ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಧನುಷ್ ತಮ್ಮ ಆಟದ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ. ಧನುಷ್ ಅವರ ಈ ಲೆಕ್ಕಾಚಾರದ ಆಟವನ್ನು ಗಮನಿಸಿದ ಅಶ್ವಿನಿ ಗೌಡ ಮತ್ತು ಧ್ರುವಂತ್, ಅವರ ಅಸಲಿ ಆಟದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ಧನುಷ್ ಯಾರೊಂದಿಗೂ ಹೆಚ್ಚು ಜಗಳವಾಡದೇ, ಸಮಾಧಾನದಿಂದ ಎಲ್ಲವನ್ನು ಗಮನಿಸುತ್ತಾ ಆಟವಾಡಿಕೊಂಡು ಬರುತ್ತಿದ್ದಾರೆ. ಫಿನಾಲೆ ಸಮೀಪದಲ್ಲಿರುವ ಧನುಷ್ ಆಟದ ತಂತ್ರಗಾರಿಕೆ ಬಗ್ಗೆ ಅಶ್ವಿನಿ ಗೌಡ ಮತ್ತು ಧ್ರುವಂತ್ ಮಾತನಾಡಿದ್ದಾರೆ. ಇವರಿಬ್ಬರ ವಿಶ್ಲೇಷಣೆ ಕಂಡು ವೀಕ್ಷಕರು, ಇದು ನಿಜ ಅಲ್ಲವಾ ಎಂದು ಉದ್ಘಾರ ತೆಗೆಯುತ್ತಿದ್ದಾರೆ.
26
ನಾಮಿನೇಷನ್ ಪ್ರಕ್ರಿಯೆ
ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಧ್ವಜ ಪಡೆದುಕೊಳ್ಳುವ ಧನುಷ್ ಮೊದಲಿಗೆ ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರನ್ನು ನಾಮಿನೇಟ್ ಮಾಡಿ ಕಾರಣಗಳನ್ನು ನೀಡುತ್ತಾರೆ. ಇವರಿಬ್ಬರ ಪೈಕಿ ಅಶ್ವಿನಿ ಗೌಡ ನಾಮಿನೇಟ್ ಆಗಿ ಧ್ರುವಂತ್ ಸೇವ್ ಆಗುತ್ತಾರೆ. ಅಶ್ವಿನಿ ಗೌಡ ಅವರಿಗೆ ಧನುಷ್ ನೀಡಿದ ಕಾರಣ ತುಂಬಾ ಸಿಲ್ಲಿಯಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು.
36
ಸ್ಟ್ರಾಂಗ್ ಕಾರಣ ನೀಡದ ಧ್ರುವಂತ್
ಎರಡನೇ ಬಾರಿ ನಾಮಿನೇಟ್ ಮಾಡುವ ಅವಕಾಶ ಪಡೆದುಕೊಳ್ಳುವ ಧನುಷ್ ಸಿಲ್ಲಿ ಕಾರಣ ನೀಡಿ ಕಾವ್ಯಾ ಅವರನ್ನು ಉಳಿಸಿಕೊಂಡು ಧ್ರುವಂತ್ ನಾಮಿನೇಟ್ ಆಗುವಂತೆ ನೋಡಿಕೊಳ್ಳುತ್ತಾರೆ. ಧ್ರುವಂತ್ ವಿರುದ್ಧ ಪ್ರಬಲ ಕಾರಣ ನೀಡಿದ್ದ ಧನುಷ್, ಸಹ ಸ್ಪರ್ಧಿ ಕಾವ್ಯಾ ಅವರನ್ನು ನಾಮಿನೇಟ್ ಮಾಡಲು ಯಾವುದೇ ಸ್ಟ್ರಾಂಗ್ ಕಾರಣ ನೀಡಲ್ಲ. ಹಾಗಾಗಿ ಧ್ರುವಂತ್ ನಾಮಿನೇಟ್ ಆಗುತ್ತಾರೆ.
ಈ ನಾಮಿನೇಷನ್ ಪ್ರಕ್ರಿಯೆ ಬಳಿಕ ಧನುಷ್ ತಾನೇಕೆ ಸಿಲ್ಲಿಯಾದ ಕಾರಣ ನೀಡಿದೆ ಎಂಬುದರ ಬಗ್ಗೆ ಕಾವ್ಯಾ ಮತ್ತು ಸ್ಪಂದನಾ ಜೊತೆ ಚರ್ಚೆ ಮಾಡುತ್ತಾರೆ. ಒಂದು ವೇಳೆ ಕಾವ್ಯಾಗೆ ನಾನು ಸ್ಟ್ರಾಂಗ್ ರೀಸನ್ ನೀಡಿದ್ರೆ ಧ್ರುವಂತ್ ಸೇವ್ ಆಗುವ ಸಾಧ್ಯತೆಗಳಿರುತ್ತಿತ್ತು. ಹಾಗಾಗಿ ಕಾವ್ಯಾ ವಿರುದ್ದ ಸಿಲ್ಲಿಯಾದ ಕಾರಣಗಳನ್ನು ನೀಡಿದೆ. ಇದು ನನ್ನ ಆಟದ ತಂತ್ರಗಾರಿಕೆ ಎಂದು ಧನುಷ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
56
ಧನುಷ್ ಮಾತಿನ ಬಗ್ಗೆ ಚರ್ಚೆ
ಧನುಷ್ ಮಾತುಗಳನ್ನು ಕೇಳಿಸಿಕೊಂಡ ಅಶ್ವಿನಿ ಗೌಡ ಈ ಬಗ್ಗೆ ಧ್ರುವಂತ್ ಜೊತೆ ಚರ್ಚೆ ನಡೆಸುತ್ತಾರೆ. ಧನುಷ್ ಲೆಕ್ಕಾಚಾರ ಹೇಗೆಲ್ಲಾ ಇದೆ ಎಂದು ಇಬ್ಬರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಹಾಗೆಯೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಿಲ್ಲಿಯ ಅಸಲಿ ಮುಖ ಬಹಿರಂಗವಾಗಿದೆ. ರಕ್ಷಿತಾ ಮೂರು ಬಾರಿ ಕಾವ್ಯಾರನ್ನು ನಾಮಿನೇಷನ್ ಹಂತಕ್ಕೆ ತಂದು ನಿಲ್ಲಿಸಿದ್ರೂ ಗಿಲ್ಲಿ ಉಳಿಸಿಕೊಂಡಿದ್ದಾರೆ.
ಗಿಲ್ಲಿ ನಟ, ಕಾವ್ಯಾ ಶೈವ, ಸ್ಪಂದನಾ ಸೋಮಣ್ಣ ಮತ್ತು ಧನುಷ್ ನಾಲ್ಕು ಜನರದ್ದು ಒಂದು ಗುಂಪು ಆಗಿದ್ದು, ಆಟದಲ್ಲಿ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿದ್ದಾರೆ. ರಕ್ಷಿತಾ ಹೆಚ್ಚು ರಘು ಜೊತೆಯಲ್ಲಿರುತ್ತಾರೆ. ತಾವಿಬ್ಬರೇ ಇಂಡಿಪೆಂಡೆಂಟ್ ಅಗಿ ಆಡುತ್ತಿರೋರು ಎಂದು ಅಶ್ವಿನಿ ಗೌಡ ಮತ್ತು ಧ್ರುವಂತ್ ಮಾತನಾಡಿಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.