Bigg Boss Kannada two finales twist: ಈ ಅನಿರೀಕ್ಷಿತ ಟ್ವಿಸ್ಟ್‌ನಿಂದ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದು, ಯಾವಾಗ ಯಾರು ಎಲಿಮಿನೇಟ್ ಆಗುತ್ತಾರೆಂಬ ಭಯದಲ್ಲಿದ್ದಾರೆ. ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ನಲ್ಲಿರುವ ಸಾಧ್ಯತೆಯೂ ಇದೆ.
ಈ ಬಾರಿಯ ಬಿಗ್‌ಬಾಸ್‌ನಲ್ಲಿ ಎರಡು ಫಿನಾಲೆಗಳಿರಲಿದ್ದು, ಮೂರನೇ ವಾರಕ್ಕೆ ಯಾರು ಅಂತಿಮ ಹಂತಕ್ಕೆ ಬರುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಮೂರನೇ ವಾರಕ್ಕೂ ಮುಂಚೆ ಅಥವಾ ಆವತ್ತೆ ಬಿಗ್ ಎಲಿಮಿನೇಷನ್ ನಡೆಯೋದು ಖಚಿತವಾಗಿದೆ. ಈ ವಿಷಯ ಕೇಳಿ ಅಭ್ಯರ್ಥಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
25
ಸೀಕ್ರೆಟ್ ರೂಮ್
ಮೊದಲ ದಿನವೇ ಎಲಿಮೇಷನ್ ನಡೆದ ಕಾರಣ, ತುಳು ನಾಡಿನ ರಕ್ಷಿತಾ ಶೆಟ್ಟಿ ಮನೆಯಿಂದ ಹೊರಗೆ ಬಂದಿದ್ದಾರೆ. ಆದ್ರೆ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿರಬಹುದು ಎಂಬ ಗುಮಾನಿಯೂ ಇದೆ. ಮೊದಲ ದಿನ ಎಲಿಮಿನೇಷನ್ ಮಾಡಿದ್ದು ತಪ್ಪು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
35
100 ದಿನ
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿರುವ ಎಲ್ಲಾ ಸ್ಪರ್ಧಿಗಳು, ಬಿಗ್‌ಬಾಸ್ ಮಾತುಗಳನ್ನು ಕೇಳಿ ಶಾಕ್ ಆಗಿದ್ದಾರೆ. ಈ ಸೀಸನ್ ಯಾರು ಗೆಲ್ತಾರೆ ಅಂತ ನೋಡಲು 100 ದಿನಗಳು ಕಾಯಬೇಕಿಲ್ಲ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್‌ಬಾಸ್ ಶಾಕಿಂಗ್ ನ್ಯೂಸ್ ಹೇಳಿದ್ದಾರೆ.
ನಿಮ್ಮಲ್ಲಿ ಯಾರು? ಯಾವಾಗ? ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು ಅಥವಾ ಗುಂಪು ಗುಂಪಾಗಿ ಹೋಗಬಹುದು. ಎಲಿಮೇಷನ್ ಭಯದಿಂದ ಮುಕ್ತರಾಗಬೇಕಾದ್ರೆ ಸ್ಪರ್ಧಿಗಳಿರೋದು ಒಂದೇ ದಾರಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಆದ್ರೆ ಸೇಫ್ ಆಗುವ ಆ ದಾರಿ ಯಾವುದು ಎಂಬುದನ್ನು ಪ್ರೋಮೋದಲ್ಲಿ ಬಹಿರಂಗಪಡಿಸಿಲ್ಲ.
ಇಂದಿನ ಸಂಚಿಕೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡುವ ಸಾಧ್ಯತೆಗಳಿವೆ. ಬಹುಶಃ ಈ ಟಾಸ್ಟ್ ಜಂಟಿಗಳು ಮತ್ತು ಒಂಟಿಗಳ ನಡುವೆ ನಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಆದ್ರೆ ಈ ಬಾರಿಯ ಬಿಗ್‌ಬಾಸ್ ಎಲ್ಲಾ ಊಹೆಗಳಿಗೂ ಮೀರಿದ್ದು ಆಗಿರಲಿದೆ ಎಂದು ಆರಂಭದಲ್ಲಿಯೇ ಸುದೀಪ್ ಹೇಳಿದ್ದರು.