Vasuki Vaibhav Wife:‌ ತಾಯಿ ಆಗ್ತಿರೋ ಜೀವದ ಗೆಳತಿಗೆ ವಿಶೇಷವಾಗಿ ವಿಶ್‌ ಮಾಡಿದ ಬಿಗ್‌ ಬಾಸ್ ವಾಸುಕಿ ವೈಭವ್

Published : Aug 03, 2025, 01:23 PM IST

ಗಾಯಕ, ಸಂಗೀತ ಸಂಯೋಜಕ, ನಟ, 'ಬಿಗ್‌ ಬಾಸ್‌ ಕನ್ನಡ ಸೀಸನ್‌ 7' ಸ್ಪರ್ಧಿ ವಾಸುಕಿ ವೈಭವ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ನೇಹಿತರ ದಿನದಂದು ಅವರ ಪತ್ನಿ ಬೃಂದಾ ವಿಕ್ರಮ್‌ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. 

PREV
15

ಮಗುವಿಗೆ ಜನ್ಮ ಕೊಡಲು ರೆಡಿಯಾಗಿರೋ ಪತ್ನಿಗೆ ಅವರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ವಾಸುಕಿ ಹಾಗೂ ಬೃಂದಾ ಸ್ನೇಹಿತರಾಗಿದ್ದವರು. ಇಂದು ಅವರ ಜನ್ಮದಿನವೂ ಆಗಿರೋದು, ಮಗುವಿನ ನಿರೀಕ್ಷೆಯಲ್ಲಿರೋದು ಈ ಜೋಡಿಯ ಖುಷಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.

25

ರಂಗಭೂಮಿಯ ಸಮಯದಿಂದಲೂ ವಾಸುಕಿ ವೈಭವ್‌ ಸೋಲು ಗೆಲುವಿನಲ್ಲಿ ಬೃಂದಾ ಪಾಲಿತ್ತು. ಅನೇಕ ವರ್ಷಗಳಿಂದ ಫ್ರೆಂಡ್ಸ್‌ ಆಗಿದ್ದ ಈ ಜೋಡಿ ಮದುವೆಯಾಗಿದೆ.

35

ಈ ಹಿಂದೆ ತಾಯಂದಿರ ದಿನದಂದು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದ ವಾಸುಕಿ ವೈಭವ್‌ ಅವರು ಮಗುವಿನ ನಿರೀಕ್ಷೆಯಲ್ಲಿರೋ ವಿಚಾರ ಶೇರ್‌ ಮಾಡಿದ್ದರು. “ಎಲ್ಲ ಸುಂದರ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು. ತಾಯಂದಿರು ಇಲ್ಲದೆ ಈ ಜಗತ್ತು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಈ ಮದರ್ಸ್‌ ಡೇ ನನಗೆ ತುಂಬ ವಿಶೇಷವಾಗಿದೆ. ನಿಮ್ಮೆಲ್ಲರಿಗೂ ಹೊಸದಾಗಿ ತಾಯಿ ಆಗುತ್ತಿರುವವರನ್ನು ಪರಿಚಯಿಸುತ್ತಿದ್ದೇನೆ” ಎಂದು ವಾಸುಕಿ ವೈಭವ್‌ ಹೇಳಿದ್ದರು.

45

ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸುವ ಮುನ್ನ ವಾಸುಕಿ ವೈಭವ್‌ ಅವರು ʼರಾಮಾ ರಾಮ ರೇʼ, ʼಬಡವ ರಾಸ್ಕಲ್‌ʼ, ʼಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡುʼ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ʼಟಗರು ಪಲ್ಯʼ ಸಿನಿಮಾಕ್ಕೆ ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದರು.

55

ವೃತ್ತಿಯಲ್ಲಿ ಬೃಂದಾ ವಿಕ್ರಮ್ ಟೀಚರ್‌. ಹಾಡು ಹಾಡುತ್ತಾರೆ, ಡ್ಯಾನ್ಸ್‌ ಮಾಡುತ್ತಾರೆ, ನಟನೆಯೂ ಇದೆ, ಒಟ್ಟಿನಲ್ಲಿ ಬಹುಮುಖ ಪ್ರತಿಭೆ, 2023ರ ನವೆಂಬರ್‌ನಲ್ಲಿ ಈ ಜೋಡಿ ಬೆಂಗಳೂರಿನಲ್ಲಿ ಮದುವೆಯಾಗಿದೆ.

Read more Photos on
click me!

Recommended Stories