗೆ rap song ಮಾಡಬಹುದು ಎನ್ನುವುದನ್ನು ಅದ್ಭುತವಾಗಿ ಇವರು ತೋರಿಸಿಕೊಟ್ಟಿದ್ದಾರೆ.

77
ಕಮೆಂಟ್ಸ್​ ಓದಲು ಬಂದ...

ಕಮೆಂಟ್ಸ್​ ಓದಲು ಬಂದ ತಜ್ಞರಿಗೆ ಸ್ವಾಗತ ಎನ್ನುವುದು ಇವರ ರೀಲ್ಸ್​ಗಳಲ್ಲಿ ಹೆಚ್ಚಾಗಿ ಇರುವ ಕಮೆಂಟ್​. ಅದರಿಂದ ಆರಂಭವಾಗಿರುವ ಈ Rap song ಬಳಿಕ ಅತ್ಯಂತ ಕೆಟ್ಟ, ಅಶ್ಲೀಲ ಪದಗಳಿಂದ ತುಂಬಿರುವ ಕಮೆಂಟ್ಸ್​ಗಳನ್ನೂ ಒಳಗೊಂಡಂತೆ ಸಂಗೀತವನ್ನು ಕಂಪೋಸ್​ ಮಾಡಲಾಗಿದೆ.

ಇಲ್ಲಿದೆ ನೋಡಿ Rap Music

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories