ಕಲರ್ಸ್ ಕನ್ನಡದ ಬಿಗ್‌ಬಾಸ್ ಮನೆಗೆ 'ಭಾಗ್ಯಲಕ್ಷ್ಮೀ' ಖ್ಯಾತಿಯ ತಾಂಡವ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಮತ್ತು ರೀಲ್ ಪತ್ನಿ ಶ್ರೇಷ್ಠಾ (ಕಾವ್ಯಾ ಗೌಡ) ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಸುದರ್ಶನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯನ್ನು ಆನ್ ಮಾಡ್ಕೊಂಡು ಇಡೀ ಕರುನಾಡು ಕುಳಿತಿದೆ. ವಾಹಿನಿಯು ಸೋಶಿಯಲ್ ಮೀಡಿಯಾ ಮೂಲಕ ಸ್ಪರ್ಧಿಗಳ ಮಾಹಿತಿಯನ್ನು ಬಿಟ್ಟು ಕೊಡುತ್ತಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಖ್ಯಾತಿಯ ಸುದರ್ಶನ್ ಪತ್ನಿ ಸಂಗೀತಾ ಭಟ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪತ್ನಿ ಸಂಗೀತಾ ಅವರನ್ನು ಕಳುಹಿಸಲು ಸ್ವತಃ ಸುದರ್ಶನ್ ಆಗಮಿಸಿದ್ದಾರೆ.
25
ಭಾಗ್ಯಲಕ್ಷ್ಮೀಯ ಶ್ರೇಷ್ಠಾ
ಆರನೇ ಸ್ಪರ್ಧಿಯಾಗಿ ಸಂಗೀತಾ ಭಟ್ ಬಂದ್ರೆ, ಏಳನೇ ಸ್ಪರ್ಧಿಯಾಗಿ ಕಾವ್ಯಾ ಗೌಡ (ಶ್ರೇಷ್ಠಾ) ಬಂದಿದ್ದಾರೆ. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಾಂಡವ್ ಅವರನ್ನು ನೋಡಿದ ಶ್ರೇಷ್ಠಾ ಶಾಕ್ ಆಗಿದ್ದಾರೆ. ತಮಗಿಂತ ಮೊದಲು ಸಂಗೀತಾ ಭಟ್ ಒಳಗೆ ಹೋಗಿರುವ ವಿಷಯ ತಿಳಿದು ಶ್ರೇಷ್ಠಾ ಅಚ್ಚರಿಗೊಂಡಿದ್ದಾರೆ.
35
ರೀಲ್ ಪತ್ನಿಗೆ ಟಿಪ್ಸ್ ಕೊಟ್ಟ ತಾಂಡವ್
ಇನ್ನು ರೀಲ್ ಮತ್ತು ರಿಯಲ್ ವೈಫ್ ಇಬ್ಬರು ಬಿಗ್‌ಬಾಸ್ ಮನೆಯೊಳಗೆ ಕಿತ್ತಾಡಿದ್ರೆ ನಾನೆಲ್ಲಿಗೆ ಹೋಗಲಿ ಸರ್ ಎಂದು ಹೇಳಿ ಸುದರ್ಶನ್ ತಮಾಷೆ ಮಾಡಿದ್ದಾರೆ. ವೇದಿಕೆ ಮೇಲೆ ಆಗಮಿಸಿದ ಸುದರ್ಶನ್, ಪತ್ನಿ ಸಂಗೀತಾ ಜೊತೆಯಲ್ಲಿ ಹುಷಾರ್ ಆಗಿರುವಂತೆ ಸಲಹೆ ನೀಡಿದ್ದಾರೆ.
ಮತ್ತೊಂದೆಡೆ ಸಂಗೀತಾ ಭಟ್ ಆಗಮನ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಭಾಗ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ/ಆಂಕರ್ ಸುಷ್ಮಾ ರಾವ್ ಸ್ಪರ್ಧಿಯಾಗಿ ಬಂದ್ರೆ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸುಷ್ಮಾ ಅವರ ವೈಲ್ಡ್ ಕಾರ್ಡ್ ಸ್ಪರ್ಧಿ ಅಥವಾ ಅತಿಥಿಯಾಗಿ ಬಂದ್ರೂ ಪರವಾಗಿಲ್ಲ. ಒಟ್ಟಿನಲ್ಲಿ ಮೂವರು ಒಂದೆಡೆ ಸೇರಲಿ ಎಂದು ಆಸೆ ವ್ಯಕ್ತಪಡಿಸಿದ್ದಾರೆ.
55
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಸುಮಾರು ಮೂರು ವರ್ಷ ಪ್ರಸಾರವಾಗಿತ್ತು. ಈ ಸೀರಿಯಲ್ ಸಂಗೀತಾ ಭಟ್ ಪತಿ ಸುದರ್ಶನ್‌ಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಧಾರಾವಾಹಿಗಳಿಂದ ಹಿಂದೆ ಸರಿದಿದ್ದ ಸುಷ್ಮಾ ಅವರು ಸಹ ಭಾಗ್ಯಲಕ್ಷ್ಮೀ ಮೂಲಕ ಬಿಗ್ ಕಂಬ್ಯಾಕ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.