ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಟದ ವೈಖರಿ ಬದಲಿಸಿಕೊಂಡ ರಕ್ಷಿತಾ ಶೆಟ್ಟಿ, ನಿರೂಪಕ ಸುದೀಪ್ ಅವರಿಂದ 'ಕಿಚ್ಚನ ಚಪ್ಪಾಳೆ' ಪಡೆದಿದ್ದಾರೆ. ಇದರ ಜೊತೆಗೆ ರಕ್ಷಿತಾ ಶೆಟ್ಟಿ ಅವರಿಗೆ ವಿಶೇಷ ಜವಾಬ್ದಾರಿಯನ್ನೂ ಸುದೀಪ್ ನೀಡಿದ್ದಾರೆ.
ಈ ವಾರ ತಮ್ಮ ಆಟದ ಶೈಲಿ ಬದಲಿಸಿಕೊಂಡು ಹಳೆ ಲಯಕ್ಕೆ ಮರಳಿರುವ ರಕ್ಷಿತಾ ಶೆಟ್ಟಿಯವರು ಬಿಗ್‌ಬಾಸ್ ನಿರೂಪಕ ಸುದೀಪ್ ನೀಡುವ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ. ಸುದೀಪ್ ಅವರು ವೈಯಕ್ತಿಕವಾಗಿ ಸ್ಪರ್ದಿಯ ಆಟವನ್ನು ಮೆಚ್ಚಿ ಚಪ್ಪಾಳೆ ನೀಡುತ್ತಾರೆ. ಚಪ್ಪಾಳೆ ಪಡೆದುಕೊಂಡ ರಕ್ಷಿತಾ ಅವರಿಗೆ ಸುದೀಪ್ ಮಹತ್ವದ ಜವಾಬ್ದಾರಿಯೊಂದನ್ನು ನೀಡಿದ್ದಾರೆ.
25
ಆಟ ಬದಲಿಸಿಕೊಂಡ ರಕ್ಷಿತಾ ಶೆಟ್ಟಿ
ಕಳೆದ ಎರಡು ವಾರಗಳಿಂದ ಸ್ಪರ್ಧಿ ಗಿಲ್ಲಿ ನಟ ಆಟದ ಗುಣಮಟ್ಟ ಕುಸಿಯುತ್ತಿದೆ. ಈ ಹಿಂದಿನ ಸಂಚಿಕೆಗಳಲ್ಲಿ ಒಂದು ತಂಡದ ನಾಯಕನಾಗಿ ಗಿಲ್ಲಿ ನಟ ಹಲವು ತಪ್ಪುಗಳನ್ನು ಮಾಡಿಕೊಂಡಿದ್ದರು. ಏಳನೇ ವಾರದಲ್ಲಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಹಲವು ತಪ್ಪುಗಳನ್ನು ಮಾಡಿದ್ದರು. ಸುದೀಪ್ ಸಲಹೆಯಂತೆ ರಕ್ಷಿತಾ ಬದಲಾಗಿದ್ದರು. ಆದ್ರೆ ಗಿಲ್ಲಿ ನಟ ಹಳೇ ದಾರಿಯಲ್ಲಿಯೇ ಸಾಗಿದ್ದರು.
35
ಸಿಕ್ತು ವಿಶೇಷ ಜವಾಬ್ದಾರಿ
ಕಿಚ್ಚನ ಚಪ್ಪಾಳೆ ನೀಡಿದ ನಂತರ ವಂಶದ ಕುಡಿಯಿಂದ ಕಲಿಯೋದು ಇದೆ ಅಲ್ಲವಾ ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ. ಹೌದು ಅಣ್ಣಾ, ಈ ವಾರ ಕಳಪೆ ಕೊಟ್ಟಾಗಲೇ ಕಲಿಯೋದು ಇದೆ ಅಂತಾ ಗೊತ್ತಾಯ್ತು ಎಂದು ಗಿಲ್ಲಿ ನಟ ಹೇಳುತ್ತಾರೆ. ಗಿಲ್ಲಿ ನಟ ಈ ಮಾತು ಹೇಳುತ್ತಿದ್ದಂತೆ ರಕ್ಷಿತಾ ಶೆಟ್ಟಿ ಅವರಿಗೆ ಸುದೀಪ್ ವಿಶೇಷ ಜವಾಬ್ದಾರಿಯನ್ನು ನೀಡುತ್ತಾರೆ.
ಮುಂದಿನ ಆದೇಶದವರೆಗೂ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಅವರಿಗೆ 10 ನಿಮಿಷ ಕ್ಲಾಸ್ ತೆಗೆದುಕೊಳ್ಳಬೇಕು. ಪ್ರತಿದಿನ 10 ನಿಮಿಷ ನೀವು ರಕ್ಷಿತಾ ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಈ ಹಿಂದೆ ಮಲ್ಲಮ್ಮ ಅವರು ತೆಗೆದುಕೊಳ್ಳುವ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ರಕ್ಷಿತಾಗೆ ಸುದೀಪ್ ಆದೇಶ ನೀಡುತ್ತಾರೆ. ಈ 10 ನಿಮಿಷ ಕಾವ್ಯಾ ಅವರಿಗೆ ಫುಲ್ ಫ್ರೀಡಂ ಎಂದು ಸುದೀಪ್ ತಮಾಷೆ ಮಾಡುತ್ತಾರೆ.
ಶನಿವಾರದ ಸಂಚಿಕೆಯಲ್ಲಿ ಸುದೀಪ್ ಹಲವು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಅಶ್ವಿನಿ ಗೌಡ-ರಘು ಜಗಳ, ಅಶ್ವಿನಿ ಗೌಡ-ಜಾನ್ವಿ ಪಿಸುಮಾತು, ಗಿಲ್ಲಿ ನಟ ಉಸ್ತುವಾರಿ, ರಘು ನಾಯಕತ್ವ ಹೀಗೆ ಸಣ್ಣ ಸಣ್ಣ ವಿಷಯಗಳನ್ನು ಪ್ರಸ್ತಾಪಿಸಿ ಸ್ಪರ್ಧಿಗಳ ಕಣ್ಣು ತೆರೆಸುವ ಕೆಲಸವನ್ನು ಸುದೀಪ್ ಮಾಡಿದರು.