Bigg Boss Kannada Season 12: ಇಂಗ್ಲಿಷ್ ಗೊತ್ತಿಲ್ಲ, ಬಿಗ್ ಬಾಸ್ ಟಾಸ್ಕ್, ಎಲಿಮಿನೇಶನ್ ಗೊತ್ತಿಲ್ಲ, ಮಲ್ಲಮ್ಮ ತುಂಬ ಮುಗ್ಧೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರು ತುಂಬ ಸ್ಮಾರ್ಟ್ ಎಂದು ಅಶ್ವಿನಿ, ಅಭಿಷೇಕ್ ಶ್ರೀಕಾಂತ್ ಮಾತನಾಡಿಕೊಂಡಿದ್ದಾರೆ. ಇದಕ್ಕೂ ಕಾರಣವಿದೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಲ್ಲಮ್ಮ ಕೂಡ ಸ್ಪರ್ಧಿ. 58 ವರ್ಷದ ಮಲ್ಲಮ್ಮ ಅವರು ಉತ್ತರ ಕರ್ನಾಟಕದವರು. ಬಡತನದಲ್ಲಿ ಬೆಳೆದಿದ್ದ ಮಲ್ಮಮ್ಮ ಕಳೆದ ಹತ್ತು ವರ್ಷಗಳಿಂದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರ ಮುಗ್ಧ ಮಾತುಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅದೀಗ ವೈರಲ್ ಆಗಿ, ಅವರು ಕೂಡ ಫೇಮಸ್ ಆಗಿದ್ದಾರೆ.
26
ಮಲ್ಲಮ್ಮ, ತಿಂಡಿ ಕೊಡೋ ಹಾಗಿಲ್ಲ
ಬಿಗ್ ಬಾಸ್ ಮನೆಯಲ್ಲಿ ಇರಬೇಕು ಅಂದರೆ ಜಗಳ ಆಡಬೇಕು ಅಂತ ಮಲ್ಲಮ್ಮ ಅಂದುಕೊಂಡಿದ್ದಾರೆ. ಈ ಮಾತು ಕಿಚ್ಚ ಸುದೀಪ್‌ಗೂ ನಗು ತರಿಸಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮಳಿಗೆ ಹಾಗೂ ಗಿಲ್ಲಿ ನಟ ಅವರಿಗೆ ಬೇರೆ ಬೇರೆ ರೀತಿಯ ಬೆಳಗಿನ ತಿಂಡಿ ಬಂದಿತ್ತು. ಮಲ್ಲಮ್ಮ ಅವರು ತಿಂಡಿಯನ್ನು ಗಿಲ್ಲಿಗೆ ಕೊಡೋ ಹಾಗಿರಲಿಲ್ಲ.
36
ಗಿಲ್ಲಿಗೆ ತಿರುಗೇಟು ಕೊಟ್ಟ ಮಲ್ಲಮ್ಮ
“ಮಲ್ಲಮ್ಮ, ನಮಗೆ ತಿಂಡಿ ಕೊಡಿ” ಎಂದು ಗಿಲ್ಲಿ ಕೇಳಿದ್ದಾರೆ. ಆಗ “ಮಲ್ಲಮ್ಮ, ಕೊಡೋದಿಲ್ಲ, ತಿಂಡಿ ಸೂಪರ್ ಆಗಿದೆ, ಹೊರಗಡೆ ಹೋದ್ಮೇಲೆ ಕೊಡಸ್ತೀನಿ” ಎಂದಿದ್ದಾರೆ. ಆಗ ಗಿಲ್ಲಿ, “ಫ್ರೀ ಆಗಿ ಸಿಗೋದನ್ನು ನೀನು ಕೊಡ್ತಿಲ್ಲ. ಇನ್ನು ಹೊರಗಡೆ ಕೊಡಸ್ತೀಯಾ?” ಎಂದು ಹೇಳಿದ್ದಾರೆ. ಮಲ್ಲಮ್ಮ ಅವರ ಬುದ್ಧಿವಂತಿಕೆಯ ಉತ್ತರ ಎಲ್ಲರ ಮನಸ್ಸು ಗೆದ್ದಿದೆ, ಅಷ್ಟೇ ಅಲ್ಲದೆ ಸೂಪರ್ ಅಂತ ಹೇಳಿ ಗಿಲ್ಲಿ ಹೊಟ್ಟೆ ಉರಿಸಿದ್ದಾರೆ.
ಅಭಿಷೇಕ ಶ್ರೀಕಾಂತ್ ಹಾಗೂ ಅಶ್ವಿನಿ ಅವರು ಸ್ಪರ್ಧಿಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ. ಆಗ ಅಶ್ವಿನಿ, “ಇಲ್ಲಿ ಯಾರೂ ಮುಗ್ಧರಲ್ಲ, ಎಲ್ಲರೂ ಬುದ್ಧಿವಂತರೇ. ಮಾಳು ಕೂಡ ಸಖತ್ ಸ್ಮಾರ್ಟ್. ಮಲ್ಲಮ್ಮ ಕೂಡ ಹೌದು” ಎಂದು ಹೇಳಿದ್ದಾರೆ. ಆಗ ಅಭಿಷೇಕ್, “ಮಲ್ಲಮ್ಮ ಮುಗ್ಧೆ ಕೂಡ ಹೌದು, ಬುದ್ಧಿವಂತರೂ ಹೌದು. ಗಿಲ್ಲಿ ಹಾಗೂ ಕಾವ್ಯ ಕಾಮಿಡಿ ವರ್ಕ್ ಆಗತ್ತಾ ನೋಡಬೇಕು. ಕಾವ್ಯ ಕೆಲಸ ಮಾಡಿ ಸುಸ್ತಾಗಿದ್ದಾಳೆ” ಎಂದು ಹೇಳಿದ್ದಾರೆ.
56
ಆಟದಲ್ಲಿ ಸೋತರು, ಹೀಲ್ಸ್‌ನಲ್ಲಿ ಗೆದ್ದರು
ಆಟವೊಂದರಲ್ಲಿ ಮಲ್ಲಮ್ಮ ಅವರು ಸೋತಿದ್ದು, ಮನೆಯವರಿಗೆ ದಿನಸಿ ಇಲ್ಲದಂತೆ ಮಾಡಿದ್ದಾರೆ. ಇನ್ನು ಹೈ ಹೀಲ್ಸ್ ಹಾಕಿ ನಡೆದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
66
ಮುಂದೆ ಆಟ ಹೇಗೆ?
ಬಿಗ್ ಬಾಸ್ ಆಟ ಶುರುವಾಗಿ ಒಂದು ದಿನ ಕಳೆದಿದೆ. ಯಾರು ಹೇಗೆ? ಎಷ್ಟು ದಿನ ಇರಬಲ್ಲರು? ಯಾರ ವ್ಯಕ್ತಿತ್ವ ಹೇಗೆ ಎನ್ನೋದು ಇನ್ನೂ ರಿವೀಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳು ರಿವೀಲ್ ಆಗಬಹುದು.