ಬಿಗ್‌ಬಾಸ್ ಸೀಸನ್ 13ರ ಮನೆಯಲ್ಲಿ ಗೊಂದಲದ ವಾತಾವರಣವಿದ್ದು, ಪ್ರೇಕ್ಷಕರ ಬೇಸರದ ಹಿನ್ನೆಲೆಯಲ್ಲಿ ರೋಚಕ ತಿರುವು ನೀಡಲು ಮುಂದಾಗಲಾಗಿದೆ. ಈ ವಾರ ಮಿಡ್‌ವೀಕ್ ಎಲಿಮಿನೇಷನ್ ಜೊತೆಗೆ ಮೂವರು ಸ್ಪರ್ಧಿಗಳು ಹೊರಹೋಗಲಿದ್ದು, ಹೊಸದಾಗಿ ಮೂವರು ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಈ ಬಾರಿಯ ಬಿಗ್‌ಬಾಸ್ ಮನೆಯ ಅನ್ನೋದು ಗೊಂದಲದ ಗೂಡು ಆಗಿದ್ದು, ಪ್ರೇಕ್ಷಕರಿಂದ ಬೇಸರದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಬಿಗ್‌ಬಾಸ್ ರೋಚಕ ತಿರುವುಗಳನ್ನು ನೀಡಲು ಮುಂದಾಗಿದ ಎಂದು ತಿಳಿದು ಬಂದಿದೆ. ಈ ಬಾರಿ ಮನೆಯಿಂದ ಹೊರಗಡೆ ಹೋಗಲು ಸಂಗೀತಾ ಅವರನ್ನು ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದಾರೆ.
25
ಮಿಡ್‌ವೀಕ್ ಎಲಿಮಿನೇಷನ್
ಈ ವಾರ ಮಿಡ್‌ವೀಕ್ ಎಲಿಮಿನೇಷನ್ ಇರೋದರಿಂದ ಸ್ಪರ್ಧಿಗಳೆಲ್ಲರೂ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಕಾಲು ಕರೆದುಕೊಂಡು ಜಗಳಕ್ಕೆ ಮುಂದಾಗುತ್ತಿದ್ರೆ, ಮತ್ತೊಂದಿಷ್ಟು ಸ್ಪರ್ಧಿಗಳು ಲವ್ ಬರ್ಡ್ಸ್ ಆಗಲು ಪ್ರಯತ್ನಿಸುತ್ತಿರೋದು ಕಂಡು ಬರುತ್ತಿದೆ. ಈ ನಡುವೆ ಸೀಸನ್ 13ರ ಸ್ಪರ್ಧಿಗಳ ಆಯ್ಕೆಯಲ್ಲಿ ಬಿಗ್‌ಬಾಸ್ ತಂಡ ಎಡವಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದೆ.
35
ಮೂರನೇ ವಾರಕ್ಕೆ ಮೂವರು
ಈ ಮಾತುಗಳ ಬೆನ್ನಲ್ಲೇ ಬಿಗ್‌ಬಾಸ್ ಸೀಸನ್ 13ರಲ್ಲಿ ಮೂರನೇ ವಾರಕ್ಕೆ ಮೂವರು ಸ್ಪರ್ಧಿಗಳನ್ನು ಹೊರಗಡೆ ಕಳುಹಿಸಲು ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹೊಸದಾಗಿ ಮೂವರು ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಿಡ್‌ವೀಕ್ ಎಲಿಮಿನೇಷ್‌ನಿಂದ ತಪ್ಪಿಸಿಕೊಳ್ಳುವ ಕೊನೆಯ ಟಾಸ್ಕ್‌ನಲ್ಲಿ ಧನುಷ್, ಕಿರಣ್, ಕಾವ್ಯಾ ಮತ್ತು ಆಸಿಯಾ ಇದ್ದಾರೆ.
ಮತ್ತೊಂದೆಡೆ ನಾಮಿನೇಷನ್‌ನಲ್ಲಿ ತಾಂಡವ್ ರಾಮ್, ಗಗನ್ ಚಿನ್ನಪ್ಪ, ಜಗದೀಶ್, ಸೌಂದರ್ಯಾ ಶೆಟ್ಟ, ಮಂಜ, ಯಶಸ್, ವೈಷ್ಣವಿ ಕೌಂಡಿನ್ಯ, ಲಿಖಿತ್ ಇದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಸೌಂದರ್ಯಾ ಶೆಟ್ಟಿ, ಆಸಿಯಾ, ಧನುಷ್ ಮೊದಲ ಹಂತದಲ್ಲಿ ಸೇವ್ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಮನೆಯಿಂದ ಹೊರಗೆ ಹೋಗುವ ಮೂವರು ಸ್ಪರ್ಧಿಗಳ್ಯಾರು? ಹಾಗೆಯೇ ಮನೆ ಪ್ರವೇಶಿಸುವ ಮೂವರು ಯಾರು? ಎಂಬುದರ ಬಗ್ಗೆ ಕುತೂಹಲ ಮೂಡಿದೆ.
55
ಎಮೆರ್ಜೆನ್ಸಿ ಎಕ್ಸಿಟ್
ಮೊದಲ ವಾರ ನಟಿ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಎರಡನೇ ವಾರದಲ್ಲಿ ಅನಾರೋಗ್ಯದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ಆಟದಿಂದ ಹೊರಗೆ ಬರಬೇಕಾಯ್ತು. ಹಾಗಾಗಿ ಎರಡನೇ ವಾರದಲ್ಲಿ ಯಾವುದೇ ನಾಮಿನೇಷನ್ ನಡೆದಿರಲಿಲ್ಲ. ಈ ಬಾರಿ ಮಧ್ಯದಲ್ಲಿ ಇಬ್ಬರು ಸ್ಪರ್ಧಿಗಳು ಎಮೆರ್ಜೆನ್ಸಿ ಎಕ್ಸಿಟ್ ಪಡೆದ್ರೆ, ಒಬ್ಬರು ಭಾನುವಾರ ಹೊರ ಬರೋ ಸಾಧ್ಯತೆಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.