ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಘು ಅವರು ನನಗೆ ಅಶ್ವಿನಿ ಅವರೇ ಎಂದು ಕರೆಯಬೇಕು, ನನಗೆ ಗೌರವ ಕೊಟ್ಟು ಮಾತನಾಡಬೇಕು, ಹೆಣ್ಣು ಮಕ್ಕಳಿಗೆ ನೀನು, ಹೋಗು ಅಂತ ಮಾತಾಡ್ತಾರೆ. ಇದು ತಪ್ಪು ಎಂದು ಅಶ್ವಿನಿ ಗೌಡ, ಜಗಳ ಮಾಡಿ, ಉಪವಾಸ ಸತ್ಯಾಗ್ರಹ ಮಾಡಿದ್ದರು. ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
“ಹುಡುಗರ ತಪ್ಪಿದ್ದರೆ ಹೇಳಿ, ಇಲ್ಲ ಅಂದರೆ ಹಾಗೆ ಪದೇ ಪದೇ ಮಾತನಾಡಬೇಡಿ. ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಆಗದಷ್ಟು ವೀಕ್. ನೀವು ಮೊದಲು ಹೋಗಿ ಬನ್ನಿ ಅಂತ ಕರೆಯಿರಿ, ಆಗ ಬೇರೆಯವರು ಗೌರವ ಕೊಡ್ತಾರೆ. ಅಥವಾ ನಿಮಗೆ ಹೋಗು, ಬಾ ಅಂದರೆ ನೀವು ಹಾಗೆ ಹೋಗು ಬಾ ಅಂತ ಕರೆಯಿರಿ. ಏನೂ ತಪ್ಪಿಲ್ಲ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
27
ಮಾತಾಡಿದರೆ ಕೈ ತೋರಿಸೋಕೆ ಹೋಗ್ತೀರಿ
“ಮಾತಾಡಿದರೆ ಕೈ ತೋರಿಸೋಕೆ ಹೋಗ್ತೀರಿ, ಆಮೇಲೆ ತೊಂದರೆ ಆಗೋದಿಲ್ಲವಾ? ಟ್ರಿಗರ್ ಆಗತ್ತೆ. ನನ್ನ ಗೌರವವನ್ನು ಕಾಪಾಡಿಕೊಳ್ಳಬೇಕು ಅಂದರೆ ನಾವು ನೆಟ್ಟಗಿರಬೇಕು. ಬೇರೆಯವರು ಬೊಗಳಿದರೆ, ನಾನು ಕನ್ನಡವನ್ನೇ ಮಾತನಾಡಬೇಕು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
37
ಆಡಿಯೋದಲ್ಲಿ ಏನಿದೆ?
“ಕಾರ್ಟೂನ್, ಅಮಾವಾಸ್ಯೆ, ಪ್ಯಾಕೇಜ್ ಜೊತೆ ಫ್ರೀ ಆಗಿ ಪ್ರೊಡಕ್ಟ್ ಬರುತ್ತದಲ್ಲ ಅದು, ಕೋತಿ ಥರ ಆಡ್ತಿದೀಯಲ್ಲ, ಬ್ಲಡಿ ಲೇಸರ್, ಟಾಪ್ ಟು ಬಾಟಮ್ ಗಾಂಚಾಲಿ, ಯಾರೋ ನೀನು ಯಾವಲೋ, ಬ್ಲಡಿ ಫೆಲೋ, ನಿನ್ನ ಯೋಗ್ಯತೆಗಿಷ್ಟು” ಎಂಬ ಮಾತುಗಳನ್ನು ಹೇಳಿರೋ ಆಡಿಯೋ ಇದಾಗಿತ್ತು.
ಇನ್ನು ಕೆಲ ಮಾತುಗಳನ್ನು ಈ ವೇದಿಕೆಯಲ್ಲಿ ಹಾಕೋಕೆ ಇಷ್ಟ ಇಲ್ಲ, ಪರ್ಸನಲ್ ಆಗಿ ತೆಗೆದಿದ್ದೇವೆ. “ನಾನು ಯಾವುದನ್ನು ಸಮರ್ಥನೆ ಮಾಡಿಕೊಳ್ತಿಲ್ಲ. ವಾದ ಮಾಡಿದಾಗ ನಮ್ಮ ಬಾಯಿಂದ ಮಾತುಗಳಿಗೆ ನಾವೇ ಜವಾಬ್ದಾರರು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
57
ತಪ್ಪು ಮಾಡಿದಾಗ ಒಪ್ಪಿಕೊಂಡಿದೀನಿ
“ನಾನು ಮಾತನಾಡಿದ್ದೇನೆ, ಮಾತನಾಡಿಲ್ಲ ಎಂದು ಹೇಳಲ್ಲ. ಪ್ರೌಢಿಮೆಗೆ ಕೆಳಮಟ್ಟಕ್ಕೆ ಇಳಿಯೋಕೆ ಇಷ್ಟಪಡಲ್ಲ. ಹಿಂದೆ ಆಗಿದ್ದು ಕೆಲವೊಂದು ಮರೆತು ಹೋಗಿದೆ. ಆದರೆ ನಾನು ತಪ್ಪು ತಿದ್ದಿಕೊಳ್ಳುತ್ತ ಮುಂದೆ ಹೋಗ್ತಿದೀನಿ, ಈ ಮನೆಯಲ್ಲಿ ನನ್ನ ಸ್ಟ್ಯಾಂಡ್ ನಾನೇ ತಗೋಬೇಕು. ಈ ಸೀಟ್‌ನಲ್ಲಿ ಕೂತಿದೀನಿ ಅಂದರೆ ಹಿಂದಿನದನ್ನು ತಿದ್ದಿಕೊಂಡು ಬರಬೇಕು. ನನ್ನ ತಪ್ಪು ಮಾಡಿದಾಗ ಒಪ್ಪಿಕೊಂಡಿದೀನಿ, ಈ ಶೋನಲ್ಲಿ ಮುಂದುವರೆಯಬೇಕು ಎಂದಾಗ ಅದೇ ಅದೇ ಅಂದಾಗ ನನಗೂ ಕಷ್ಟ ಆಗುತ್ತದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
67
ವೀಕೆಂಡ್‌ನಲ್ಲಿ ನರಕ ಆಗುವುದು
“ಸ್ಟ್ಯಾಂಡ್ ತಗೋಬೇಕು ಅಂತೀರಿ. ಈ ಮನೆಯಲ್ಲಿ ಅವರ ಸ್ಟ್ಯಾಂಡ್ ಅವರೇ ತಗೋಬೇಕು. ನಿಮ್ಮ ಜೊತೆಯೇ ಸಮಸ್ಯೆ ಎಂದರೆ ನೀವು ಅವರನ್ನು ಟ್ರಿಗರ್ ಮಾಡ್ತಿದೀರಿ ಎಂದರ್ಥ. ನೀವು ದೊಡ್ಡವರು, ನೀವು ಕ್ಷಮಿಸಿ ಸುಮ್ಮನಾಗಿ. ರಕ್ಷಿತಾ, ಗಿಲ್ಲಿ ಕರೆಕ್ಟ್ ಇದ್ದಾಗ, ಕರೆಕ್ಟ್ ಎಂದು ಹೇಳಿದ್ದೀವಿ, ತಪ್ಪಾಗಿದ್ದಾಗ ತಪ್ಪು ಎಂದು ಹೇಳಿದ್ದೀವಿ. ಎರಡೂ ಕಥೆಯನ್ನು ನೋಡುವ ದೃಷ್ಟಿಕೋನ ಇದ್ದಾಗ ಮಾತ್ರ ಚರ್ಚೆಗೆ ಇಳಿಯಬೇಕು, ಇಲ್ಲ ಅಂದ್ರೆ ವೀಕೆಂಡ್‌ನಲ್ಲಿ ನರಕ ಆಗುವುದು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದಿದ್ದರೆ ಉದಾಹರಣೆ ಸೆಟ್ ಮಾಡುತ್ತಿದ್ರಿ. ಹೆಣ್ಣು ಮಕ್ಕಳಿಗೆ ಬೇಕು ಅಂದರೆ ಅವರ ಪರವಾಗಿ ನಿಲ್ಲಬಹುದಿತ್ತು. ಗೆದ್ದಿದ್ದು ಗಿಲ್ಲಿ ಕಾವ್ಯ ಅಂತ ಜನರಿಗೆ ಕಾಣಿಸಿದೆ. ಗೇಮ್ ಅರ್ಥ ಮಾಡಿಕೊಳ್ಳಿ, ಆಮೇಲೆ ಮಾತಾಡಿ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
77
ಜಗಳದಲ್ಲಿ ನಿಮ್ಮ ಕೊಡುಗೆ ದೊಡ್ಡದಿದೆ
“ಲಾಸ್ಟ್ ಸೀಸನ್‌ನಲ್ಲಿ ಸೋಪ್ ನೀರು ಹಾಕಿದರು. ಆದರೆ ಅದು ಅವರ ಪರ್ಸನಾಲಿಟಿ ಅಲ್ಲ. ಲಿಮಿಟ್ ಮೀರಿದರೆ ಬಿಗ್ ಬಾಸ್ ಬಂದೇ ಬರುತ್ತಾರೆ. ಟಾಸ್ಕ್ ಒಂದೇ ಅಲ್ಲ, ಗೇಮ್‌ನ್ನು ತಪ್ಪಾಗಿ ಅರ್ಥಾಗಿ ಮಾಡಿಕೊಂಡಿದ್ದೀರಿ. ಅಲ್ಲಿ ನಿಮಗೆ ಯಾರೂ ಬಂದು ಹೆಣ್ಣು ಮಕ್ಕಳ ಜವಾಬ್ದಾರಿ ತಗೋಳಿ ಎಂದು ಹೇಳಿಲ್ಲ. ನೀವು ಕೊಡೋ ಮರ್ಯಾದೆಗೆ ಮರ್ಯಾದೆಯೇ ಬರುತ್ತದೆ. ಇಷ್ಟುದಿನ ಆಗಿರುವ ಜಗಳದಲ್ಲಿ ನಿಮ್ಮ ಕೊಡುಗೆ ದೊಡ್ಡದಿದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.