Bigg Boss Kannada 13: ದೊಡ್ಮನೆಯಲ್ಲಿ ನೀರವ ಮೌನ- ಇವರ ಪಯಣ ಇಂದು ಕೊನೆ: ಸ್ಪರ್ಧಿಗಳ ಕಣ್ಣೀರು

Published : Sep 24, 2026, 12:06 PM IST

ಬಿಗ್‌ಬಾಸ್-13ರ ವಿಮಾನಯಾನ ಥೀಮ್ ಅಡಿಯಲ್ಲಿ 'ಎಮರ್ಜೆನ್ಸಿ ಎಕ್ಸಿಟ್' ಹೆಸರಿನಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತಿದೆ. ಇದರಿಂದ ಮನೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದ್ದು, ಜಗ್ಗಿ, ಗಗನ್ ಮತ್ತು ತಾಂಡವ್ ಕಣ್ಣೀರು ಹಾಕಿದ್ದಾರೆ. ಓರ್ವ ಸ್ಪರ್ಧಿ ಮನೆಯಿಂದ ಹೊರಹೋಗುವುದು ಖಚಿತವಾಗಿದೆ.

PREV
16
ಎಮರ್ಜೆನ್ಸಿ ಎಕ್ಸಿಟ್

ಬಿಗ್​ಬಾಸ್​-13 (Bigg boss 13) ಈ ಬಾರಿಯ ಕಾನ್ಸೆಪ್ಟ್​ ವಿಮಾನಯಾನ ಆಗಿರುವ ಹಿನ್ನೆಲೆಯಲ್ಲಿ, ಎಮರ್ಜೆನ್ಸಿ ಎಕ್ಸಿಟ್​ ಹೆಸರಿನಲ್ಲಿ ಎಲಿಮಿನೇಷನ್​ ನಡೆಯುತ್ತಿದೆ. ಈ ವಾರದ ಆರಂಭದಲ್ಲೇ 'ಎಮರ್ಜೆನ್ಸಿ ಎಕ್ಸಿಟ್' ಟ್ವಿಸ್ಟ್ ಎಂದು ಇದಾಗಲೇ ಸುದೀಪ್​ ಅವರು ಘೋಷಣೆ ಮಾಡಲಾಗಿತ್ತು. ಅದೇ ಟ್ವಿಸ್ಟ್‌ ಅಡಿಯಲ್ಲಿ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತಿದ್ದು, ಯಾರು ಹೊರಕ್ಕೆ ಹೋಗಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

26
ಎಲ್ಲರ ಕಣ್ಣಲ್ಲೂ ನೀರು

ಇದರ ಪ್ರಮೋ ರಿಲೀಸ್ ಮಾಡಲಾಗಿದ್ದು, ಬಹುತೇಕ ಎಲ್ಲಾ ಸ್ಪರ್ಧಿಗಳೂ ಅಳುವುದನ್ನು ನೋಡಬಹುದು. ಗದ್ದಲ, ಗಲಾಟೆ ನಡುವೆ ಈಗ ಬಿಗ್​ಬಾಸ್​ ಮನೆಯಲ್ಲಿ ಅಳುವಿನ ವಾತಾವರಣ. ಆದರೆ ಈ ವಾರ ಮಿಡ್​ವೀಕ್​​ ಎಲಿಮಿನೇಷನ್​​ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಎಕ್ಸಿಟ್​ ಮತ್ತು ಎಮರ್ಜೆನ್ಸಿ ಎಕ್ಸಿಟ್​​ನಿಂದಾಗಿ ಮನೆಯಲ್ಲಿ ಬೇಸರದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಜಗ್ಗಿ, ಗಗನ್​ ಮತ್ತು ತಾಂಡವ್​​​ ಸಿಕ್ಕಾಪಟ್ಟೆ ಅತ್ತಿದ್ದಾರೆ.

36
ಒಬ್ಬರು ಔಟ್​

ಸದ್ಯಕ್ಕೆ 'ಎಮರ್ಜೆನ್ಸಿ ಎಕ್ಸಿಟ್‌'ನಲ್ಲಿ ಒಬ್ಬರು ಔಟ್ ಆಗಿರುವುದು ಗ್ಯಾರೆಂಟಿ. ವಿನ್ನರ್‌ ರೇಸ್‌ನಲ್ಲಿದ್ದ ಓರ್ವ ಕ್ಯಾಂಡಿಡೇಟ್‌ ಎಲಿಮಿನೇಟ್ ಆಗಿರುವುದು ಖಚಿತ. ಆದರೆ ಆ ಸ್ಪರ್ಧಿ ಯಾರು ಅನ್ನೋದು ಇನ್ನೂ ಗೌಪ್ಯವಾಗಿದೆ.

46
ಬಹುತೇಕ ಮಂದಿ ಭಾವುಕ

ಸದ್ಯ ಬಿಟ್ಟಿರುವ ಪ್ರೊಮೋ ಪ್ರಕಾರ, ಪ್ರೋಮೋದಲ್ಲಿ ಪ್ರಸಾರವಾಗಿರುವಂತೆ, ಎಲಿಮಿನೇಟ್​ ತೂಗುಗತ್ತಿಯಲ್ಲಿ ತಾಂಡವ್​​, ಸೌಂದರ್ಯ, ಜಗದೀಶ್, ಲಿಖಿತ್​ ಇದ್ದಾರೆ. ಅವರಿಗೆ ಕೊನೆಯದಾಗಿ ತಮ್ಮ ಮನದಾಳದ ಮಾತನ್ನು, ನೋವನ್ನು ಸ್ಪರ್ಧಿಗಳು ಬಾಕ್ಸಿಂಗ್ ಬ್ಯಾಗ್ ಬಳಿ ನಿಂತು ಸ್ಪರ್ಧಿಗಳ ಫೋಟೋ ಅಂಟಿಸಿ ಅದಕ್ಕೆ ಹೊಡೆದು ಮನಸ್ಸಿನ ಭಾವನೆಗಳನ್ನು ತೆರೆದಿಡುವ ಟಾಸ್ಕ್​ ಅನ್ನು ಬಿಗ್​ಬಾಸ್​ ನೀಡಿದ್ದಾರೆ.

56
ತಾಂಡವ್​ ಏನಂದ್ರು?

ಈ ವೇಳೆ ತಾಂಡವ್​ ಮಾತನಾಡಲಾಗುತ್ತಿಲ್ಲ ಎಂದು ಬಾಕ್ಸಿಂಗ್​ ಬ್ಯಾಗ್​ಗೆ ಹೊಡೆದಾಗ ಗಗನ್​ ಚಿನ್ನಪ್ಪ ಇತ್ತ ಕಣ್ಣೀರು ಹರಿಸಿದ್ದು, ಇನ್ನೂ ಜಗದೀಶ್​ ನನಗೆ ಅಂತ ಯಾರು ಸಹ ಇಲ್ಲ ಆದರೂ ಇಲ್ಲಿಯವರೆಗೂ ಬಂದಿದ್ದೇನೆ ಎಂದು ಗೋಗೆರೆದಿದ್ದಾರೆ.

66
ಯಾರ ಪಯಣ ಕೊನೆ?

ಒಟ್ಟಾರೆಯಾಗಿ ಸ್ಪರ್ಧಿಗಳೆಲ್ಲರು ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಈ ಪ್ರೋಮೋದಲ್ಲಿ ಕಂಡುಬಂದಿದೆ. ಅದಾದ ನಂತರ ಸ್ಪರ್ಧಿಗಳಿಗೆ ಲಕ್ಕಿ ಲಾಕೆಟ್‌ಗಳನ್ನು ಕಳುಹಿಸಿ ಕೊಡಲಾಗಿದೆ. ಇದರಲ್ಲಿ ಮನೆಯಲ್ಲಿ ಯಾರ ಪಯಣ ಕೊನೆಗೊಳ್ಳಲಿದೆ ಎಂಬುದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories